
ನವದೆಹಲಿ: ಉಗುರಿನ ಉದ್ದಕ್ಕೂ ಸಾಮಾನ್ಯವಾಗಿ ಕಾಣುವ ಬಿಳಿ ಅಥವಾ ಕೆಂಪು ಬಣ್ಣದ ಗೆರೆಗಳು ಮೂತ್ರಪಿಂಡಗಳ ಕ್ಯಾನ್ಸರ್ ಗೆಡ್ಡೆಗಳನ್ನ ಅಭಿವೃದ್ಧಿಪಡಿಸುವ ಅಪಾಯವನ್ನ ಸೂಚಿಸುತ್ತದೆ ಎಂದು ಅಧ್ಯಯನವೊಂದು ಕಂಡು ಹಿಡಿದಿದೆ. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ವಿಜ್ಞಾನಿಗಳು ಒನಿಕೊಪಪಿಲೋಮಾ ಎಂದು ಕರೆಯಲ್ಪಡುವ ಹಾನಿಕಾರಕ ಉಗುರು ಅಸಹಜತೆಯ ಉಪಸ್ಥಿತಿಯನ್ನ ಕಂಡುಹಿಡಿದಿದ್ದಾರೆ.
ಯುಎಸ್ ಮೂಲದ ಪ್ರಮಾಣೀಕೃತ ಚರ್ಮರೋಗ ತಜ್ಞ ಡಾ.ಲಿಂಡ್ಸೆ ಜುಬ್ರಿಟ್ಸ್ಕಿ ಅಪರೂಪದ ಆದರೆ ಮಾರಣಾಂತಿಕ ಚರ್ಮದ ಕ್ಯಾನ್ಸರ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಉಗುರುಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ ಎಂದು ಅನುಯಾಯಿಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿಕೊಂಡು ಪೋಸ್ಟ್ ಮಾಡಿದ್ದಾರೆ. 'ನಿಮ್ಮ ಉಗುರಿನ ಕೆಳಗೆ ಕಪ್ಪು ಬಣ್ಣದ ಉದ್ದದ ಗೆರೆಗಳಿದ್ದರೆ ಇದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು' ಎಂದು ಡಾ.ಲಿಂಡ್ಸೆ ಜುಬ್ರಿಟ್ಸ್ಕಿ ತಿಳಿಸಿದ್ದಾರೆ.
ಅಬ್ಬಬ್ಬಾ ವಿಶ್ವದ ಅತ್ಯಂತ ದುಬಾರಿ ನೇಲ್ ಪಾಲಿಶ್ ಬೆಲೆ, 3 ಮರ್ಸಿಡಿಸ್ ಕಾರಿಗಿಂತಲೂ ಹೆಚ್ಚು!
ಇದು ಅಪರೂಪದ ಅನುವಂಶಿಕ ಅಸ್ವಸ್ಥತೆಯ ರೋಗನಿರ್ಣಯಕ್ಕೆ ಕಾರಣವಾಗಬಹುದು, ಇದನ್ನು ಬಿಎಪಿ 1 ಟ್ಯೂಮರ್ ಪ್ರಿಡಿಕ್ಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಕ್ಯಾನ್ಸರ್ ಗೆಡ್ಡೆಗಳನ್ನ ಅಭಿವೃದ್ಧಿಪಡಿಸುವ ಅಪಾಯವನ್ನ ಹೆಚ್ಚಿಸುತ್ತದೆ ಎಂದು ಅವರು ಗಮನಿಸಿದರು. ಬಿಎಪಿ 1 ಜೀನ್‌ನಲ್ಲಿನ ರೂಪಾಂತರಗಳು ಸಿಂಡ್ರೋಮ್'ನ್ನ ಪ್ರೇರೇಪಿಸುತ್ತವೆ. 'ಇದು ಸಾಮಾನ್ಯವಾಗಿ ಇತರ ಕಾರ್ಯಗಳ ನಡುವೆ ಗೆಡ್ಡೆ ನಿಗ್ರಹಕವಾಗಿ ಕಾರ್ಯನಿರ್ವಹಿಸುತ್ತದೆ. ಎಂದು ಜಾಮಾ ಡರ್ಮಟಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳು ಬಹಿರಂಗಪಡಿಸಿವೆ.
ಈ ರೀತಿಯ ಮೆಲನೋಮವು ಜಾಗತಿಕವಾಗಿ ಮಾರಣಾಂತಿಕ ಮೆಲನೋಮಗಳಲ್ಲಿ 0.7% ರಿಂದ 3.5% ರಷ್ಟಿದೆ. ಗಮನಾರ್ಹವಾಗಿ, NY ಪೋಸ್ಟ್‌ನ ಪ್ರಕಾರ, ರೋಗನಿರ್ಣಯದ ಸಮಯದಲ್ಲಿ ಕ್ಯಾನ್ಸರ್‌ನ ಹಂತ ಮತ್ತು ಹರಡುವಿಕೆಯ ಮಟ್ಟವು ರೋಗಿಯ ಬದುಕುಳಿಯುವ ಸಾಧ್ಯತೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ಕಾರ್ಮಿಕನ ತಲೆ ಹೊಕ್ಕಿದ 2 ಇಂಚು ಉದ್ದದ ಮೊಳೆ : ಡ್ರಿಲ್ ಮಾಡಿ ಹೊರತೆಗೆದ ವೈದ್ಯರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.