ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮಹಿಳಾ ಸ್ಪರ್ಧಿಗಳು ರೆಡಿಯಾಗುತ್ತಿರುವ ಫೋಟೋ ಲೀಕ್; ಆತಂಕಗೊಂಡ ಬಿಗ್ ಬಾಸ್ ಫಾಲೋವರ್ಸ್!

First Published | Nov 19, 2024, 12:56 PM IST

ವೈರಲ್ ಅಯ್ತು ಬಿಗ್ ಬಾಸ್ ಸುಂದರಿಯರ ಡ್ರೆಸ್ಸಿಂಗ್ ರೂಮ್ ಫೋಟೋಗಳು. ಎಷ್ಟು ಸುಲಭವಾಗಿ ಮೇಕಪ್ ಮಾಡಿಕೊಳ್ಳುತ್ತಾರೆ ನೋಡಿ...........

ಬಿಗ್ ಬಾಸ್ ಸೀಸನ್ 11ರಲ್ಲಿ ಒಟ್ಟು 9 ಮಹಿಳಾ ಸ್ಪರ್ಧಿಗಳು ಇದ್ದರು. ಅವರಲ್ಲಿ ನಾಲ್ಕು ಮಂದಿ ಎಲಿಮಿನೇಟ್ ಆಗಿದ್ದಾರೆ. ಅವರ ಸಮಕ್ಕೆ ಟಫ್‌ ಫೈಟ್‌ ಕೊಡಲು ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿದೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವುದು ಭವ್ಯಾ ಗೌಡ, ಚೈತ್ರಾ ಕುಂದಾಪುರ, ಐಶ್ವರ್ಯ ಸಿಂಧೋಗಿ, ಗೌತಮಿ ಜಾದವ್, ಮೋಕ್ಷಿತಾ ರೈ. ಎಲಿಮಿನೇಟ್ ಆಗಿರುವವರು ಹಂಸಾ ಪ್ರತಾಪ್, ಯಮುನಾ ಶ್ರೀನಿಧಿ, ಮಾಸನಾ ತುಕಾಲಿ ಸಂತೋಶ್ ಮತ್ತು ಅನುಷಾ ರೈ. 

Tap to resize

 ಬಿಗ್ ಬಾಸ್ ಮನೆಯೊಳಗೆ ಮೇಕಪ್ ರೂಮ್‌ ಇರುತ್ತದೆ ಹಾಗೂ ಸ್ನಾನ ಮಾಡುವ ಜಾಗದಲ್ಲಿ ಡ್ರೆಸ್ಸಿಂಗ್ ರೂಮ್‌ ಇದೆ. ಅಲ್ಲಿ ಡ್ರೆಸ್ ಹಾಕಿಕೊಂಡು ಬಂದು ಇಲ್ಲಿ ಮೇಕಪ್ ಮಾಡಿಕೊಳ್ಳಬೇಕು. 

ಹೆಣ್ಣು ಮಕ್ಕಳು ಹೆಚ್ಚಾಗಿ ಸಮಯ ಕಳೆಯುವುದು ಕನ್ನಡಿಯ ಮುಂದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲಿ ನೋಡಿದರೂ ಕನ್ನಡಿ ಕಾಣಿಸುತ್ತದೆ...ಆದರೆ ಹೆಚ್ಚು ಸಮಯ ಕಳೆಯುವುದು ಮೇಕಪ್‌/ಪೌಡರ್‌ ರೂಮ್‌ನಲ್ಲಿ.

ಸಾಮಾನ್ಯ ದಿನಗಳಲ್ಲಿ ಕನ್ನಡಿ ಇಲ್ಲದೆ ಮೇಕಪ್ ಮಾಡಿಕೊಂಡು ಬಿಡುತ್ತಾರೆ ಆದರೆ ವೀಕೆಂಡ್ ವಿತ್ ಕಿಚ್ಚ ಸುದೀಪ ಎಪಿಸೋಡ್‌ ನಡೆಯುವಾಗ ಹೆಣ್ಣು ಮಕ್ಕಳು ಮಾತ್ರವಲ್ಲ ಪುರುಷರು ಕೂಡ ಕನ್ನಡಿ ಮುಂದೆ ನಿಲ್ಲುತ್ತಾರೆ.

ಪ್ರತಿಯೊಬ್ಬರು ವಿಭಿನ್ನವಾಗಿ ಡ್ರೆಸ್ ಆಗುತ್ತಾರೆ. ಚೈತ್ರಾ ಕುಂದಾಪುರ ಸದಾ ಟ್ರೆಡಿಷನಲ್‌ ಲುಕ್‌ ಆಯ್ಕೆ ಮಾಡಿಕೊಳ್ಳುತ್ತಾರೆ..ಸೀರೆ ಸೆಲ್ವಾರ್‌ನಲ್ಲಿ ಮಿಂಚುತ್ತಾರೆ. ತಪ್ಪದೆ ಹಣೆಗೆ ಕುಂಕುಮ ಇಡುತ್ತಾರೆ. ಇನ್ನು ಭವ್ಯಾ ಗೌಡಿ ಕೆಲವೊಮ್ಮೆ ವೆಸ್ಟ್ರನ್‌ ಲುಕ್‌ನಲ್ಲಿದ್ದರೆ ಇನ್ನೂ ಕೆಲವೊಮ್ಮೆ ಟ್ರೆಡಿಷನಲ್‌ ಲುಕ್‌ನಲ್ಲಿ ಇರುತ್ತಾರೆ.

 ಗೌತಮಿ ಮತ್ತು ಮೋಕ್ಷಿತಾ ರೈ ತುಂಬಾ ಸಟಲ್ ಆಗಿ ಮೇಕಪ್ ಮಾಡಿಕೊಳ್ಳುತ್ತಾರೆ. ವೀಕೆಂಡ್‌ ಮಾತ್ರ ಗ್ರ್ಯಾಂಡ್ ಡ್ರೆಸ್ ಧರಿಸುವ ಇವರಿಬ್ಬರು ಪ್ರತಿನಿತ್ಯ ತುಂಬಾ ಕಂಫರ್ಟ್ ನೀಡುವ ಕಾಟನ್ ಅಥವಾ ಲೂಸ್‌ ಡ್ರೆಸ್‌ಗಳನ್ನು ಧರಿಸುತ್ತಾರೆ. 

ಇರುವವರಲ್ಲಿ ಸ್ವಲ್ಪ ಮೇಕಪ್ ಮತ್ತು ಸ್ಟೈಲಿಂಗ್‌ಗೆ ಪ್ರಾಮುಖ್ಯತೆ ನೀಡುವುದು ಐಶ್ವರ್ಯ ಸಿಂದೋಗಿ ಮತ್ತು ಅನುಷಾ ರೈ. ಮಾಸನಾ ಮನೆ ಹುಡುಗಿ ರೀತಿ ಇರುತ್ತಿದ್ದರು. ಇನ್ನು ಹಂಸಾ ಆನ್‌ಸ್ಕ್ರೀನ್‌ ಖಡಕ್ ವಿಲನ್ ಆಗಿದ್ದರೂ ತೀರಾ ತೀರಾ ಸೈಲೆಂಟ್ ಆಂಡ್ ಸಿಂಪಲ್. 

Latest Videos

click me!