ಹಿಟ್ಟಿಗೂ ಇದೆ ಎಕ್ಸ್‌ಪೈರಿ ಡೇಟ್: ದೀರ್ಘಕಾಲ ತಾಜಾವಾಗಿಡೋದು ಹೇಗೆ..?

First Published Jan 30, 2021, 2:15 PM IST

ಗೋಧಿ ಹಿಟ್ಟು ಮತ್ತು ಸಂಸ್ಕರಿಸಿದ ಹಿಟ್ಟಿನಿಂದ ಹಿಡಿದು ರಾಗಿ ಹಿಟ್ಟು ಮತ್ತು ಓಟ್ಸ್ ಹಿಟ್ಟಿನವರೆಗೆ, ಮಾರುಕಟ್ಟೆಯಲ್ಲಿ ವಿವಿಧ ಬಗೆಗಳು ಹಿಟ್ಟುಗಳು ಲಭ್ಯವಿವೆ. ಚಪಾತಿ ಊಟದ ಒಂದು ಅವಿಭಾಜ್ಯ ಅಂಗವಾಗಿರುವ ಕಾರಣ ಗೋಧಿ ಹಿಟ್ಟು ಅಥವಾ ಅಟಾ ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಹಿಟ್ಟು. ಆದರೆ ಹಿಟ್ಟು ಸಹ ಅವಧಿ ಮೀರಬಹುದೇ? 

ಸರಿಯಾದ ಶೇಖರಣಾ ತಂತ್ರಗಳ ಮೂಲಕ, ಹಿಟ್ಟನ್ನು ದೀರ್ಘಕಾಲ ತಾಜಾವಾಗಿಡಬಹುದು, ಅದರ ಅವಧಿಯನ್ನು ಹೆಚ್ಚಿಸಬಹುದು. ಸರಿಯಾದ ಸಂಗ್ರಹಣಾ ತಂತ್ರಗಳು ಅಗತ್ಯವಿದೆ. ಹಿಟ್ಟಿನ ಶೆಲ್ಫ್ ಲೈಫ್ ಮತ್ತು ಅದು ಅವಧಿ ಮೀರಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ಪರೀಕ್ಷಿಸುವುದು ಎಂಬುದನ್ನು ತಿಳಿಯಲು ಮುಂದೆ ಓದಿ.
undefined
ಸಂಗ್ರಹ ಸುಳಿವುಗಳು:ಹಿಟ್ಟನ್ನು ಗಾಳಿಯಾಡದ ಡಬ್ಬಕ್ಕೆ ವರ್ಗಾಯಿಸಿ ಮತ್ತು ಸುಲಭವಾಗಿ ಟೈಟ್ ಕ್ಯಾನ್ ನಲ್ಲಿ ಶೇಖರಿಸಿಡಬಹುದು. ಕೀಟಗಳನ್ನು ದೂರ ಇಡಲು ಸೂಕ್ತ ಮುಚ್ಚಳವಿರುವ ಲೋಹದ ಪಾತ್ರೆಗಳಲ್ಲಿ ಇದನ್ನು ಶೇಖರಿಸಿಡುವುದು ಉತ್ತಮ.
undefined
ದೊಡ್ಡ ಪ್ರಮಾಣದಲ್ಲಿ ಹಿಟ್ಟನ್ನು ಖರೀದಿಸಿದರೆ, ಅದನ್ನು ಗಾಳಿಯಾಡದ ಪ್ಲಾಸ್ಟಿಕ್ ಚೀಲಗಳಿಗೆ ವರ್ಗಾಯಿಸಬಹುದು ಮತ್ತು ಅವುಗಳನ್ನು ಫ್ರೀಜ್ ಮಾಡಬಹುದು. ಕೀಟಗಳನ್ನು ತಡೆಯಲು ಅನೇಕರು ಒಂದು ದೊಡ್ಡ ತುಂಡು ಅರಿಶಿನ ಅಥವಾ ಶುಂಠಿಯನ್ನು ಹಿಟ್ಟಿನ ಪಾತ್ರೆಯಲ್ಲಿ ಇಟ್ಟುಕೊಳ್ಳುತಿರುತ್ತಾರೆ.
undefined
ಹಿಟ್ಟನ್ನು ತಾಜಾ ಮತ್ತು ಕೀಟಗಳಿಂದ ದೂರವಿಡಲು ಇನ್ನೊಂದು ಉಪಾಯವೆಂದರೆ ಬೇ ಎಲೆ (ಪಲಾವ್ ಎಲೆ ) ಗಳನ್ನು ಪಾತ್ರೆಯಲ್ಲಿ ಇಟ್ಟುಕೊಳ್ಳುವುದು. 3-4 ಬೇ ಎಲೆಗಳನ್ನು ಸೇರಿಸಿದರೆ ಸಾಕು. ಅಥವಾ ಹಿಟ್ಟಿನ ಪಾತ್ರೆಯ ಸುತ್ತ ಕೆಲವು ಲವಂಗಗಳನ್ನು ಸಿಂಪಡಿಸಬಹುದು. ಇದರಿಂದ ಯಾವುದೇ ರೀತಿಯ ಕ್ರಿಮಿಕೀಟಗಳು ದೂರವಿರಲಿವೆ.
undefined
ಹಿಟ್ಟು ಎಷ್ಟು ಸಮಯ ಬರುತ್ತದೆ ಎಂಬುದನ್ನು ಇದನ್ನು ಹೇಗೆ ಸಂಗ್ರಹಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸರಿಯಾಗಿ ಶೇಖರಿಸಿಟ್ಟರೆ, ಹಿಟ್ಟು ಸುಲಭವಾಗಿ ಕೋಣೆಯ ತಾಪಮಾನದಲ್ಲಿ 6-8 ತಿಂಗಳಕಾಲ ಬಾಳಿಕೆ ಬರುತ್ತದೆ. ಹಿಟ್ಟನ್ನು ಫ್ರಿಜ್ ನಲ್ಲಿ 1 ವರ್ಷದವರೆಗೆ ಮತ್ತು ಫ್ರೀಜರ್ ನಲ್ಲಿ 2 ವರ್ಷಗಳ ವರೆಗೆ ಫ್ರೆಶ್ ಆಗಿ ಇಡಬಹುದು.
undefined
ಬಿಳಿ ಹಿಟ್ಟು ಕಡಿಮೆ ಕೊಬ್ಬಿನ ಅಂಶದ ಕಾರಣದಿಂದ ಹೆಚ್ಚು ಕಾಲ ಬಾಳಿಕೆ ಬರುವಂತ್ತಿದ್ದರೆ, ಪೂರ್ಣ ಗೋಧಿ ಮತ್ತು ಗ್ಲುಟೆನ್ ರಹಿತ ರೂಪಾಂತರಗಳು ಇನ್ನೂ ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತವೆ.
undefined
ಹಿಟ್ಟು ಅವಧಿ ಮೀರಿದೆ ಎಂದು ತಿಳಿಯುವುದು ಹೇಗೆ?ಹಿಟ್ಟಿನ ತಾಜಾತನವನ್ನು ಪರೀಕ್ಷಿಸಲು ಅತ್ಯುತ್ತಮ ವಿಧಾನವೆಂದರೆ ಅದನ್ನು ವಾಸನೆ ನೋಡುವುದು. ತಾಜಾ ಹಿಟ್ಟಿನಲ್ಲಿ ಯಾವಾಗಲೂ ತಟಸ್ಥ ಪರಿಮಳ ಇರುತ್ತದೆ, ಆದರೆ ಅವಧಿ ಮೀರಿದವು ಒಂದು ರೀತಿಯ ವಾಸನೆಯನ್ನು ಹೊಂದಿರುತ್ತದೆ.
undefined
ತಾಜಾತನವನ್ನು ಪರೀಕ್ಷಿಸಲು ಇನ್ನೊಂದು ವಿಧಾನವೆಂದರೆ, ಪರಿಶೀಲಿಸುವುದು. ಹಿಟ್ಟು ತೇವಾಂಶವನ್ನು ಹಿಡಿದರೆ, ಅದು ಸುಲಭವಾಗಿ ಗುರುತಿಸಬಹುದಾದ ಹಿಟ್ಟಿನ ಮುದ್ದೆಗಳು ಮತ್ತು ಅಚ್ಚುಗಳನ್ನು ರಚಿಸುತ್ತದೆ.
undefined
ಗೋಧಿ ಹಿಟ್ಟನ್ನು ದೀರ್ಘಕಾಲ ತಾಜಾವಾಗಿಡಲು ನೀವು ಖರೀದಿಸುವ ಮುನ್ನ ಪ್ಯಾಕೆಟ್ ನ ವಾಯಿದೆ ದಿನಾಂಕವನ್ನು ಯಾವಾಗಲೂ ಪರೀಕ್ಷಿಸುವುದನ್ನು ಖಚಿತಪಡಿಸಿಕೊಳ್ಳಿ.
undefined
click me!