25 ವರ್ಷಗಳ  ನಂತರ ರಾಜಕೀಯ ತಿರುವು ಕೊಟ್ಟ ಡಿ.ಕೆ. ಶಿವಕುಮಾರ್ ಹೇಳಿಕೆ!

25 ವರ್ಷಗಳ ನಂತರ ರಾಜಕೀಯ ತಿರುವು ಕೊಟ್ಟ ಡಿ.ಕೆ. ಶಿವಕುಮಾರ್ ಹೇಳಿಕೆ!

Published : Dec 15, 2024, 01:14 PM IST

ಕರ್ನಾಟಕದ ರಾಜಕೀಯದಲ್ಲಿ ಮತ್ತೆ ಸಿಎಂ ಕುರ್ಚಿ ಚರ್ಚೆ ಮುನ್ನೆಲೆಗೆ ಬಂದಿದೆ. ಡಿಕೆ ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಗಳು ಸಿಎಂ ಬದಲಾವಣೆಯ ಗುಲ್ಲನ್ನೆಬ್ಬಿಸಿವೆ. ಅಂದು ಮಂತ್ರಿಗಿರಿ ಪಡೆದ ರೀತಿಯಲ್ಲಿಯೇ ಈಗ ಸಿಎಂ ಪಟ್ಟ ಲಭ್ಯವಾಗುವುದೇ?

ರಾಜ್ಯ ರಾಜಕಾರಣದಲ್ಲಿ ಯಾವಾಗ ಏನಾಗುತ್ತೋ, ಯಾಕಾಗುತ್ತೋ, ಹೇಗಾಗುತ್ತೋ, ಯಾರೂ ಹೇಳೋಕ್ಕಾಗಲ್ಲ.. ಅಂಥದ್ದೊಂದು ಘಟನೆ, 25 ವರ್ಷಗಳ ಹಿಂದೆ ನಡೆದಿತ್ತು.. ಈಗ ಮತ್ತೆ ಅಂಥದ್ದೇ ಘಟನೆ ರಿಪೀಟ್ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಸಿಎಂ ಕುರ್ಚಿಯ ವಿಚಾರವಾಗಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಗಾಳಿಯಲ್ಲಿ ಗುಂಡು ಹೊಡೆಯೋ ಕೆಲಸವನ್ನ ನಿರಂತರವಾಗಿ ಮಾಡ್ತಲೇ ಇದ್ದಾರೆ. ಹಾಗಿದ್ರೆ,ಮತ್ತೆ ಮತ್ತೆ ಕುರ್ಚಿ ಚರ್ಚೆಯನ್ನ ಡಿಕೆ ಮುನ್ನೆಲೆಗೆ ತಂದು ಬಿಡ್ತಾ ಇರೋದು ಹೇಗೆ ಅನ್ನೋದನ್ನ ತೋರಿಸ್ತೀವಿ.

ಸಿಎಂ ಬದಲಾವಣೆ..ಕೈ ಸರ್ಕಾರದ ಒಳಗೆ ಆಗಾಗ ಕೋಲಾಹಲಕ್ಕೆ ಕಾರಣವಾಗೋ ವಿಚಾರವಿದು.  ಇಷ್ಟ ದಿನ ಕಾಂಗ್ರೆಸ್ನ ಬೇರೆ ಬೇರೆ ನಾಯಕರು ಈ ವಿಚಾರವನ್ನ ಮುನ್ನೆಲ್ಲೆಗೆ ತಂದು ಬಿಡ್ತಿದ್ರು. ಆದ್ರೇ ಇತ್ತೀಚಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಈ ಕೆಲಸ ಮಾಡ್ತಾ ಇರೋ ಹಾಗಿದೆ. ಯಾಕೆಂದ್ರೆ ಡೈರೆಕ್ಟ್ ಆಗಿ ಅಲ್ಲದೇ ಇದ್ರೂ ಇಂಡೈರೆಕ್ಟ್ ಆಗಿ ಸಿಎಂ ಚೇರ್ನ ಸುತ್ತಾ ಗಿರಕಿ ಹೊಡೆಯುತ್ತಿವೆ ಡಿ.ಕೆ.ಶಿವಕುಮಾರ್ ಕೊಡ್ತಿರೋ ಹೇಳಿಕೆಗಳು. ಅಂದು ತಮಗೆ ಬೇಕಾಗಿದ್ದನ್ನ ಬಾಗಿಲು ಒದ್ದು ಕಿತ್ತುಕೊಂಡಿದ್ದರು.

ಇದನ್ನೂ ಓದಿ: ಅಪ್ಪು ಬಗ್ಗೆ ಅಂದು ರಮ್ಯಾ ಆಡಿದ್ದ ಮಾತು ಇಂದು ವೈರಲ್ ಆಗ್ತಿದೆ, ನೆಟ್ಟಿಗರ ಮಾಯೆ!

ಅಂದು ಮಂತ್ರಿಗಿರಿಯನ್ನ ಬಾಗಿಲು ಒದ್ದು ಇಸ್ಕೊಂಡಿದ್ರಂತೆ ಡಿ.ಕೆ.ಶಿವಕುಮಾರ್. ಆದ್ರೀಗ ಅವರಿಗೆ ಮುಖ್ಯಮಂತ್ರಿ ಆಗೊ ಆಸೆಯಿದೆ. ಆದ್ರೆ, ಅದನ್ನ ಹಾಗೆ ಕಿತ್ತುಕೊಳ್ಳೋಕೆ ಸಾಧ್ಯಾನಾ..? ಒಂದು ವೇಳೆ ಡಿಕೆಶಿ ಅಂತಹ ಕೆಲಸಕ್ಕೆ ಕೈ ಹಾಕಿದ್ದರು, ಅದ್ದರಿಂದ ಅವರಿಗೇನೆ ಪೆಟ್ಟು. ಅದು ಕನಕಪುರ ಬಂಡೆಗೆ ಸ್ಪಷ್ಟವಾಗಿ ಗೊತ್ತಿದೆ.

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
Read more