ಬಿಗ್ ಬಾಸ್‌ನಿಂದ ಶಿಶಿರ್ ಶಾಸ್ತ್ರಿ-ಗೋಲ್ಡ್‌ ಸುರೇಶ್ ಔಟ್; ಇಬ್ಬರ ಕಥೆಯೂ ಬೇರೆ ಬೇರೆ!

Published : Dec 15, 2024, 01:47 PM ISTUpdated : Dec 15, 2024, 02:54 PM IST
ಬಿಗ್ ಬಾಸ್‌ನಿಂದ ಶಿಶಿರ್ ಶಾಸ್ತ್ರಿ-ಗೋಲ್ಡ್‌ ಸುರೇಶ್ ಔಟ್; ಇಬ್ಬರ ಕಥೆಯೂ ಬೇರೆ ಬೇರೆ!

ಸಾರಾಂಶ

ಬಿಗ್‌ಬಾಸ್‌ ೧೧ರ ಹನ್ನೊಂದನೇ ವಾರದಲ್ಲಿ ಶಿಶಿರ್ ಶಾಸ್ತ್ರಿ ಮತ್ತು ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ವೈಯಕ್ತಿಕ ಕಾರಣದಿಂದ ಗೋಲ್ಡ್ ಸುರೇಶ್ ಸ್ವಯಂ ನಿರ್ಗಮಿಸಿದ್ದಾರೆ. ಹನುಮಂತ ಮತ್ತು ತ್ರಿವಿಕ್ರಮ್ ಸೇಫ್ ಆಗಿದ್ದಾರೆ. ಉಳಿದ ಸ್ಪರ್ಧಿಗಳಾದ ಉಗ್ರಂ ಮಂಜು, ರಜತ್, ಗೌತಮಿ, ಮೋಕ್ಷಿತಾ, ಧನರಾಜ್ ಮುಂದಿನ ಹಂತಕ್ಕೆ ತಲುಪಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್‌ 11ರ (Bigg Boss Kannada 11) ಶೋದ ಹನ್ನೊಂದನೇ ವಾರ ಮುಗಿಯುವ ಹಂತಕ್ಕೆ ಬಂದು ತಲುಪಿದೆ. ದೊಡ್ಮನೆಯಲ್ಲಿ ಪ್ರತಿವಾರವೂ ಕನಿಷ್ಠ ಒಂದೊಂದು ಟ್ವಿಸ್ಟ್ ಇದ್ದೇ ಇರಲಿದೆ. ಸೋ, ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ, ಈ ವಾರ ಬಿಗ್‌ಬಾಸ್‌ ಮನೆಯಿಂದ ಪ್ರಬಲ ಸ್ಪರ್ಧಿಗಳೇ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಆ ಸ್ಪರ್ಧಿಗಳು ಯಾರು ಎಂಬ ಮಾಹಿತಿ ಇಲ್ಲಿದೆ.

ಹಾಗಿದ್ರೆ ಈ ಬಾರಿ ಯಾರೆಲ್ಲಾ ನಾಮಿನೇಟ್ ಆಗಿದ್ದರು ಗೊತ್ತಾ?

11ನೇ ವಾರ ಬಿಗ್‌ಬಾಸ್‌ ಮನೆಯಿಂದ ಹೊರಹೋಗಲು ಧನರಾಜ್ ಆಚಾರ್, ಭವ್ಯಾ ಗೌಡ, ಶಿಶಿರ್ ಶಾಸ್ತ್ರೀ, ರಜತ್ ಕಿಶನ್, ಚೈತ್ರಾ ಕುಂದಾಪುರ, ಹನುಮಂತ ಹಾಗೂ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದರು. ಈ ಪೈಕಿ ಯಾರು ಎಲಿಮಿನೇಟ್ ಆಗಲಿದ್ದಾರೆಂಬ ಕುತೂಹಲ ಸಹಜವಾಗಿಯೇ ವೀಕ್ಷಕರಲ್ಲಿತ್ತು. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಹನುಮಂತ ಹಾಗೂ ತ್ರಿವಿಕ್ರಮ್ ಅವರು ಸೇಫ್ ಆಗಿದ್ದರು. 

ಅಪ್ಪು ಬಗ್ಗೆ ಅಂದು ರಮ್ಯಾ ಆಡಿದ್ದ ಮಾತು ಇಂದು ವೈರಲ್ ಆಗ್ತಿದೆ, ನೆಟ್ಟಿಗರ ಮಾಯೆ!

ಸಿಕ್ಕ ಮಾಹಿತಿ ಪ್ರಕಾರ, ಶಿಶಿರ್ & ಗೋಲ್ಡ್ ಸುರೇಶ್ ಔಟ್!

ಹೌದು, 10ನೇ ವಾರದ ಡೇಂಜರ್‌ ಝೋನ್‌ನಲ್ಲಿ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ ಹಾಗೂ ಚೈತ್ರಾ ಕುಂದಾಪುರ ಇದ್ದರು. ಆದರೆ, ಕಳೆದ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಗಿತ್ತು. ಹೀಗಾಗಿ ಈ ಇಬ್ಬರೂ ಸೇಫ್ ಆಗಿದ್ದರು. ಹಾಗಾಗಿ ಈ ವಾರ ಡಬಲ್ ಎಲಿಮಿನೇಷನ್ ನಡೆಯಬೇಕಿತ್ತು. ಅದರಂತೆ ಶಿಶಿರ್ ಶಾಸ್ತ್ರಿ ಹಾಗೂ ಗೋಲ್ಡ್ ಸುರೇಶ್ ಈ ವಾರ ಹೊರಬಂದಿದ್ದಾರೆ ಎನ್ನಲಾಗಿದೆ. ಹೀಗಂತ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ವೈರಲ್ ಆಗುತ್ತಿದೆ.

ಇನ್ನೂ ಕೆಲವರು ಶಿಶರ್ ಬದಲು ಚೈತ್ರಾ ಕುಂದಾಪುರ ಹೊರಬಿದ್ದಿದ್ದಾರೆ ಎನ್ನುತ್ತಿದ್ದಾರೆ.  ಇಬ್ಬರ ಪೈಕಿ, ಗೋಲ್ಡ್ ಸುರೇಶ್ ಅವರಿಗೆ ಮನೆಯಿಂದ ಒಂದು ಎಮರ್ಜನ್ಸಿ ಮೆಸೇಜ್ ಬಂದ ಕಾರಣದಿಂದ ಅವರು ವಿನಂತಿ ಮಾಡಿಕೊಂಡು ಆ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇಂದು ರಾತ್ರಿ ಈ ಬಗ್ಗೆ ಸ್ಪಷ್ಟ ಉತ್ತರ ಸಿಗಲಿದೆ.

ಸ್ಪರ್ಧಿ ಶಿಶಿರ್ ಹಿನ್ನೆಲೆ ಬಗ್ಗೆ ಗೊತ್ತಾ?

ನಟ ಶಿಶಿರ್ ಶಾಸ್ತ್ರಿ ತಮ್ಮದೇ ಈವೆಂಟ್ ಮ್ಯಾನೆಮಜ್‌ಮೆಂಟ್ ಕಂಪನಿಯನ್ನು ಹೊಂದಿದ್ದಾರೆ.  ಈ ಶಿಶಿರ್ ಶಾಸ್ತ್ರಿ ಅವರು ಆಕಸ್ಮಿಕವಾಗಿ ನಟನೆಗೆ ಪ್ರವೇಶ ಮಾಡಿದವರು. 2012ರಲ್ಲಿ 'ಸೊಸೆ ತಂದ ಸೌಭಾಗ್ಯ' ಎಂಬ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ಶಿಶಿರ್, ಬಳಿಕ ಪುಟ್ಟಗೌರಿ ಮದುವೆ, ಭಾರತಿ, ಕುಲವಧು, ಸೇವಂತಿ, ಪ್ರೇಮಲೋಕ ಹೀಗೆ ಸಾಲುಸಾಲು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಅವರಿಗೆ 'ಕುಲವಧು' ಹೆಚ್ಚು ಖ್ಯಾತಿ ತಂದುಕೊಟ್ಟಿರುವ ಧಾರಾವಾಹಿ ಎನ್ನಬಹುದು. ನಟ ಶಿಶಿರ್ ಅವರು ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 

DKD ಫೈನಲ್ ಹಂಗಾಮ: ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರಿಟ್ಟಿದ್ದೇಕೆ ಶಿವರಾಜ್​ಕುಮಾರ್?

ಗೋಲ್ಡ್ ಸುರೇಶ್ ಹಿನ್ನೆಲೆಯೇನು ಗೊತ್ತೇ?

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನವರಾದ ಗೋಲ್ಡ್ ಸುರೇಶ್, ಮೊದಲು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ, ಆ ಕೆಲಸ ಬಿಟ್ಟು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪಿಸಿ ಅದರಲ್ಲಿ ಗೆಲುವು ಸಾಧಿಸಿದರು. ಜೀವನದಲ್ಲಿ ದೊಡ್ಡದಾಗಿ ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ ಹುಟ್ಟಿದ ಊರು ಬಿಟ್ಟು ಓಡಿ ಬಂದಿದ್ದ ಸುರೇಶ್, ಮುಂದೆ ತಮ್ಮದೇ ಸಂಸ್ಥೆ ಸ್ಥಾಪಿಸಿ ಬಹಳಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇತ್ತೀಚೆಗೆ ಜೀ ನ್ಯೂಸ್ ಕೊಡುವ 'ಯುವರತ್ನ' ಅವಾರ್ಡ್ ಕೂಡ ಪಡೆದಿದ್ದರು. 

ಒಟ್ಟಿನಲ್ಲಿ, ಬಿಗ್ ಬಾಸ್ ಇನ್ನೆರೆಡು ವಾರ ಕಳೆದರೆ ಫೈನಲ್ ವಾರಕ್ಕೆ ಕಾಲಿಡುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್‌ 11 ಇದೀಗ 75 ದಿನಗಳನ್ನು ಪೂರೈಸಿದ್ದು, ಫೈನಲಿಸ್ಟ್ ಯಾರಾಗಲಿದ್ದಾರೆಂಬ ಕುತೂಹಲ ಸಹಜವಾಗಿಯೇ ಬಿಗ್ ಬಾಸ್ ಪ್ರಿಯ ವೀಕ್ಷಕರಲ್ಲಿ ಮನೆಮಾಡಿದೆ. ಉಗ್ರಂ ಮಂಜು, ಹನುಮಂತ, ತ್ರಿವಿಕ್ರಮ್, ರಜತ್, ಗೌತಮಿ, ಮೋಕ್ಷಿತಾ ಹಾಗೂ ಧನರಾಜ್ ಆಚಾರ್ ದೊಡ್ಮನೆಯಲ್ಲಿ ಉಳಿದುಕೊಂಡಿದ್ದು, ಇನ್ನು ಮೂರು ವಾರಗಳಲ್ಲಿ ಯಾರು ಫೈನಲಿಸ್ಟ್ ಆಗಲಿದ್ದಾರೆ ಎಂಬುದು ಗೊತ್ತಾಗಲಿದೆ.  ನೋಡೋಣ, ಅದ್ಯಾರು 'ಬಿಗ್ ಬಾಸ್ ಕನ್ನಡ-11' ಕಿರೀಟ ಧರಿಸುತ್ತಾರೆ ಎಂದು!

ರಚಿತಾ ರಾಮ್ ಮುಂದೆ ಅತ್ತಿದ್ರು ಸುಂದರ್‌ ರಾಜ್; ಆದ್ರೆ ಮ್ಯಾಟರ್ ಮೇಘನಾ ರಾಜ್‌!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ