ಗರ್ಭಿಣಿ ಪತ್ನಿಗಾಗಿ ವೆಜ್‌ ಆಹಾರ ಆರ್ಡರ್ ಮಾಡಿದ ವ್ಯಕ್ತಿ, ನಾನ್‌ವೆಜ್‌ ಥಾಲಿ ಡೆಲಿವರಿ ಮಾಡಿದ ಝೊಮೇಟೋ!

Published : May 19, 2024, 03:17 PM ISTUpdated : May 19, 2024, 03:22 PM IST
ಗರ್ಭಿಣಿ ಪತ್ನಿಗಾಗಿ ವೆಜ್‌ ಆಹಾರ ಆರ್ಡರ್ ಮಾಡಿದ ವ್ಯಕ್ತಿ, ನಾನ್‌ವೆಜ್‌ ಥಾಲಿ ಡೆಲಿವರಿ ಮಾಡಿದ ಝೊಮೇಟೋ!

ಸಾರಾಂಶ

ಆನ್‌ಲೈನ್‌ ಫುಡ್ ಡೆಲಿವರಿ ಆಪ್‌ಗಳು ಬಂದಾಗಿನಿಂದ ಅದೆಷ್ಟೋ ಮಂದಿಗೆ ಅನುಕೂಲವಾಗಿದೆ. ಹಸಿವಾದಾಗ, ಅಡುಗೆ ಮಾಡಲು ಸಮಯವಿಲ್ಲದಿದ್ದಾಗ ಥಟ್ಟಂತ ಆರ್ಡರ್‌ ಮಾಡಿದರೆ ಫುಡ್ ಮನೆ ಬಾಗಿಲಿಗೆ ಬಂದು ಬಿಡುತ್ತದೆ. ಆದರೆ ಈ ಆಪ್‌ಗಳಿಂದ ಕೆಲವೊಮ್ಮೆ ಎಡವಟ್ಟು ಸಹ ಆಗೋದಿದೆ. ಅಂಥದ್ದೇ ಘಟನೆಯೊಂದು ಇತ್ತೀಚಿಗೆ ನಡೆದಿದೆ.

ಆನ್‌ಲೈನ್‌ ಫುಡ್ ಡೆಲಿವರಿ ಆಪ್‌ಗಳು ಬಂದಾಗಿನಿಂದ ಅದೆಷ್ಟೋ ಮಂದಿಗೆ ಅನುಕೂಲವಾಗಿದೆ. ಹಸಿವಾದಾಗ, ಅಡುಗೆ ಮಾಡಲು ಸಮಯವಿಲ್ಲದಿದ್ದಾಗ ಥಟ್ಟಂತ ಆರ್ಡರ್‌ ಮಾಡಿದರೆ ಫುಡ್ ಮನೆ ಬಾಗಿಲಿಗೆ ಬಂದು ಬಿಡುತ್ತದೆ. ಆದರೆ ಈ ಆಪ್‌ಗಳಿಂದ ಕೆಲವೊಮ್ಮೆ ಎಡವಟ್ಟು ಸಹ ಆಗೋದಿದೆ. ಅಂಥದ್ದೇ ಘಟನೆಯೊಂದು ಇತ್ತೀಚಿಗೆ ನಡೆದಿದೆ. ಝೊಮೇಟೋ ಗ್ರಾಹಕರು ತಾವು ಆರ್ಡರ್ ಮಾಡಿದ ವೆಜ್‌ ಥಾಲಿಯ ಬದಲಿಗೆ ತಮಗೆ ಚಿಕನ್ ಥಾಲಿ ಡೆಲಿವರಿ ಮಾಡಿರುವ ಬಗ್ಗೆ ಆಕ್ರೋಶ ವ್ತಕ್ತಪಡಿಸಿದ್ದಾರೆ. 

ಶೋಭಿತ್ ಸಿದ್ಧಾರ್ಥ್, Xನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. 'ನಾನು ಪನೀರ್ ಥಾಲಿಗಾಗಿ ಝೊಮೇಟೋದಲ್ಲಿ ಆರ್ಡರ್ ಮಾಡಿದ್ದೆ. ಆದರೆ ಅವರು ಚಿಕನ್‌ ಥಾಲಿಯನ್ನು ತಂದು ಕೊಟ್ಟರು' ಎಂದು ಶೋಭಿತ್ ಫೋಟೋದೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರೆ ವ್ಹಾ..ಇನ್ಮುಂದೆ ಡ್ರೋನ್‌ ಮೂಲಕ ಮನೆ ಬಾಗಿಲಿಗೆ ಬರಲಿದೆ ಪಿಜ್ಜಾ, ವಿಡಿಯೋ ವೈರಲ್

'ಗರ್ಭಿಣಿಯಾಗಿರುವ ಪತ್ನಿ ಆಸೆ ಪಟ್ಟಿದ್ದಾಳೆಂದು ನಾನು ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದೆ. ಯಾಕೆಂದರೆ ವೈದ್ಯರು ನಮಗೆ ಒಂದೆರಡು ತಿಂಗಳು ಮಾಂಸಾಹಾರಿ ಆಹಾರವನ್ನು ತಪ್ಪಿಸಬೇಕೆಂದು ಹೇಳಿದ್ದರು. ಹೀಗಾಗಿ ಅವಳಿಗೆ ವೆಜ್ ಆಹಾರವನ್ನು ಆರ್ಡರ್ ಮಾಡದ್ದೆ. ಆದರೆ ಝೊಮೇಟೋದವರು ಮಾಂಸಾಹಾರಿ ಥಾಲಿ ಕಳುಹಿಸಿದ್ದಾರೆ. ಇದು ತಿಂದಿದ್ದರೆ ಆಕೆಯ ಆರೋಗ್ಯ ಹದಗೆಡುತ್ತಿತ್ತು' ಎಂದು ಶೋಭಿತ್ ತಿಳಿಸಿದ್ದಾರೆ. ಪೋಸ್ಟ್ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ವತಃ ಝೊಮೇಟೋ ಸಂಸ್ಥೆ ಇದಕ್ಕೆ ಪ್ರತಿಕ್ರಿಯೆ ನೀಡಿದೆ.

'ಆಹಾರ ವಿತರಣೆಯ ಸಂದರ್ಭ ನಮ್ಮಿಂದ ತಪ್ಪಾಗಿದೆ. ಇದು ನಿಮಗೆ ತುಂಬಾ ತೊಂದರೆಯನ್ನುಂಟು ಮಾಡಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಿಮ್ಮ ಆಹಾರದ ಆದ್ಯತೆಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಅವುಗಳನ್ನು ಎಂದಿಗೂ ಅಗೌರವಿಸಬೇಕೆಂದು ಬಯಸುವುದಿಲ್ಲ. ದಯವಿಟ್ಟು ಇದರ ಬಗ್ಗೆ ಪರಿಶೀಲನೆ ನಡೆಸಲು ನಮಗೆ ಸ್ವಲ್ಪ ಸಮಯ ನೀಡಿ' ಎಂಬುದಾಗಿ ಪೋಸ್ಟ್‌ಗೆ ಉತ್ತರ ನೀಡಿದ್ದಾರೆ.

ಗಂಟೆಗಟ್ಟಲೆ ಕಾದರೂ ಬರಲೇ ಇಲ್ಲ ಫುಡ್, ಝೊಮೇಟೋ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರಿನ ಗ್ರಾಹಕ

ಕಳೆದ ತಿಂಗಳು, ನವರಾತ್ರಿ ಸಮಯದಲ್ಲಿ ಮಾಂಸಾಹಾರಿ ಮೊಮೊಗಳನ್ನು ಸ್ವೀಕರಿಸಿದ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಪೋಸ್ಟ್ ಪ್ರಕಾರ, ಅವರು ವೆಜ್ ಪ್ಯಾನ್ ಫ್ರೈಡ್ ಮೊಮೊಸ್, ವೆಜ್ ಮೊಬರ್ಗ್ ಮತ್ತು ಪೆಪ್ಸಿಗಳ ಸಂಯೋಜನೆಯನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ನಾನ್‌ವೆಜ್‌ ಮೊಮೋಸ್ ಡೆಲಿವರಿ ಆಗಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಂಡಸರಲ್ಲಿ ದೈಹಿಕ-ಮಾನಸಿಕ-ಲೈಂಗಿಕ ಶಕ್ತಿ ಹೆಚ್ಚಿಸುವ 5 ಸೂಪರ್ ಫುಡ್ಸ್, 50 ದಾಟಿದ್ರೂ ಶಕ್ತಿ ಡಬಲ್
Air fryerನಲ್ಲಿ ಕರಿದ ಬೋಂಡಾ, ಬಜ್ಜಿ ಗರಿ ಗರಿ ಆಗ್ಬೇಕು ಅಂದ್ರೆ ಹೀಗ್ ಮಾಡಿ