ರಾಮ್‌ದೇವ್ ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು!

By Kannadaprabha NewsFirst Published Apr 30, 2024, 9:00 AM IST
Highlights

ಆರ್ಯುವೇದ ಉತ್ಪನ್ನಗಳ ಕುರಿತು ವಿವಾದಾತ್ಮಕ ಜಾಹೀರಾತು ನೀಡಿದ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಲೈಸೆನ್ಸ್‌ ಅನ್ನು ರದ್ದು ಮಾಡಿ ಉತ್ತರಾಖಂಡ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಕುರಿತು ಅದು ಸೋಮವಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಕೆ ಮಾಡಿದೆ.

ನವದೆಹಲಿ: ಆರ್ಯುವೇದ ಉತ್ಪನ್ನಗಳ ಕುರಿತು ವಿವಾದಾತ್ಮಕ ಜಾಹೀರಾತು ನೀಡಿದ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಲೈಸೆನ್ಸ್‌ ಅನ್ನು ರದ್ದು ಮಾಡಿ ಉತ್ತರಾಖಂಡ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಕುರಿತು ಅದು ಸೋಮವಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಕೆ ಮಾಡಿದೆ.

ಪತಂಜಲಿ ಸಂಸ್ಥೆಗೆ ಸೇರಿದ ದಿವ್ಯಾ ಫಾರ್ಮಸಿ ಉತ್ಪಾದಿಸುವ ‘ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್‌’, ‘ಸ್ವಾಸರಿ ವಟಿ’, ‘ಬ್ರೋನ್‌ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್‌’, ‘ಮುಕ್ತಾ ವಟಿ ಎಕ್ಸ್ಟ್ರಾ ಪವರ್‌’, ‘ಲಿಪಿಡೋಮ್‌’, ‘ಬಿಪಿ ಗ್ರಿಟ್‌’, ‘ಮಧುಗ್ರಿಟ್‌’, ‘ಮಧುನಾಶಿನಿ ವಟಿ ಎಕ್ಟ್ರಾ ಪವರ್‌’, ‘ಲಿವಾಮೃತ್‌ ಅಡ್ವಾನ್ಸ್‌’, ‘ಲಿವೋಗ್ರಿಟ್‌’ ಮತ್ತು ‘ಐಗ್ರಿಟ್‌ ಗೋಲ್ಡ್‌’ ಉತ್ಪನ್ನಗಳ ಲೈಸೆನ್ಸ್‌ ರದ್ದು ಮಾಡಲಾಗಿದೆ.

ರಾಮ್‌ದೇವ್ 'ಪತಂಜಲಿ' ಕಂಪೆನಿ ಆರಂಭಿಸಲು ಬರೋಬ್ಬರಿ 55490 ಕೋಟಿ ದಾನ ಮಾಡಿದ ಉದ್ಯಮಿ ದಂಪತಿಗಳಿವರು!

ಕೋವಿಡ್‌ ವೇಳೆ ಪತಂಜಲಿ ಸಂಸ್ಥೆಯು ಅಲೋಪತಿ ವೈದ್ಯಕೀಯ ಪದ್ಧತಿ ಟೀಕಿಸಿ ಜಾಹೀರಾತು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಇತ್ತೀಚೆಗೆ ಪತಂಜಲಿ ಕ್ಷಮೆ ಕೂಡಾ ಕೇಳಿತ್ತು. ಮಂಗಳವಾರ ಅದರ ವಿಚಾರಣೆ ಮುಂದುವರೆಯಲಿದ್ದು, ಅದಕ್ಕೂ ಮುನ್ನ ಈ ಲೈಸೆನ್ಸ್‌ ರದ್ದು ಆದೇಶ ಹೊರಬಿದ್ದಿದೆ.

ಸುಪ್ರೀಂ ಚಾಟಿ ಬೀಸಿದ ಬಳಿಕ ಮತ್ತೆ ಪೇಪರ್‌ಗಳಲ್ಲಿ ದೊಡ್ಡ ಜಾಹೀರಾತು ನೀಡಿ ಕ್ಷಮೆ ಕೇಳಿದ ಪತಂಜಲಿ ಬಾಬಾ

click me!