Dec 15, 2024, 1:01 PM IST
ಅಲ್ಲು ಅರ್ಜುನ್ ಅರೆಸ್ಟ್ ಪ್ರಕರಣ ಇಡೀ ದೇಶದ ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪುಷ್ಪ-2 ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದ ಅಲ್ಲು ಅರ್ಜುನ್ನ ತೆಲಂಗಾಣ ಸಿಎಂ ಬೇಕಂತಲೇ ಅರೆಸ್ಟ್ ಮಾಡಿಸಿದ್ರು ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಆದ್ರೆ ಇದಕ್ಕೆ ಉತ್ತರ ಕೊಟ್ಟಿರೋ ರೇವಂತ್ ರೆಡ್ಡಿ ನಮ್ಮ ರಾಜ್ಯದಲ್ಲಿ ಕಾನೂನು ಎಲ್ಲರಿಗೂ ಒಂದೇ ಅಂದಿದ್ದಾರೆ. ಪುಷ್ಪನಿಗೆ ಸಿನಿಮಾ ಸ್ಟೈಲ್ ನಲ್ಲೇ ಕೌಂಟರ್ ಡೈಲಾಗ್ ಹೊಡೆದಿದ್ದಾರೆ. ಯೆಸ್ ತೆಲಂಗಾಣದಲ್ಲಿ ನಿನ್ನೆಯಿಂದ ದೊಡ್ಡ ಹೈಡ್ರಾಮಾ ನಡೀತಾ ಇದೆ. ನಿನ್ನೆ ಚಿಕಟಪಲ್ಲಿ ಪೊಲೀಸರು ಅಲ್ಲು ಅರ್ಜುನ್ನ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿದ್ರು.
ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತಕ್ಕೆ ಮಹಿಳೆ ಬಲಿಯಾದ ಪ್ರಕರಣದಲ್ಲಿ ನಾಂಪಲ್ಲಿ ಕೋರ್ಟ್ ಅಲ್ಲು ಅರ್ಜುನ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸ್ತು. ಚಂಚಲಗುಡ್ಡ ಜೈಲಿಗೆ ಅಲ್ಲು ಅರ್ಜುನ್ನ ಶಿಫ್ಟ್ ಮಾಡಲಾಯ್ತು. ಈ ನಡುವೆ ಸಂಜೆ ವೇಳೆಗೆ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಗೆ ಬೇಲ್ ಮಂಜೂರು ಮಾಡಿತು. ಆದ್ರೆ ಬೇಲ್ ಪ್ರತಿ ಜೈಲಾಧಿಕಾರಿಗಳ ಕೈ ಸೇರೋದು ವಿಳಂಬವಾದ ಹಿನ್ನೆಲೆ ಅಲ್ಲು ಇಡೀ ರಾತ್ರಿ ಜೈಲಲ್ಲಿ ಕಳಿಯಬೇಕಾಯ್ತು. ಇವತ್ತು ಬೆಳಿಗ್ಗೆ ಅಲ್ಲು ಅರ್ಜುನ್ ರಿಲೀಸ್ ಆಗಿ ಹೊರಬಂದಿದ್ದಾರೆ. ತನ್ನ ಬೆಂಬಲಕ್ಕೆ ನಿಂತ ಫ್ಯಾನ್ಸ್ಗೆ ಧನ್ಯವಾದ ಹೇಳಿದ್ದಾರೆ.
ಕಾಲ್ತುಳಿತಕ್ಕೆ ಬಲಿಯಾದ ಮಹಿಳೆಯ ಕುಟುಂಬದ ಬಗ್ಗೆ ತನಗೆ ಅನುಕಂಪ ಇದೆ. ಅದು ಆಕಸ್ಮಿಕವಾಗಿ ನಡೆದ ಘಟನೆ ಈ ಆ ವಿಚಾರವಾಗಿ ವಿಷಾದ ವ್ಯಕ್ತಪಡಿಸ್ತಿನಿ ಎಂದಿದ್ದಾರೆ. ಯೆಸ್ ಸಂಧ್ಯಾ ಥಿಯೇಟರ್ ಬಳಿ ಮಹಿಳೆ ಬಲಿಯಾದ ಕೇಸ್ನಲ್ಲಿ ಅಲ್ಲು ಅರ್ಜುನ್ ನ ಎ-11 ಆಗಿಸಲಾಗಿದೆ. ಈ ಎಫ್.ಐ.ಆರ್ ರದ್ದು ಮಾಡಿ ಅಂತ ಅಲ್ಲು ಕೋರ್ಟ್ ಮೆಟ್ಟಿಲೇರಿದ್ರು. ಆದ್ರೆ ಅಷ್ಟರಲ್ಲೇ ಅವ್ರನ್ನ ಬಂದಿಸಲಾಯಿತು. ಹೀಗೆ ತರಾತುರಿಯಲ್ಲಿ ಅಲ್ಲು ಅರ್ಜುನ್ನ ಬಂಧಿಸಿ ಒಂದು ದಿನ ಜೈಲಿನಲ್ಲಿ ಕೊಳೆಯುವಂತೆ ಮಾಡೋದಕ್ಕೆ ಸಿಎಂ ರೇವಂತ್ ರೆಡ್ಡಿ ಕುಮ್ಮಕ್ಕೇ ಕಾರಣ ಅನ್ನೋದು ಪುಷ್ಪನ ಫ್ಯಾನ್ಸ್ ಆರೋಪ.