ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಭತ್ಯೆ, ಸಬ್ಸಿಡಿ ಪ್ರಮಾಣ ಏರಿಕೆ

By Kannadaprabha NewsFirst Published Apr 30, 2024, 9:31 AM IST
Highlights

ಲೋಕಸಭಾ ಚುನಾವಣೆಗಳ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಬ್ಬಂದಿ ಸಚಿವಾಲಯ ಭರ್ಜರಿ ಸಿಹಿಸುದ್ದಿ ನೀಡಿದೆ. 2024ರ ಜ.1ರಿಂದಲೇ ಅನ್ವಯವಾಗುವಂತೆ ಹಲವು ಭತ್ಯೆ ಮತ್ತು ಸಬ್ಸಿಡಿ ಏರಿಕೆ ಮಾಡಿರುವುದಾಗಿ ಅದು ಪ್ರಕಟಿಸಿದೆ. 

ನವದೆಹಲಿ: ಲೋಕಸಭಾ ಚುನಾವಣೆಗಳ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಬ್ಬಂದಿ ಸಚಿವಾಲಯ ಭರ್ಜರಿ ಸಿಹಿಸುದ್ದಿ ನೀಡಿದೆ. 2024ರ ಜ.1ರಿಂದಲೇ ಅನ್ವಯವಾಗುವಂತೆ ಹಲವು ಭತ್ಯೆ ಮತ್ತು ಸಬ್ಸಿಡಿ ಏರಿಕೆ ಮಾಡಿರುವುದಾಗಿ ಅದು ಪ್ರಕಟಿಸಿದೆ. ತುಟ್ಟಿ ಭತ್ಯೆ ಶೇ.50ರಷ್ಟು ಏರಿಕೆಯಾದಾಗ ಸಹಜವಾಗಿಯೇ ಭತ್ಯೆ ಮತ್ತು ಸಬ್ಸಿಡಿ ಶೇ.25ರಷ್ಟು ಹೆಚ್ಚಳ ಆಗಬೇಕೆಂಬ ನಿಯಮ ಇದೆ. ಅದರಂತೆ ಮಕ್ಕಳ ಶಿಕ್ಷಣ ಭತ್ಯೆ 2812 ರು.ಗೆ ಮತ್ತು ಹಾಸ್ಟೆಲ್‌ ಸಬ್ಸಿಡಿ ಮೊತ್ತವನ್ನು ಮಾಸಿಕ 8437 ರು.ಗೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಜೊತೆಗೆ ಅಂಗವಿಕಲ ಮಹಿಳಾ ನೌಕರರಿಗೆ ಅನ್ವಯವಾಗುವ ಶಿಶುಪಾಲನಾ ಭತ್ಯೆಯನ್ನು ತಿಂಗಳಿಗೆ ₹3,750ಕ್ಕೆ ಏರಿಕೆ ಮಾಡಲಾಗಿದೆ. ಜೊತೆಗೆ ನೌಕರರಿಗೆ ಅಂಗವಿಕಲ ಮಕ್ಕಳಿದ್ದಲ್ಲಿ ನೀಡಲಾಗುವ ಭತ್ಯೆಯನ್ನು ದುಪ್ಪಟ್ಟು ಮಾಡಲಾಗಿದ್ದು, ತಿಂಗಳಿಗೆ ₹5,625ಕ್ಕೆ ಏರಿಕೆ ಮಾಡಲಾಗಿದೆ.

ಕೆಲಸಕ್ಕೆ ಸೇರಿದ 3 ತಿಂಗಳಿಗೆ ಓಲಾ ಸಿಇಒ ರಾಜೀನಾಮೆ: ಶೇ.10ರಷ್ಟು ಹುದ್ದೆ ಕಡಿತ

ನವದೆಹಲಿ: ಕಾರು ಮತ್ತು ಆಟೋಗಳ ಬಾಡಿಗೆ ಸೇವೆ ನೀಡುವ ಓಲಾ ಕಂಪನಿಯ ಸಿಒಒ ಹೇಮಂತ್‌ ಬಕ್ಷಿ, ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೇ ಕಂಪನಿಗೆ ವಿದಾಯ ಹೇಳಿದ್ದಾರೆ. ಓಲಾ ಷೇರುಮಾರುಕಟ್ಟೆಗೆ ಪ್ರವೇಶ ಮಾಡಲು ಚರ್ಚಿಸುವ ಕುರಿತು ಹೂಡಿಕೆ ಬ್ಯಾಂಕ್‌ಗಳ ಜೊತೆ ಮಾತುಕತೆ ಆರಂಭಿಸಿದ ಬೆನ್ನಲ್ಲೇ ನಡೆದ ಬೆಳವಣಿಗೆ ಕಂಪನಿಗೆ ಸ್ವಲ್ಪ ಹಿನ್ನಡೆ ಉಂಟು ಮಾಡಿದೆ. ಈ ನಡುವೆ ವೆಚ್ಚ ಕಡಿತದ ಸಲುವಾಗಿ, ಐಪಿಒ ಬಿಡುಗಡೆಗೆ ಮುನ್ನ ಶೇ.10ರಷ್ಟು ಸಿಬ್ಬಂದಿಗಳನ್ನು ತೆಗೆದು ಹಾಕಲು ಕಂಪನಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ನೌಕರರಿಗೆ ಶೇ.3.75 ತುಟ್ಟಿ ಭತ್ಯೆ ಹೆಚ್ಚಿಸಿದ ಸರ್ಕಾರ; ಜನವರಿಯಿಂದಲೇ ಪೂರ್ವಾನ್ವಯ!

ಶರಾವತಿ 2000 ಮೆ.ವ್ಯಾ ಪ್ರಾಜೆಕ್ಟ್‌ ಹೈದರಾಬಾದ್‌ ಮೂಲದ ಮೇಘಾ ಕಂಪನಿಗೆ

ನವದೆಹಲಿ: ಭಾರತದಲ್ಲೇ ಅತಿದೊಡ್ಡ ಪಂಪ್‌ ಸ್ಟೋರೇಜ್‌ ವಿದ್ಯುತ್‌ ಉತ್ಪಾದನಾ ಘಟಕವಾಗಿರುವ ಶರಾವತಿ ನದಿಯ 200 ಮೆಗಾವ್ಯಾಟ್‌ ಜಲವಿದ್ಯುತ್‌ ಉತ್ಪಾದನಾ ಪ್ರಾಜೆಕ್ಟ್‌ ಹೈದರಾಬಾದ್‌ ಮೂಲದ ಮೇಘಾ ಎಂಜಿನಿಯರಿಂಗ್‌ ಅಂಡ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪನಿಯ ಪಾಲಾಗಿದೆ. ಈ ಕುರಿತು ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ‘8 ಸಾವಿರ ಕೋಟಿ ರು. ಮೌಲ್ಯದ ಶರಾವತಿ ಜಲವಿದ್ಯುತ್‌ ಉತ್ಪಾದನಾ ಘಟಕದ ಪ್ರಾಜೆಕ್ಟ್‌ ಮೇಘಾ ಕಂಪನಿಯ ಪಾಲಾಗಿದೆ. ಲಾರ್ಸೆನ್‌ ಅಂಡ್‌ ಟರ್ಬೋ ಕಂಪನಿಯು ಹರಾಜಿನಲ್ಲಿ ಭಾಗವಹಿಸಿದ್ದರೂ ತಾಂತ್ರಿಕ ಕಾರಣದಿಂದಾಗಿ ಸುಪ್ರೀಂ ಕೋರ್ಟ್‌ ಅವರ ಭಾಗವಹಿಸುವಿಕೆಯನ್ನು ರದ್ದು ಮಾಡಿ ನಮಗೆ ಪ್ರಾಜೆಕ್ಟ್‌ ಒಪ್ಪಿಸಿದೆ’ ಎಂದು ತಿಳಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್‌ ಜಾರಿಗೆ ಬದ್ಧ: ಸಚಿವ ಸಂತೋಷ್‌ ಲಾಡ್‌

ರಕ್ಷಣಾ ಸಚಿವರ ಬಳಿ ವಾಹನ ಇಲ್ಲ!

ನವದೆಹಲಿ: ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಸೋಮವಾರ ಲಖನೌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ತಮ್ಮ ಬಳಿ 7.36 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಅವರು ಘೋಷಿಸಿಕೊಂಡಿದ್ದಾರೆ. ತಮ್ಮ ಬಳಿ ಯಾವುದೇ ವಾಹನ ಇಲ್ಲ, ಆದರೆ 10000 ರು. ಮೌಲ್ಯದ ಒಂದು ರಿವಾಲ್ವರ್‌ ಇದೆ. ಕೈಯಲ್ಲಿ 75000 ರು. ನಗದು, ಉತ್ತರಪ್ರದೇಶದಲ್ಲಿ ಕೃಷಿ ಜಮೀನು, ಲಖನೌದಲ್ಲಿ ಮನೆ ಇದೆ. ಇನ್ನು ಪತ್ನಿ ಬಳಿ 750 ಗ್ರಾಂ ಚಿನ್ನ, 12 ಕೆಜಿ ಬೆಳ್ಳಿ ಎಂದು ಘೋಷಿಸಿದ್ದಾರೆ.

click me!