ಅಂಜಲಿ ಕುಟುಂಬದ ಬೆನ್ನಿಗೆ ನಿಂತ ಹುಕ್ಕೇರಿ ಹಿರೇಮಠ; ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಬಂದ ಹಣ ಕುಟುಂಬಸ್ಥರಿಗೆ ನೀಡಿದ ಶ್ರೀಗಳು

First Published | May 19, 2024, 3:20 PM IST

ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ, ಎನ್‌ಕೌಂಟರ್ ಮಾಡುವಂತೆ ರಾಜ್ಯಾದ್ಯಂತ ಸಂಘ ಸಂಸ್ಥೆಗಳು, ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಜಲಿ ಕುಟುಂಬಸ್ಥರಿಗೆ ಗಣ್ಯರು ಆರ್ಥಿಕ ಸಹಾಯ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈ ನಡುವೆ ಹುಕ್ಕೇರಿ ಪಟ್ಟಣದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಹ ಅಂಜಲಿ ಕುಟುಂಬಸ್ಥರ ಬೆನ್ನಿಗೆ ನಿಂತಿದ್ದಾರೆ.
 

ಪ್ರತಿಭಟನೆ ಮಾಡಿ ಆಕ್ರೋಶ ಹಾಕುವವರ ಮಧ್ಯೆ ವಿನೂತನವಾಗಿ ಪ್ರತಿಭಟನೆ ಮಾಡಿ ಕುಟುಂಬಸ್ಥರ ಸಹಾಯಕ್ಕೆ ನಿಂತ ಸ್ವಾಮೀಜಿ. ಜೋಳಿಗೆ ಹಾಕಿ ಭಿಕ್ಷೆ ಬೇಡಿ ಅಂಜಲಿ ಕುಟುಂಬದಕ್ಕೆ ಸಹಾಯ ಮಾಡಲು ಮುಂದಾದ ಹಿರೇಮಠ ಶ್ರೀಗಳು.

 ದೀಕ್ಷೆ ಪಡೆದ ನೂರಾರು ವಠುಗಳಿಂದ ಸಂಪ್ರದಾಯದಂತೆ ಭಿಕ್ಷಾಟನೆ ಮಾಡಿದ ವಠುಗಳು. ಜೋಳಿಗೆ ಹಾಕಿ ಭಿಕ್ಷೆ ಬೇಡಿ ತಂದ ಹಣದಿಂದ ಅಂಜಲಿ ಕುಟುಂಬಕ್ಕೆ ನೀಡಲು ಮುಂದಾದ ಶ್ರೀಗಳು.
 

Latest Videos


ಜೋಳಿಗೆ ಹಾಕಿ ಭಿಕ್ಷೆ ಬೇಡಿದ ಒಟ್ಟು 50 ಸಾವಿರ ರೂಪಾಯಿ ಹಣವನ್ನು ಅಂಜಲಿ ಕುಟುಂಬಕ್ಕೆ ನೀಡಲು ನಿರ್ಧಾರ ಮಾಡಿದ ಶ್ರೀಗಳು. ಅಂಜಲಿ ಕುಟುಂಬ ತುಂಬಾ ಕಷ್ಟದಲ್ಲಿದೆ. ಇಂದು ರಾಜ್ಯದಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಚಂದ್ರಶೇಖರ್ ಸ್ವಾಮೀಜಿ ಅಕ್ರೋಶ ವ್ಯಕ್ತಪಡಿಸಿದರು.
 

ರಾಜ್ಯದಲ್ಲಿ ಒಂದಾದ ಬಳಿಕ ಒಂದು ಕೊಲೆಗಳು ನಡೆಯುತ್ತಲೇ ಇವೆ. ಇಂದು ಪ್ರತಿಭಟನೆಗಳು ಬೇಕು ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಸಹಾಯ ಹಸ್ತವು ಬೇಕು. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕೊಲೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಸಮಾಜಘಾತುಕರಿಂದ ಕೊಲೆಯಾದ ಅಂಜಲಿ, ನೇಹಾ ಹಿರೇಮಠ ಕುಟುಂಬಕ್ಕೆ ಸರ್ಕಾರದಿಂದ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.

click me!