ಚರ್ಚೆಗೆ ಬಂದ್ರೆ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಈ ಪ್ರಶ್ನೆಗಳನ್ನ ಕೇಳ್ತಾರೆ!

Published : May 19, 2024, 03:21 PM IST
ಚರ್ಚೆಗೆ ಬಂದ್ರೆ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಈ ಪ್ರಶ್ನೆಗಳನ್ನ ಕೇಳ್ತಾರೆ!

ಸಾರಾಂಶ

ಲೋಕಸಭಾ ಚುನಾವಣೆ ಅಖಾಡದಲ್ಲಿ ಏಟು-ಎದಿರೇಟು ಜೋರಾಗಿದೆ. ಪ್ರಧಾನಿಗಳನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿರುವ ರಾಹುಲ್ ಗಾಂಧಿ ಕೆಲ ಪ್ರಶ್ನೆಗಳನ್ನು ಕೇಳುತ್ತಾರೆ ಅಂತೆ.

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆ ಅಬ್ಬರದ ಪ್ರಚಾರ ನಡೆಯುತ್ತಿದ್ದು, ರಾಜಕೀಯ ನಾಯಕರ ವಾಕ್ಸಮರ ಜೋರಾಗಿದೆ. ನಾನು ಚರ್ಚೆಗೆ ಸಿದ್ಧ, ಪ್ರಧಾನಿ ಮೋದಿ ಬರ್ತಾರಾ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಚರ್ಚೆಗೆ ಬರುವಂತೆ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ. 
 
ಬುದ್ದಿಜೀವಿಗಳು ಬರೆದ ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಮತ್ತು ಮೋದಿ ಬಹಿರಂಗವಾಗಿ ಚರ್ಚೆ ನಡೆಸಬೇಕು ಎಂದಿದ್ದಾರೆ. ಈ ಕುರಿತು ಪ್ರಧಾನಿಗಳಿಗೂ ಪತ್ರ ಬರೆಯಲಾಗಿದೆ. ನಾನು ಚರ್ಚೆಗೆ ಸಿದ್ಧನಿದ್ದೇನೆ. ಎಲ್ಲಿ ಬೇಕಾದ್ರೂ ಚರ್ಚೆ ನಡೆಸಬಹುದು. ನಾನು ಬರಲು ಸಿದ್ಧನಿದ್ದೇನೆ. ಆದರೆ ಮೋದಿ ಬರ್ತಾರಾ ಎಂದು ಜನರನ್ನು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.

ರಾಹುಲ್ ಗಾಂಧಿ ಮೊದಲ ಪ್ರಶ್ನೆ ಏನು?

ಒಂದು ವೇಳೆ  ಮೋದಿ ಚರ್ಚಗೆ ಬಂದ್ರೆ ಅದಾನಿಗೂ ನಿಮಗೂ ಏನು ಸಂಬಂಧ ಅನ್ನೋದು ನನ್ನ ಮೊದಲ ಪ್ರಶ್ನೆ ಆಗಿರುತ್ತದೆ. ನಂತರ ಚುನಾವಣಾ ಬಾಂಡ್ ಕುರಿತ ಪ್ರಶ್ನೆ ಇರುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದರು. 

ಕೊರೊನಾದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಚಪ್ಪಾಳೆ ತಟ್ಟುವಂತೆ ಹೇಳಿದ್ದು ಯಾಕೆ? ಚೀನಾದ ಅತಿಕ್ರಮಣ, ಅಗ್ನಿಫಥ್ ಯೋಜನೆಗಳ ಬಗ್ಗೆ ನಾನು ಪ್ರಧಾನಿ ಮೋದಿ ಅವರನ್ನು ಕೇಳುತ್ತೇನೆ. ಮೋದಿ ಉತ್ತರಿಸಲಾಗದ ಹಲವು ಪ್ರಶ್ನೆಗಳು ನನ್ನ ಬಳಿಯಲ್ಲಿವೆ ಎಂದರು.

ಎಎಪಿಗೆ ಮತ ಹಾಕುವೆ

ಕನ್ಹಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ದೆಹಲಿಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ನಾಲ್ಕರಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಹಾಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್‌ಗೆ ಮತ ಹಾಕ್ತಾರೆ. ನಾನು ಆಪ್‌ ಚಿಹ್ನೆ ಮುಂದಿನ ಬಟನ್ ಒತ್ತುವೆ ಎಂದು ರಾಹುಲ್ ಗಾಂಧಿ  ಹೇಳಿದ್ದಾರೆ.

ಮದರಸಾ ಫೋಟೋ ಕ್ಲಿಕ್ಕಿಸುತ್ತಿದ್ದ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ

ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಪರವಾಗಿರುವ ಉದ್ಯಮಿಗಳು ಕಾಂಗ್ರೆಸ್‌ಗೆ ಟೆಂಪೋದಲ್ಲಿ ಹಣ ಕಳುಹಿಸಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ನಿಮ್ಮ ಏಜೆನ್ಸಿಗಳಿಂದ ಏಕೆ ತನಿಖೆ ನಡೆಸಬಾರದು ಎಂದು ಮತ್ತೊಂದು ಸವಾಲು ಹಾಕಿದರು.

ಪೋರ್ಶೆ ಕಾರು ಹತ್ತಿಸಿ ಇಬ್ಬರ ಕೊಂದ ಬಿಲ್ಡರ್‌ ಪುತ್ರ: ಹಿಗ್ಗಾಮುಗ್ಗಾ ಥಳಿಸಿದ ಜನ

ಪ್ರಧಾನಿ ನರೇಂದ್ರ ಮೋದಿಯವರಿಗೆ ಬೈ ಬೈ ಹೇಳುವ ಕಾಲ ಸನ್ನಿಹಿತವಾಗಿದೆ. ಇದೇ ವೇಳೆ ಸಂದರ್ಶನವೊಂದರಲ್ಲಿ ಮೋದಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದರು. ಮೋದಿಜೀ ಚಿಕ್ಕವರಿದ್ದಾಗ  ಮುಸ್ಲಿಂ ಬಾಂಧವರು ತಮ್ಮ ಮನೆಗೆ ಊಟ ಕಳುಹಿಸುತ್ತಿದ್ದರು ಎಂದು ಹೇಳಿದ್ದರು. ಆದರೆ ನೀವು ಸಸ್ಯಹಾರಿ ಅಲ್ಲವೇ ಎಂದು ರಾಹುಲ್ ಗಾಂಧಿ ಕೇಳಿದರು.

ರಾಯ್‌ಬರೇಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರೇ ನೀವು ಅದಾನಿ ಮತ್ತು ಅಂಬಾನಿ ಹೆಸರು ಯಾಕೆ ಹೇಳಲ್ಲ ಎಂದು ಕೇಳಿದ್ದೆ. ಇದಾದ ಎರಡು ದಿನಗಳ ಬಳಿಕ ಅದಾನಿ ಮತ್ತು ಅಂಬಾನಿ ಹೆಸರನ್ನು ಹೇಳಿದರು. ನಾವು ಬ್ಯಾಂಕ್ ಖಾತೆಗೆ ಟಕಾ ಟಕ್, ಟಕಾ ಟಕ್ ಅಂತ ಹಣ ಹಾಕುತ್ತೇವೆ ಎಂದು ಹೇಳಿದೆ. ಇದಾದ ಬಳಿಕ ಪ್ರಧಾನಿ ಮೋದಿ ಸಹ  ಟಕಾ ಟಕ್ ಎಂದ ಪದವನ್ನು ಬಳಸಿದರು. ಹಾಗಾಗಿ ನಾನು ನರೇಂದ್ರ ಮೋದಿ ಅವರಿಂದ  ಏನು ಬೇಕಾದರೂ ಹೇಳಿಸಬಲ್ಲೆ ಎಂದು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!