ಮೌಖಿಕ ಸಂಭೋಗದ ಸಮಯದಲ್ಲಿ ಸ್ವಚ್ಛತೆ ಅತ್ಯಗತ್ಯ. ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟಲು ಮತ್ತು ಸೋಂಕುಗಳನ್ನು ತಪ್ಪಿಸಲು ಲೈಂಗಿಕ ಚಟುವಟಿಕೆಗಳ ಮೊದಲು ಮತ್ತು ನಂತರ ಖಾಸಗಿ ಅಂಗಗಳನ್ನು ಸ್ವಚ್ಛಗೊಳಿಸುವುದು ಮುಖ್ಯ.
ಪ್ರಶ್ನೆ: ನಮಗೆ ಮದುವೆಯಾಗಿ ಎರಡು ವರ್ಷವಾಗಿದೆ. ನಮ್ಮ ವಯಸ್ಸು 22- 23. ನಾವಿಬ್ಬರೂ ಲೈಂಗಿಕ ಕ್ರಿಯೆಯನ್ನು ಇಷ್ಟಪಡುತ್ತೇವೆ. ಮುಖಮೈಥುನವನ್ನು ಕೂಡ ಆನಂದಿಸುತ್ತೇವೆ. ನಾನು ಮುಖಮೈಥುನದ ಮೊದಲು ಹಾಗೂ ನಂತರ ಖಾಸಗಿ ಅಂಗವನ್ನು ಚೆನ್ನಾಗಿ ತೊಳೆದುಕೊಳ್ಳುತ್ತೇನೆ. ಆದರೆ ನನ್ನ ಗಂಡ ಅಷ್ಟಾಗಿ ಕ್ಲೀನ್ ಮಾಡಿಕೊಳ್ಳುವುದಿಲ್ಲ. ಇದು ಮುಖ್ಯವಲ್ಲವೇ? ನನ್ನ ಗಂಡನಿಗೆ ಕೆಲವು ಬುದ್ಧಿಮಾತು ಹೇಳಬಹುದೇ?
ಡಾಕ್ಟರ್ ಉತ್ತರ: ನೀವಿಬ್ಬರೂ ಲೈಂಗಿಕ ಕ್ರಿಯೆ ಹಾಗೂ ಓರಲ್ ಸೆಕ್ಸ್ ಅನ್ನು ಆನಂದಿಸುತ್ತೀರಿ ಎಂಬುದು ತಿಳಿದು ಸಂತೋಷವಾಯಿತು. ದಂಪತಿಗಳಿಬ್ಬರಲ್ಲೂ ವಿಶ್ವಾಸ ಹಾಗೂ ಪ್ರೀತಿ ಇದ್ದಾಗ ಮಾತ್ರ ಮುಖಮೈಥುನ ಸಾಧ್ಯ.
ಆದರೆ ಮೌಖಿಕ ಸಂಭೋಗದ ಸಮಯದಲ್ಲಿ ಲೈಂಗಿಕವಾಗಿ ಹರಡುವ ರೋಗಗಳ ಅಪಾಯ ತುಂಬಾ ಹೆಚ್ಚು. ಹಲವು ಸಂಗಾತಿಗಳನ್ನು ಹೊಂದಿ, ಹಲವರ ಜೊತೆಗೆ ಸೆಕ್ಸ್ ಮಾಡುವವರಾದಲ್ಲಿ ಇದು ಇನ್ನಷ್ಟು ಹೆಚ್ಚು. ನಿಮ್ಮಿಬ್ಬರ ವಿಷಯದಲ್ಲಿ ಹೀಗಿಲ್ಲ ಎಂದುಕೊಳ್ಳುತ್ತೇನೆ. ಆದರೂ ಸ್ವಚ್ಛತೆ ತುಂಬಾ ಮುಖ್ಯ. ಯಾಕೆ ಅಂತ ನೋಡೋಣ.
ಯಾವುದೇ ಲೈಂಗಿಕ ಚಟುವಟಿಕೆಯ ಮೊದಲು, ನೀವು ಸ್ವಚ್ಛತೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಏಕೆಂದರೆ ಖಾಸಗಿ ಅಂಗಗಳಲ್ಲಿ ಶಿಲೀಂಧ್ರ ಬೆಳೆಯುವ ಸಾಧ್ಯತೆ ಹೆಚ್ಚು. ಮಳೆಗಾಲದಲ್ಲಿ ಅರೆ ಒದ್ದೆ ಬಟ್ಟೆಗಳನ್ನು ಬಳಸಿದಾಗ ಇದು ಜಾಸ್ತಿ. ಇದು ಅಹಿತಕರ ವಾಸನೆಯನ್ನು ಉಂಟುಮಾಡಬಹುದು. ಸೋಂಕಿನ ಅಪಾಯ ಹೆಚ್ಚು.
ಮೌಖಿಕ ಸಂಭೋಗಕ್ಕೆ ಮೊದಲು ನಿಮ್ಮ ಯೋನಿ- ಶಿಶ್ನಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ. ಅಥವಾ ಇನ್ನೂ ಉತ್ತಮವಾದ, ಸೂಕ್ಷ್ಮ ಚರ್ಮಕ್ಕಾಗಿ ವಿಶೇಷವಾಗಿ ತಯಾರಿಸಿದ ಸೋಪ್ ಬಳಸಬಹುದು. ವೃಷಣಗಳನ್ನು ಸ್ವಚ್ಛಗೊಳಿಸಲು ಪುರುಷರು ಮರೆಯಬಾರದು. ಮಹಿಳೆಯರು ಯೋನಿಯ ಒಳಗೂ ಸ್ವಚ್ಛಮಾಡಿಕೊಳ್ಳಬೇಕು.
ಸುನ್ನತಿ ಮಾಡದ ಪುರುಷರಲ್ಲಿ ಶಿಶ್ನದ ಮುಂದೊಗಲಿನಲ್ಲಿ ಬ್ಯಾಕ್ಟೀರಿಯಾ ಸಂಗ್ರಹ ಆಗುವ ಸಾಧ್ಯತೆ ಹೆಚ್ಚು. ಅಲ್ಲಿ ಅದು ಬಿಳಿಯದಾಗಿ ಕಟ್ಟಿಕೊಳ್ಳುತ್ತದೆ. ಇದು ಅಹಿತಕರ ವಾಸನೆಯನ್ನು ಉಂಟುಮಾಡುತ್ತದೆ. ಮುಂದೊಗಲನ್ನು ಹಿಂದಕ್ಕೆ ಎಳೆದು ಶಿಶ್ನದ ತುದಿಯನ್ನು ಸಾಕಷ್ಟು ಶುದ್ಧ ನೀರಿನಿಂದ ತೊಳೆಯಬೇಕು. ತೇವಾಂಶವನ್ನು ತಪ್ಪಿಸಲು ಆ ಪ್ರದೇಶವನ್ನು ಸಂಪೂರ್ಣವಾಗಿ ಒಣಗಿಸಬೇಕು. ಮಹಿಳೆಯರಲ್ಲಿ ಖಾಸಗಿ ಪ್ರದೇಶವನ್ನು ಸ್ವಚ್ಛಗೊಳಿಸಿದ ನಂತರ, ಅಲ್ಲಿ ಕೂಡ ಒಣಗಿಸಬೇಕು. ವಜೈನಾ ಕ್ಯಾಂಡಿಡಿಯಾಸಿಸ್ನಂತಹ ಸಮಸ್ಯೆಗಳನ್ನು ತಪ್ಪಿಸಲು ಇದು ಒಂದು ಕ್ರಮ.
ಮೌಖಿಕ ಸಂಭೋಗದ ನಂತರ ಅನೇಕ ಜನರು ತಮ್ಮ ಖಾಸಗಿ ಪ್ರದೇಶಗಳನ್ನು ಮತ್ತೆ ತೊಳೆಯಲು ಬಯಸುವುದಿಲ್ಲ. ಆದರೂ ಇದು ಅತ್ಯಂತ ಮುಖ್ಯ. ಮೌಖಿಕ ಸಂಭೋಗದ ನಂತರ ಮಹಿಳೆಯರು ಯಾವಾಗಲೂ ಖಾಸಗಿ ಪ್ರದೇಶವನ್ನು ಸ್ವಚ್ಛಗೊಳಿಸಲು ಮರೆಯದಿರಿ. ಬಾಯಿ ಮುಕ್ಕಳಿಸುವುದು ಓಕೆ. ಬೇಕಿದ್ದರೆ ಹಲ್ಲುಜ್ಜಿಕೊಳ್ಲಬಹುದು. ಮೌತ್‌ವಾಶ್ ಬಳಸಬಹುದು.
ಈ 5 ರಾಶಿಯ ಪುರುಷರಿಗೆ ಸುಂದರ ಹೆಂಡತಿಯಿದ್ರೂ ಅನೈತಿಕ ಸಂಬಂಧದ ಆಸೆ!
ಮುಖರತಿಯ ನಂತರ ಜನನಾಂಗದ ಪ್ರದೇಶವನ್ನು ಸ್ವಚ್ಛಗೊಳಿಸುವುದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ನೀವು ಲೂಬ್ರಿಕಂಟ್‌ಗಳು, ಎಣ್ಣೆಗಳು ಅಥವಾ ಕಾಂಡೋಮ್‌ಗಳನ್ನು ಬಳಸಿದ್ದರೆ. ಸಿಸ್ಟೈಟಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಮುಖ್ಯವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದ್ದು, ಮುಖಸಂಭೋಗದ ನಂತರ ನಿಕಟ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಇದನ್ನು ತಪ್ಪಿಸಬಹುದು.
ಖಾಸಗಿ ಅಂಗ ತೇವವಾಗಿರಬಾರದು. ನೀವು ಮನೆಯ ಹೊರಗೆ ಸೆಕ್ಸ್ ಅನುಭವ ಹೊಂದಿದರೆ, ಶೌಚಾಲಯವನ್ನು ಬಳಸಲು ಸಾಧ್ಯವಾಗದಿದ್ದರೆ, ಟಿಶ್ಯೂ ಅಥವಾ ಬಿಸಾಡಬಹುದಾದ ಒರೆಸುವ ಬಟ್ಟೆಗಳನ್ನು ಬಳಸಬಹುದು.
Chanakya Niti: ಹೆಂಡತಿ ಚೆಲುವೆಯಾಗಿದ್ದರೆ ಗಂಡ ಈ ಸಂಗತಿಗಳನ್ನು ಎಂದೂ ಮರೆಯಬಾರದು!