137 ರೂ ಐಸ್‌ಕ್ರೀಮ್ ಆರ್ಡರ್ ಮಾಡಿ 3,000 ರೂಪಾಯಿ ಪರಿಹಾರ ಪಡೆದ ಬೆಂಗಳೂರಿಗ!

By Suvarna NewsFirst Published Apr 29, 2024, 8:22 PM IST
Highlights

ಆನ್‌ಲೈನ್ ಆ್ಯಪ್ ಸ್ವಿಗ್ಗಿ ಮೂಲಕ ಬೆಂಗಳೂರಿನ ಗ್ರಾಹಕ 137 ರೂಪಾಯಿ ಐಸ್‌‌ಕ್ರೀಮ್ ಆರ್ಡರ್ ಮಾಡಿದ್ದಾನೆ. ಆದರೆ ಐಸ್‌ಕ್ರೀಮ್ ಮನೆಗೆ ತಲುಪಲಿಲ್ಲ. ದೂರು ನೀಡಿದ ಗ್ರಾಹಕನಿಗೆ ಹಣ ರೀಫಂಡ್ ಆಗಲಿಲ್ಲ. ಹೀಗಾಗಿ ಗ್ರಾಹಕ ವೇದಿಕೆ ಮೆಟ್ಟಿಲೇರಿದ ಬೆಂಗಳೂರಿಗನಿಗೆ 3,000 ರೂಪಾಯಿ ಪರಿಹಾರ ನೀಡಲು ಸ್ವಿಗ್ಗಿಗೆ ಆದೇಶ ನೀಡಿದೆ.
 

ಬೆಂಗಳೂರು(ಏ.29) ನಗರ ಪ್ರದೇಶಗಳಲ್ಲಿ ಆನ್‌ಲೈನ್ ಮೂಲಕ ಆಹಾರ ಆರ್ಡರ್ ಮಾಡುವರ ಸಂಖ್ಯೆ ಹೆಚ್ಚು. ಇದಕ್ಕಾಗಿ ಹಲವು ಸಂಸ್ಥೆಗಳು ಸೇವೆ ನೀಡುತ್ತಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರಲ್ಲಿ ಬಹುತೇಕ ಎಲ್ಲವೂ ಆನ್‌ಲೈನ್. ಹೀಗೆ ಬೆಂಗಳೂರಿನ ಗ್ರಾಹಕನೊಬ್ಬ ಸ್ವಿಗ್ಗಿ ಮೂಲಕ ಐಸ್‌ಕ್ರೀಮ್ ಆರ್ಡರ್ ಮಾಡಿದ್ದಾನೆ. ಆದರೆ ಗ್ರಾಹಕನ ವಿಳಾಸ ಪತ್ತೆಯಾಗುತ್ತಿಲ್ಲ ಕಾರಣ ನೀಡಿ ಐಸ್‌ಕ್ರೀಮ್ ಡೆಲವರಿ ಮಾಡಿಲ್ಲ. ರೊಚ್ಚಿಗೆದ್ದ ಗ್ರಾಹಕ ದೂರು ದಾಖಲಿಸಿದರೂ ಹಣ ರೀಫಂಡ್ ಕೂಡ ಆಗಿಲ್ಲ. ಗ್ರಾಹಕರ ವಿವಾದಗಳ ಪರಿಹಾರ ಆಯೋಗ ಈ ಪ್ರಕರಣ ವಿಚಾರಣೆ ನಡೆಸಿ ಸ್ವಿಗ್ಗಿಗೆ 5,000 ರೂಪಾಯಿ ದಂಡ ವಿಧಿಸಿದೆ. ಇದರಲ್ಲಿ 3000 ರೂಪಾಯಿ ಗ್ರಾಹಕನಿಗೆ ಪರಿಹಾರ ನೀಡಲು ಸೂಚಿಸಿದೆ.

ಬೆಂಗಳೂರಿನ ಗ್ರಾಹಕ ಜನವರಿ 26, 2024ರಂದು ಸ್ವಿಗ್ಗಿ ಮೂಲಕ ನಟ್ಟಿ ಡೆತ್ ಬೈ ಚಾಕೋಲೇಟ್ ಐಸ್ ಕ್ರೀಮ್ ಆರ್ಡರ್ ಮಾಡಿದ್ದಾನೆ. ಸ್ವಿಗ್ಗಿ ಆ್ಯಪ್‌ನಲ್ಲಿ ಹುಡುಕಿದಾಗ ಈ ಐಸ್‌ಕ್ರೀಮ್ ಪತ್ತೆಯಾಗಿತ್ತು. ಇದರ ಬೆಲೆ 137 ರೂಪಾಯಿ. ಜೊತೆಗೆ ಡೆಲಿವರಿ ಹಾಗೂ ಪ್ಯಾಕಿಂಗ್ ಚಾರ್ಜ್ ಒಟ್ಟು 50 ರೂಪಾಯಿ ಹೆಚ್ಚಿಗೆ ನೀಡಬೇಕಿತ್ತು. ಹಣ ಪಾವತಿಸಿದ ಗ್ರಾಹಕ ಐಸ್ ಕ್ರೀಮ್ ಆರ್ಡರ್ ಮಾಡಿದ್ದಾನೆ.

ಪ್ರಯಾಣಿಕನ ಜೊತೆ ಚಾಲಕನ ಗೂಂಡಾ ವರ್ತನೆ, 1 ಲಕ್ಷ ರೂ ಪರಿಹಾರ ನೀಡಲು ಓಲಾಗೆ ಸೂಚನೆ!

ಐಸ್‌ಕ್ರೀಮ್ ಆರ್ಡರ್ ಮಾಡಿದ 34 ನಿಮಿಷದ ಬಳಿಕ ಸ್ವಿಗ್ಗಿ ಡೆಲಿವರಿ ಬಾಯ್ ನಿಗದಿತ ಶಾಪ್‌ನಿಂದ ಐಸ್‌ಕ್ರೀಮ್ ಸ್ವೀಕರಿಸಿ ಡೆಲಿವರಿಗೆ ತೆರಳಿದ್ದಾನೆ.  ಆದರೆ ಎಷ್ಟು ಹೊತ್ತಾದರೂ ಐಸ್ ಕ್ರೀಮ್ ಮನೆಗೆ ತಲುಪಿಲ್ಲ. ಕರೆ ಮಾಡಿ ವಿಚಾರಿಸಿದಾಗ ವಿಳಾಸ ತಿಳಿಯುತ್ತಿಲ್ಲ ಎಂದಿರುವುದಾಗಿ ಗ್ರಾಹಕ ಹೇಳಿದ್ದಾನೆ. ವಿಳಾಸ ತಿಳಿಸಿದರೂ ಐಸ್ ಕ್ರೀಮ್ ಮಾತ್ರ ತಲುಪಿಲ್ಲ. ಒಂದೆರೆಡು ಗಂಟೆಗಳ ಬಳಿಕ ಸ್ವಿಗ್ಗಿ ಆ್ಯಪ್‌ನಲ್ಲಿ ಐಸ್ ಕ್ರೀಮ್ ಡೆಲಿವರಿ ಮಾಡಲಾಗಿದೆ ಎಂದು ದಾಖಲಿಸಲಾಗಿದೆ.

ಇದರಿಂದ ರೊಚ್ಚಿಗೆದ್ದ ಗ್ರಾಹಕ ಸ್ವಿಗ್ಗಿಗೆ ದೂರು ನೀಡಿದ್ದಾನೆ. 24 ಗಂಟೆ ಕಳೆದರೂ 187 ರೂಪಾಯಿ ರೀಫಂಡ್ ಆಗಲಿಲ್ಲ. ಕೆಲ ದಿನ ಕಾದ ಗ್ರಾಹಕ ಸ್ವಿಗ್ಗಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾನೆ. ಇದಕ್ಕೂ ಸ್ವಿಗ್ಗಿಯಿಂದ ಉತ್ತರ ಬರಲಿಲ್ಲ. ಹೀಗಾಗಿ ನೇರವಾಗಿ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ಮೆಟ್ಟಿಲೇರಿದ ಗ್ರಾಹಕ ದೂರು ದಾಖಲಿಸಿದ್ದಾನೆ. ತನ್ನಲ್ಲಿರುವ ದಾಖಲೆಗಳನ್ನು ನೀಡಿದ್ದಾನೆ.

ಕೇವಲ 5 ವಾಶ್‌ಗೆ ಬಣ್ಣ ಕಳೆದುಕೊಂಡ 4499 ರೂಪಾಯಿಯ ಜೀನ್ಸ್‌: ಕೇಸ್ ಗೆದ್ದು ಪರಿಹಾರ ಪಡೆದ ಗ್ರಾಹಕ

ವಿಚಾರಣೆ ನಡೆಸಿದ ಆಯೋಗ, ಸ್ವಿಗ್ಗಿ ಸಂಸ್ಥೆಗೆ 5,187 ರೂಪಾಯಿ ದಂಡ ವಿಧಿಸಿದೆ. ಇದರಲ್ಲಿ 2000 ರೂಪಾಯಿ ಲಿಟಿಗೇಶನ್ ಚಾರ್ಜಸ್ ಹಾಗೂ ಇನ್ನುಳಿದ 3,000 ರೂಪಾಯಿಯನ್ನು ಗ್ರಾಹನಿಗೆ ಪರಿಹಾರವಾಗಿ ನೀಡಲು ಆದೇಶ ನೀಡಲಾಗಿದೆ.
 

click me!