ಕನ್ನಡ ಕಿರುತೆರೆಯಲ್ಲಿ ಹೊಸ ಸಂಚನಲನ ಮೂಡಿಸಿದ ಧಾರಾವಾಹಿ ಅಂದರೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ (Kannadathi) ಸೀರಿಯಲ್. ವಿಭಿನ್ನವಾದ ಕಥೆ, ಎಂದಿಗೂ ಹಾದಿ ತಪ್ಪದ ನಿರೂಪಣೆ, ಪ್ರತಿ ಹಂತದಲ್ಲೂ ಕುತೂಹಲ, ಎಲ್ಲೂ ಕಥೆಯನ್ನು ಎಳೆದ ಉದಾಹರಣೆಯೇ ಇಲ್ಲದೇ, ಅದ್ಭುತವಾಗಿ ಸಾಗಿದ ಧಾರಾವಾಹಿ ಕನ್ನಡತಿ.
ಕನ್ನಡತಿ ಧಾರಾವಾಹಿಯ ಕಥೆಯಂತೆ, ಅದರಲ್ಲಿನ ಪ್ರತಿಯೊಂದು ಪಾತ್ರಗಳು ಸಹ ಜನರ ಫೇವರಿಟ್ ಆಗಿದ್ದವು. ಅದರಲ್ಲೂ ಹರ್ಷ -ಭುವಿ ಮತ್ತು ಅಮ್ಮಮ್ಮನ ಪಾತ್ರ ವೀಕ್ಷಕರ ನೆಚ್ಚಿನ ಪಾತ್ರಗಳು. ಭುವಿ ಖ್ಯಾತಿಯ ರಂಜನಿ ರಾಘವನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಆದರೆ ಹರ್ಷ ಖ್ಯಾತಿಯ ಕಿರಣ್ ರಾಜ್ (Kiran Raj) ಈವಾಗ ಏನ್ ಮಾಡ್ತಿದ್ದಾರೆ?
ಕಿರಣ್ ರಾಜ್ ಕೂಡ ಸದ್ಯ ಕನ್ನಡ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕಿರಣ್ ರಾಜ್ ಅಭಿನಯದ ಎರಡೆರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಕಿರಣ್ ರಾಜ್ ಸದ್ಯ ಆಕ್ಷನ್ ಹೀರೋ (Action Hero) ಆಗಿ ಮಿಂಚುತ್ತಿದ್ದು, ತಮ್ಮ ಸಿನಿಮಾ ಬಿಡುಗಡೆಗೆ ಕಾಯ್ತಿದ್ದಾರೆ.
ಈಗಾಗಲೇ ಇನ್ನು ಕಿರಣ್ ಅಭಿನಯದ ಭರ್ಜರಿ ಗಂಡು ಸಿನಿಮಾದ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಕಿರಣ್ ತಮ್ಮ ರಾನಿ (Ronny) ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಕೂಡ ಆಕ್ಷನ್ ಸಿನಿಮಾವಾಗಿದ್ದು, ಕಿರಣ್ ರಗಡ್ ಲುಕ್ ನಲ್ಲಿ ಕಾಣಿಸಲಿದ್ದಾರೆ.
ರಾನಿ ಸಿನಿಮಾಕ್ಕಾಗಿ ಕಿರಣ್ ರಾಜ್ ತುಂಬಾನೆ ಕಲಿತಿದ್ದಾರೆ. ಥಾಯ್ಲೆಂಡ್‌ನ ಪಟ್ಟಾಯದಲ್ಲಿ ರೇಜ್ ಫೈಟ್ ಕ್ಲಬ್ ಆಯೋಜಿಸಿದ ಮುಯ್ಥಯಿ ಬಾಕ್ಸಿಂಗ್ ಪಂದ್ಯದಲ್ಲಿ ಕೂಡ ಕಿರಣ್ ಭಾಗವಹಿಸಿದ್ದರು. ಇದಕ್ಕಾಗಿ ಅವರು ತರಭೇತಿ ಸಹ ಪಡೆದಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಕಿರಣ್ ಸದ್ಯ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದು, ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಿರಣ್ ಹಿಮಾಚಲ್ ಪ್ರದೇಶ್, ಕಾಶ್ಮೀರ, ಲಡಾಕ್ ಮೊದಲಾದ ಕಡೆಗೆ ಟ್ರಾವೆಲ್ ಮಾಡಿ ಎಂಜಾಯ್ ಮಾಡ್ತಿದ್ದಾರೆ.
ಇನ್ನು ತಮ್ಮ ಡೈಲಾಗ್ ಗಳಿಂದ ಜನಪ್ರಿಯತೆ ಪಡೆದಿರುವ ಕಿರಣ್, ಜೀವನದ ಕುರಿತು ಹೇಳುವಂತೆ ಡೈಲಾಗ್ ಗೆ ಲಕ್ಷಾಂತರ ಜನರು ಫಿದಾ ಆಗಿದ್ದಾರೆ. ಡೈಲಾಗ್ ಕಿಂಗ್ ಎಂದೆ ಕಿರಣ್ ಖ್ಯಾತಿ ಪಡೆದಿದ್ದಾರೆ, ಕಿರಣ್ ಗೆ ಸೋಶಿಯಲ್ ಮೀಡಿಯಾದಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ.