ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತಿದೆ ಕರ್ನಾಟಕದ ಸ್ಥಿತಿ, ಯಾಕಂದ್ರೆ ಕೇರಳಕ್ಕೆ ಜ್ವರ ಬಂದ್ರೆ, ಕರ್ನಾಟಕಕ್ಕೆ ಶೀತ ಆಗುತ್ತೆ ಅನ್ನುವಂತಿದೆ. ಕೇರಳದಲ್ಲಿ ಕಾಣಿಸಿಕೊಂಡ ವೆಸ್ಟ್ ನೈಲ್ ಜ್ವರದಿಂದ ಕರ್ನಾಟಕದ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
ವರದಿ: ಮಧು.ಎಂ.ಚಿನಕುರಳಿ, ಮೈಸೂರು
ಮೈಸೂರು (ಮೇ.18): ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತಿದೆ ಕರ್ನಾಟಕದ ಸ್ಥಿತಿ, ಯಾಕಂದ್ರೆ ಕೇರಳಕ್ಕೆ ಜ್ವರ ಬಂದ್ರೆ, ಕರ್ನಾಟಕಕ್ಕೆ ಶೀತ ಆಗುತ್ತೆ ಅನ್ನುವಂತಿದೆ. ಕೇರಳದಲ್ಲಿ ಕಾಣಿಸಿಕೊಂಡ ವೆಸ್ಟ್ ನೈಲ್ ಜ್ವರದಿಂದ ಕರ್ನಾಟಕದ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಹಾಗಿದ್ರೆ ವೆಸ್ಟ್ ನೈಲ್ ಅಂದ್ರೆ ಏನು ಇಲ್ಲಿದೆ ಫುಲ್ ಡಿಟೇಲ್ಸ್. ಕೇರಳದಲ್ಲಿ ವೆಸ್ಟ್ ನೈಲ್ ಆತಂಕದಿಂದ ಕರ್ನಾಟಕದಲ್ಲಿ ಹೈ ಅಲಾರ್ಟ್ ಉಂಟಾಗಿದೆ. ಕೊರೊನಾ ಮಹಾಮಾರಿ ಅವಾಂತರ ಸೃಷ್ಟಿಸಿ ಇಂದಿಗೂ ಕೊರೊನಾ ಹೊಡೆತದಿಂದ ಹೊರಬರಲಾಗಿಲ್ಲ. ಇದೀಗ ಕೇರಳ ರಾಜ್ಯದಲ್ಲಿ ವೆಸ್ಟ್ ಜ್ವರದ ಬೀತಿ ಎದುರಾಗಿದೆ.
ವೆಸ್ಟ್ ನೈಲ್ ಜ್ವರದ ಲಕ್ಷಣಗಳು ಕೇರಳದಿಂದ ಕಾಣಿಸಿಕೊಂಡಿರೋ ಪರಿಣಾಮ ಕರ್ನಾಟಕ ಗಡಿಯಲ್ಲಿ ಹೈ ಅಲಾರ್ಟ್ ಘೋಷಣೆ ಮಾಡಲಾಗಿದೆ. ಕೇರಳ ರಾಜ್ಯಕ್ಕೆ ಹೊಂದಿಕೊಂಡತ್ತೆ ಇರೋ ಕರ್ನಾಟಕ ರಾಜ್ಯದ ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಸೇರಿದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಗಡಿ ಭಾಗದಲ್ಲಿ ರೋಗದ ಲಕ್ಷಣಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹೆಚ್ ಡಿ.ಕೋಟೆ ತಾಲೂಕು ವೈದ್ಯಾಧಿಕಾರಿ ರವಿ ಕಿಮಾರ್ ಗಡಿ ಗ್ರಾಮಗಳಿಗೆ ಭೇಟಿ ನೀಡು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನೂ ಈ ವೆಸ್ಟ್ ನೈಲ್ ಜ್ವರ ಅಷ್ಟೇನೂ ಮಾರಣಾಂತಿಕ ಅಲ್ಲ ಅನ್ನೋದು ಆರೋಗ್ಯ ಇಲಾಖೆಯ ಸ್ಪಷ್ಟನೆ. ಈ ಜ್ವರದ ಲಕ್ಷಣ ನೋಡೋದಾದ್ರೆ ಜ್ವರ, ಮೈ ಕೈ ನೋವು, ದೇಹದ ಚರ್ಮದ ಮೇಲೆ ದದ್ದು ಕಾಣಿಸಿಕೊಳ್ಳುವುದು ಈ ಜ್ವರದ ಲಕ್ಷಣ. ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ನೀಡುವಂತೆಯೇ ವೆಸ್ಟ್ ನೈಲ್ ಜ್ಚರಕ್ಕೂ ಚಿಕಿತ್ಸೆ ಲಭ್ಯವಿದೆ. ವೆಸ್ಟ್ ನೈಲ್ ಜ್ವರ ಮಾರಣಾಂತಿಕವಲ್ಲ ಹೀಗಾಗಿ ಜನರು ಆತಂಕಕ್ಕೆ ಒಳಗಾಗದೆ ಈ ರೋಗ ಲಕ್ಷಣ ಕಾಣಿಸಿಕೊಂಡ್ರೆ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು ಅಂತಾ ಮೈಸೂರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಕುಮಾರಸ್ವಾಮಿ ತಿಳಿಸಿದ್ದಾರೆ.
ರೆಸ್ಪಿ ಸೌತೆಕಾಯಿ ಬೆಳೆದು ಲಕ್ಷಾಧೀಶ್ವರನಾದ ರೈತ: ವಕೀಲಿ ವೃತ್ತಿ ಜತೆ ಕೃಷಿಕನಾದ ಗಂಗರಾಜ್!
ಒಟ್ಟಿನಲ್ಲಿ ಕೊರೊನಾ ಸೃಷ್ಟಿಸಿದ್ದ ಅವಾಂತರ ಒಂದೆರಡಲ್ಲ, ಹೀಗಿರೋವಾಗ ಪದೇ ಪದೇ ವೈರಸ್, ಜ್ವರದ ಭೀತಿ ನೆರೆ ರಾಜ್ಯ ಕೇರಳದಿಂದ ಕರ್ನಾಟಕ ರಾಜ್ಯಕ್ಕೆ ಎದುದಾಗಿದೆ. ವೆಸ್ಟ್ ನೈಲ್ ಅಷ್ಟೋದು ಡ್ಯಾಮೇಜ್ ಮಾಡದೇ ಇದ್ರೂ ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು.