ಕೊಬ್ಬು ತಿನ್ನುವುದು, ಕಡಿಮೆ ನಿದ್ರೆ, ಬೊಜ್ಜು, ಸ್ಮೋಕಿಂಗ್ ಮತ್ತು ಮದ್ಯಪಾನ ಹೆಚ್ಚಿನ ಕೊಲೆಸ್ಟ್ರಾಲ್ ಗೆ(Cholesterol) ಕಾರಣಗಳಾಗಿವೆ. ಕೆಲವೊಮ್ಮೆ ಇದು ಆನುವಂಶಿಕವಾಗಿರಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವುದೇ ರೋಗಲಕ್ಷಣವಿರೋದಿಲ್ಲ, ಅದಕ್ಕಾಗಿಯೇ ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತೆ. ಆದರೆ ಸಾಕಷ್ಟು ಗಮನ ಹರಿಸಿದಾಗ, ಅದರ ಕೆಲವು ರೋಗಲಕ್ಷಣ ಕಾಲುಗಳಲ್ಲಿ ಕಾಣಿಸಿಕೊಳ್ಳುತ್ತವೆ, ಇದನ್ನು ನೀವು ನೆನಪಿಟ್ಟುಕೊಳ್ಳೋದು ಮುಖ್ಯ.