ತೀವ್ರ ಹೊಟ್ಟೆ ನೋವಿಗೆ ಡೈರಿಯಾ ಆಗಬಹುದು ಕಾರಣ, ಪರಿಹಾರ ಏನು?

Published : Aug 01, 2022, 05:17 PM IST

ಅತಿಸಾರ ಅಥವಾ ಡೈರಿಯಾ. ಸಮಸ್ಯೆ ಏನೋ ಸಾಮಾನ್ಯ ನಿಜಾ.ಆದರೆ ಅದು ದೇಹದಲ್ಲಿ ಹೆಚ್ಚು ದೌರ್ಬಲ್ಯ ಉಂಟುಮಾಡುತ್ತೆ. ಇದರಿಂದ ನೀವು ತುಂಬಾನೆ ವೀಕ್ ಆಗ್ತೀರಿ. ಅಂದಹಾಗೆ, ಅತಿಸಾರವು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ. ಇದರಲ್ಲಿ ಮಲವು ನೀರಿನಂತೆ ತೆಳುವಾಗಿರುತ್ತೆ. ಕರುಳಿಗೆ ಸಂಬಂಧಿಸಿದ ಈ ರೋಗವು ಮುಖ್ಯವಾಗಿ ರೋಟಾವೈರಸ್‌ನಿಂದ ಉಂಟಾಗುತ್ತೆ. ನಿಮಗೂ ಈ ಸಮಸ್ಯೆ ಕಾಡುತ್ತಿದ್ದರೆ, ಇದಕ್ಕೆ ಕಾರಣ ಏನು? ರೋಗಲಕ್ಷಣ ಮತ್ತು ತಡೆಗಟ್ಟುವಿಕೆಗೆ ಏನು ಮಾಡಬೇಕು? ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

PREV
112
ತೀವ್ರ ಹೊಟ್ಟೆ ನೋವಿಗೆ ಡೈರಿಯಾ ಆಗಬಹುದು ಕಾರಣ, ಪರಿಹಾರ ಏನು?
ಡೈರಿಯಾಕ್ಕೆ(Diarrhea) ಕಾರಣ

ಅತಿಸಾರಕ್ಕೆ ಮುಖ್ಯ ಕಾರಣ ವೈರಲ್ ಅಥವಾ ಬ್ಯಾಕ್ಟೀರಿಯಾ ಸೋಂಕು. ಆದಾಗ್ಯೂ, ಡೈರಿಯಾಕ್ಕೆ ಇನ್ನೂ ಅನೇಕ ಕಾರಣಗಳೂ ಇರಬಹುದು. ಅವುಗಳ ಬಗ್ಗೆ ನೀವು ತಿಳಿದುಕೊಂಡರೆ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತೆ. ಇಲ್ಲಿದೆ ನೋಡಿ ಡೈರಿಯಾದ ಬಗ್ಗೆ ಮತ್ತಷ್ಟು ಮಾಹಿತಿ. 

212
ಇಂಪ್ಲಿಮೆಟರಿ ಬೌಲ್ ಡಿಸೀಸ್ (ಐಬಿಡಿ):

ಐಬಿಡಿ ಎಂಬುದು ಕರುಳುಗಳಲ್ಲಿ ಉಂಟಾಗುವ ಒಂದು ಸಮಸ್ಯೆ, ಇದರಲ್ಲಿ ಮಲದಲ್ಲಿ ರಕ್ತಸ್ರಾವದಂತಹ (Bleeding) ಅತಿಸಾರದ ರೋಗಲಕ್ಷಣ ಕಂಡು ಬರುತ್ತೆ. ಐಬಿಡಿ ನಿಮ್ಮ ದೊಡ್ಡ ಕರುಳು ಮತ್ತು ಗುದನಾಳದ ಅತ್ಯಂತ ಒಳಗಿನ ಒಳಪದರದಲ್ಲಿ ಹುಣ್ಣುಗಳನ್ನು ಉಂಟುಮಾಡುತ್ತೆ. 

312
ಯಾಕೆ ಕಾಣಿಸಿಕೊಳ್ಳುತ್ತೆ?

ಜೀರ್ಣಾಂಗ ವ್ಯವಸ್ಥೆಯು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ವಿಫಲವಾದಾಗ, ಅತಿಸಾರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..
ಔಷಧಿ: ಲಕ್ಸಾಟಿವ್ಸ್ ಮತ್ತು ಇತರ ಔಷಧಿಗಳಂತಹ ಆ್ಯಂಟಿಬಯೋಟಿಕ್ಸ್(Antibiotics) ಸೇವನೆಯು ಅತಿಸಾರಕ್ಕೆ ಕಾರಣವಾಗಬಹುದು. ಆದುದರಿಂದ ಎಚ್ಚರಿಕೆ ವಹಿಸೋದು ಮುಖ್ಯ. 

412

ಹಾರ್ಮೋನುಗಳ(Harmone) ಅಸ್ವಸ್ಥತೆ: ಹಾರ್ಮೋನ್‌ಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯಿದ್ದರೆ, ಅನಿಯಮಿತ ಕರುಳಿನ ಚಲನೆ ಮತ್ತು ಇತರೆ ಕಾರಣಗಳಿಂದಲೂ ಅತಿಸಾರದ ಲಕ್ಷಣ ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ಅಡಿಸನ್ ಕಾಯಿಲೆಯನ್ನು ಹೊಂದಿರುವ ಜನರು ಹೆಚ್ಚಿನ ಹಾರ್ಮೋನ್ ಸ್ಟೀರಾಯ್ಡ್ ಹೊಂದಿರೋದಿಲ್ಲ. ಹಾಗಾಗಿ, ಅವರಿಗೆ ಅತಿಸಾರ ಬರುವ ಸಾಧ್ಯತೆ ಹೆಚ್ಚು.

512
ಅತಿಸಾರದ ಲಕ್ಷಣಗಳು

ವಾಕರಿಕೆ ,  ಕಿಬ್ಬೊಟ್ಟೆಯ ನೋವು, ಸಡಿಲ ಚಲನೆ, ಊತ, ನಿರ್ಜಲೀಕರಣ, ಜ್ವರ(Fever), ಮಲದಲ್ಲಿ ರಕ್ತಸ್ರಾವ..ಈ ಎಲ್ಲಾ ಲಕ್ಷಣಗಳು ಕಂಡು ಬಂದರೆ ಎಚ್ಚರ ವಹಿಸಬೇಕಾಗಿರೋದು ಮುಖ್ಯ. ಇದರಿಂದ ಉತ್ತಮ ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತೆ. 

612
ಡೈರಿಯಾ ಉಂಟಾದಾಗ ಏನು ತಿನ್ನಬೇಕು?

ಅತಿಸಾರದ ನಂತರ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳೋದು ಬಹಳ ಮುಖ್ಯ. ಇದಕ್ಕಾಗಿ, ಸಾಕಷ್ಟು ನೀರು (Water) ಮತ್ತು ಜ್ಯೂಸ್ ಸೇವಿಸಿ. ಇದಲ್ಲದೆ, ಸೂಪು, ಬಾಳೆಹಣ್ಣು, ಸಿಪ್ಪೆ ತೆಗೆದ ಆಲೂಗಡ್ಡೆ, ಜೊತೆಗೆ ಅನ್ನ, ಬೇಯಿಸಿದ ತರಕಾರಿ, ಮೀನು ಮತ್ತು ಚಿಕನ್ ನಿರ್ಜಲೀಕರಣದ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತೆ.

712
ಏನನ್ನು ತಿನ್ನಬಾರದು?

 ತಿನ್ನುವ ಪ್ರತಿಯೊಂದು ಆಹಾರವೂ ಅತಿಸಾರದ ರೋಗಲಕ್ಷಣ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಈ ಸಮಸ್ಯೆ ಉಂಟಾದಾಗ ದೇಹದಲ್ಲಿ ನೀರಿನ ಕೊರತೆ ಆಗೋದರಿಂದ, ಸಾಧ್ಯವಾದಷ್ಟು ನಿಮ್ಮನ್ನು ನೀವು ಹೈಡ್ರೇಟ್ ಆಗಿರಿಸಿಕೊಳ್ಳಿ. ಅಲ್ಲದೆ, ನಿಮಗೆ ಅತಿಸಾರವಿದ್ದಾಗ ಡೈರಿ ಉತ್ಪನ್ನಗಳನ್ನು(Diary products) ಸೇವಿಸೋದನ್ನು ತಪ್ಪಿಸಿ, ಏಕೆಂದರೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತೆ. 

 

812

ಎಲೆಕೋಸು ಮತ್ತು ಬೀನ್ಸ್‌ನಂತಹ ಫೈಬರ್ ಭರಿತ ತರಕಾರಿ ಸೇವಿಸಬೇಡಿ. ಏಕೆಂದರೆ ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಅತಿಸಾರದ ಲಕ್ಷಣ ಗೋಚರಿಸುತ್ತಿದ್ದರೆ, ಸೋಡಾ, ಚಹಾ ಮತ್ತು ಕಾಫಿಯಂತಹ(Coffee) ಕೆಫೀನ್‌ಯುಕ್ತ ಪಾನೀಯಗಳನ್ನು ತಪ್ಪಿಯೂ ತೆಗೆದುಕೊಳ್ಳಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

912
ಅತಿಸಾರವನ್ನು ತಡೆಗಟ್ಟುವ ವಿಧಾನ

 ಉತ್ತಮ ನೈರ್ಮಲ್ಯ:  ಶೌಚಾಲಯದಿಂದ ಬಂದ ನಂತರ 30 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ಅಲ್ಲದೆ, ಅಡುಗೆ ಮತ್ತು ಊಟ ಮಾಡುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಲು(Wash hand) ಎಂದಿಗೂ ಮರೆಯಬೇಡಿ. ನೀವು ಕ್ಲೀನ್ ಆಗಿದ್ದರೆ, ಹೊಟ್ಟೆ ಸಹ ಕ್ಲೀನ್ ಆಗಲು ಸಾಧ್ಯವಾಗುತ್ತೆ.
 

1012

 ಲಸಿಕೆ(Vaccine) ಹಾಕಿಸಿಕೊಳ್ಳಿ: ಅತಿಸಾರಕ್ಕೆ ರೋಟಾ ವೈರಸ್ ಮುಖ್ಯ ಕಾರಣ. ರೋಟಾವೈರಸ್ ಲಸಿಕೆಯ ಮೂಲಕ ಅತಿಸಾರವನ್ನು ತಪ್ಪಿಸಬಹುದು. ಈ ಲಸಿಕೆಯನ್ನು ಒಂದು ವರ್ಷದ ಮಕ್ಕಳಿಗೆ ವಿವಿಧ ಡೋಸ್‌ಗಳ ರೂಪದಲ್ಲಿ ನೀಡಲಾಗುತ್ತೆ. ಆದುದರಿಂದ ಮಕ್ಕಳಿಗೆ ಇದನ್ನು ಹಾಕಿಸಲು ಮರೆಯಬೇಡಿ. 

1112

ಆಹಾರವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ: ಉಳಿದ ಆಹಾರ ಮತ್ತು ಇತರ ಆಹಾರ ಪದಾರ್ಥಗಳನ್ನು ಫ್ರಿಜ್ ನಲ್ಲಿ(Fridge) ಇರಿಸಿ. ಹಸಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ಮತ್ತು ಬೇಯಿಸುವ ಮೊದಲು ನೀರಿನಿಂದ ಚೆನ್ನಾಗಿ ತೊಳೆಯಿರಿ. ಹಳಸಿದ ಯಾವುದೇ ಆಹಾರ ತಿನ್ನಬೇಡಿ. 

1212

ನಿಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಿ: ಬೀದಿ ಆಹಾರ ಮತ್ತು ನಲ್ಲಿಯ ನೀರು (Tap water) ಕೀಟಾಣುಗಳ ಮುಖ್ಯ ಕೇಂದ್ರಬಿಂದುವಾಗಿದೆ. ಇದು ಅತಿಸಾರಕ್ಕೆ ಕಾರಣವಾಗಬಹುದು. ನೀವು ಹೊರಗೆ ತಿನ್ನಲು ಹೋಗುತ್ತಿದ್ದರೆ, ಆರೋಗ್ಯಕರ ಸ್ಥಳಕ್ಕೆ ಹೋಗಿ. ನೀವು ಎಲ್ಲಿಯೇ ಹೋದರೂ ನೀರು ತೆಗೆದುಕೊಂಡು ಹೋಗಿ ಅಥವಾ ಬಾಟಲಿ ನೀರು ಕುಡಿಯುತ್ತೀರಿ ಎಂಬುದನ್ನು ಗಮನದಲ್ಲಿಡಿ. ಅಲ್ಲದೆ, ಕೊಳಕು ನೀರಿನ ಸಮಸ್ಯೆ ತಪ್ಪಿಸಲು ಮನೆಯಲ್ಲಿ ವಾಟರ್ ಪ್ಯೂರಿಫೈಯರ್ ಬಳಸಿ.

Read more Photos on
click me!

Recommended Stories