ಮುಗಿಲ್ ಪೇಟೆ ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ ಜೋಡಿಹಕ್ಕಿ ಸೀರಿಯಲ್ ನಟ ತಾಂಡವ್‌ರಾಮ್!

By Sathish Kumar KH  |  First Published Nov 19, 2024, 12:49 PM IST

ಕನ್ನಡ ಕಿರುತೆರೆಯ ನಟ ತಾಂಡವ್ ರಾಮ್, ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ. ಸಿನಿಮಾ ನಿರ್ಮಾಣ ವಿಚಾರದಲ್ಲಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.


ಬೆಂಗಳೂರು (ನ.19): ಕನ್ನಡ ಕಿರುತೆರೆಯಲ್ಲಿ ಜೋಡಿಹಕ್ಕಿ ಹಾಗೂ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ನಟಿಸಿದ್ದ ನಟ ತಾಂಡವ್ ರಾಮ್ ಅವರು ಇದೀಗ ಸಿನಿಮಾದಲ್ಲಿ ಹೀರೋ ಆಗಿದ್ದರು. ಆದರೆ, ಇದೀಗ ಅವರು ನಟಿಸುತ್ತಿದ್ದ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿದ ಬೆನ್ನಲ್ಲಿಯೇ ನಿರ್ದೇಶಕರ ಮೇಲೆ ಲೈಸೆನ್ಸ್ಡ್ ಗನ್‌ನಿಂದ ಶೂಟ್ ಮಾಡಿ ಕೊಲೆ ಯತ್ನ ಮಾಡಿದ್ದು, ಪೊಲೀಸರು ನಟ ತಾಂಡವ್ ರಾಮ್‌ನನ್ನು ಬಂಧಿಸಿದ್ದಾರೆ.

ಸಿನಿಮಾ ಹಾಗೂ ಸಿರಿಯಲ್ ನಟನಿಂದ ನಿರ್ದೇಶಕನಿಗೆ ಗುಂಡು ಹಾರಿಸಿ ಕೊಲೆಗೆ ಯತ್ನ ಮಾಡಿದ್ದಾರೆ. ನಟ ತಾಂಡವ್ ರಾಮ್ ಅವರು ಮುಗಿಲ್‌ ಪೇಟೆ ಸಿನಿಮಾ ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ್ದಾರೆ. ಈ ಘಟನೆ ಬೆಂಗಳೂರಿನ ಚಂದ್ರಾ ಲೇಔಟನ್ ನಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್ ಬಳಿಯ ಬಾಪೂಜಿ ಲೇಔಟ್‌ನಲ್ಲಿ ನಡೆದಿದೆ. ಲೆಸೆನ್ಸ್ ಗನ್ ತೋರಿಸಿ ಬೆದರಿಕೆ ಹಾಕಿದ್ದ ತಾಂಡವ್ ರಾಮ್, ಬಳಿಕ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ, ಜಗಳದ ವೇಳೆ ಅದೃಷ್ಟವಶಾತ್ ಗನ್ ನಿಂದ ಹೊರಟ ಬುಲೆಟ್ ಡೈರೆಕ್ಟರ್ ದೇಹಕ್ಕೆ ತಗುಲದೆ ಗೋಡೆಗೆ ಬಿದ್ದಿದೆ. ಇನ್ನು ಸಿನಿಮಾ ಅರ್ಧಕ್ಕೆ ನಿಲ್ಲಿದ ಕಾರಣಕ್ಕೆ ಗಲಾಟೆ ಮಾಡಿಕೊಂಡು ಕೊಲೆ ಯತ್ನ ಮಾಡಿದ್ದರಿಂದ ಚಂದ್ರ ಲೇಔಟ್ ಪೊಲೀಸರು ಆರೋಪಿ ತಾಂಡವ ರಾಮ್‌ನನ್ನು ಅರೆಸ್ಟ್ ಮಾಡಿದ್ದಾರೆ.

Tap to resize

Latest Videos

undefined

ಯುವ ನಾಯಕ ನಟ ತಾಂಡವ ರಾಮ್  ಒಂದು ಕತೆ ಹೇಳಲ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ, ಕನ್ನಡ ಕಿರುತೆರೆಯ ಪ್ರಸಿದ್ಧ ಧಾರಾವಾಹಿಗಳಾದ ಜೋಡಿಹಕ್ಕಿ ಹಾಗೂ ಭೂಮಿಗೆ ಬಂದ ಭಗವಂತ ಧಾರವಾಹಿಯಲ್ಲಿ ನಟಿಸಿದ್ದಾರೆ. ಇದೀಗ ನಟ ತಾಂಡವರಾಮ್  ನಿರ್ದೇಶಕ ಭರತ್ ಜೊತೆಗೆ ಸಿನಿಮಾ ಮಾಡುತ್ತಿದ್ದರು. ಆದರೆ, ಸಿನಿಮಾ ಅರ್ಧಕ್ಕೆ ನಿಂತಿತ್ತು.  ನಿನ್ನೆ ಸಿನಿಮಾ ವಿಚಾರವಾಗಿ ಚಂದ್ರಾಲೇಔಟ್ ಬಳಿಯ ನಿರ್ಮಾಪಕ ಕುಮಾರಸ್ವಾಮಿ ರೂಮಿನಲ್ಲಿ ಭರತ್ ಮತ್ತು ತಾಂಡವರಾಮ್ ಮಾತನಾಡಲು ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ತಾಂಡವರಾಮ್ ಭರತ್ ಮೇಲೆ ಫೈರಿಂಗ್ ಮಾಡಿದ್ದಾನೆ. ಆಗ ಕೋಣೆಯ ಆರ್.ಸಿ.ಸಿ ಮೇಲಿನ ಭಾಗಕ್ಕೆ ಗುಂಡು ಬಿದ್ದಿದೆ.ಕೂಡಲೆ ಭರತ್ ಈ ಬಗ್ಗೆ ಚಂದ್ರಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಾಂಡವರಾಮ್‌ನನ್ನು ಬಂಧಿಸಿದ್ದಾರೆ. ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ನಟ ಹಾಗೂ ನಿರ್ದೇಶಕರ ಜಗಳವಾಗಿದೆ. ಈ ವೇಳೆ ಒಬ್ಬ ನಟ ಲೆಸೆನ್ಸ್ ಗನ್ ನಿಂದ ಫೈರ್ ಮಾಡಿದ್ದಾನೆ. ಉದ್ದೇಶ ಪೂರ್ವಕವಾಗಿಯೇ ಫೈರಿಂಗ್ ಮಾಡಿದ್ದಾನೆ. ಹೀಗಾಗಿ, ಚಂದ್ರಲೇಔಟ್ ಠಾಣೆಯಲ್ಲಿ ಆ್ಯಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ನಟ ತಾಂಡಾವ್ ರಾಮ್ ಬಂಧನ ಮಾಡಲಾಗಿದೆ.
- ಬಿ. ದಯಾನಂದ, ಬೆಂಗಳೂರು ನಗರ ಪೊಲೀಸ್ ಕಮಿಷನರ್

ತಾಂಡಾವರಾಮ್ ಹಾಗೂ ನಿರ್ದೇಶಕ ಭರತ್ ಗೆ ಹಲವು ವರ್ಷಗಳ ಪರಿಚಯ ಇತ್ತು. ಮೊದಲು ಸಿನಿಮಾ ಮಾಡುವುದಾಗಿ ತಾಂಡಾವರಾಮ್‌ನಿಂದ ನಿರ್ದೇಶಕ ಭರತ್ ಹಂತ ಹಂತವಾಗಿ ಹಣ ಪಡೆದಿದ್ದನು. ನಟ ತಾಂಡವ್‌ರಾಮ್ ಒಂದು ಬಾರಿ 2 ಲಕ್ಷ ಹಣ ನೀಡಿದ್ದರು. ಮತ್ತೊಂದು ಬಾರಿ 5 ಲಕ್ಷ ರೂ. ನೀಡಿದ್ದರು. ಇನ್ನು ಸಿನಿಮಾ ಆರಂಭ ಮಾಡುವುದಾಗಿ ಎಲ್ಲ ಸಿದ್ಧತೆ ಮಾಡಿಕೊಂಡು, ನಾಯಕನಿಂದ ಹಣವನ್ನೂ ಪಡೆದು ಇದೀಗ ನಿರ್ದೇಶಕ ಭರತ್ ಸಿನಿಮಾ ಮಾಡಲ್ಲ ಎಂದಿದ್ದನು. ಬಳಿಕ ಇಬ್ಬರ ನಡುವೆ ಕಿತ್ತಾಟ ಸ್ಟಾರ್ಟ್ ಆಗಿತ್ತು. ಆಗ ನಿರ್ದೇಶಕ ಭರತ್ ನನಗೆ ಹಾಸನದ ನಿರ್ಮಾಪಕ ಕುಮಾರಸ್ವಾಮಿ ಸಿಕ್ಕಿದ್ದಾರೆ. ನಿರ್ಮಾಪಕ ಕುಮಾರಸ್ವಾಮಿ 2 ಕೋಟಿ ರೂ.ವರೆಗೂ ಹಣ ಹೂಡಿಕೆ ಮಾಡುತ್ತಾರೆ. ನನಗೆ ನಿನ್ನ ಅವಶ್ಯಕತೆ ಇಲ್ಲ. ನಿನಗೆ ಯಾವುದೇ ಸಿನಿಮಾ ಕೂಡ ನಾನು ಮಾಡಲ್ಲ ಎಂದು ಹೇಳಿದ್ದಾರೆ.

ಆಗ, ನಿರ್ಮಾಪಕ ಕುಮಾರಸ್ವಾಮಿ ರೂಮಿನಲ್ಲಿ ನನ್ನ 10 ಲಕ್ಷ ರೂ. ಹಣ ನನಗೆ ವಾಪಸ್ ಕೊಡು ಎಂದು ನಟ ತಾಂಡವ್ ರಾಮ್ ಕೇಳಿದ್ದಾನೆ. ಆಗ ನಿನ್ನ ವಾಪಸ್ ಹಣ ಕೊಡಲ್ಲ ಎಂದು ನಿರ್ದೇಶಕ ಭರತ್ ಹೇಳಿದ್ದಾರೆ. ಈ ವೇಳೆ ಕುಪಿತಗೊಂಡು ನಟ ತಾಂಡಾವ್ ರಾಮ್ ನಿರ್ದೇಶನ ಭರತ್ ಮೇಲೆ ಫೈರಿಂಗ್ ಮಾಡಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.

click me!