ಕ್ಯಾಡ್ಬರಿ ಚಾಕೋಲೇಟ್‌ಗಳಲ್ಲಿ ಹುಳ ಕಂಡು ಬಂದ ಕೆಲವೇ ಸಮಯದಲ್ಲಿ ಇದೀಗ ಡೈರಿ ಮಿಲ್ಕ್ ಚಾಕ್ಲೇಟ್‌ನಲ್ಲಿ ಫಂಗಸ್ ಕಂಡುಬಂದಿದೆ. ಕಳಪೆ ಗುಣಮಟ್ಟ ಪುನರಾವರ್ತನೆಯಾಗಿ ಸಾಬೀತಾದರೂ ಕ್ರಮ ಕೈಗೊಳ್ಳಲ್ಲ ಏಕೆ ಎಂದ ನೆಟ್ಟಿಗರು.
ಕೆಲ ದಿನಗಳ ಹಿಂದಷ್ಟೇ ಕ್ಯಾಡ್ಬರಿ ಡೈರಿಮಿಲ್ಕ್ ಸಿಲ್ಕ್ ಚಾಕೋಲೇಟ್‌ಗಳಲ್ಲಿ ಹುಳಗಳು ಕಂಡುಬಂದಿದ್ದನ್ನು ವ್ಯಕ್ತಿಯೊಬ್ಬರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯವು ಆ ಚಾಕೋಲೇಟ್‌ಗಳು ಕಳಪೆ ಗುಣಮಟ್ಟದವಾಗಿದ್ದು ಸೇವನೆಗೆ ಅರ್ಹವಿಲ್ಲ ಎಂದಿದ್ದರು. ಅಷ್ಟಾದರೂ ಕಂಪನಿಯು ಇಂಥ ಕೀಳು ಗುಣಮಟ್ಟದ ಚಾಕೋಲೇಟ್ ತಯಾರಿಕೆ ಮುಂದುವರಿಸಿದೆ ಎಂಬ ಆಕ್ರೋಶ ವ್ಯಕ್ತವಾಗಲು ಕಾರಣ ಇದೀಗ ಅದೇ ಕ್ಯಾಡ್ಬರಿ ಡೈರಿಮಿಲ್ಕ್ ಸಿಲ್ಕ್ ಚಾಕೋಲೇಟ್‌ನಲ್ಲಿ ಫಂಗಸ್ ಕಂಡು ಬಂದಿರುವುದು.
ಹೌದು, ಹೈದರಾಬಾದ್ ನಿವಾಸಿಯೊಬ್ಬರು ತಾವು ಕೊಂಡ ಚಾಕೋಲೇಟ್‌ನ ಈ ಕಳಪೆ ಅವಸ್ಥೆಯ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಾಕೋಲೇಟ್ ಜನವರಿ 2024ರಲ್ಲಿ ತಯಾರಾಗಿದ್ದು, ಎಕ್ಸ್‌ಪೈರಿ ದಿನಾಂಕ ಇನ್ನೂ 1 ವರ್ಷವಿದೆ. ಹಾಗಿದ್ದೂ ಚಾಕೋಲೇಟ್ ಶಿಲೀಂಧ್ರ ಹೊಂದಿದೆ. ಜೊತೆಗೆ ಹಿಂಭಾಗದಲ್ಲಿ ರಂಧ್ರಗಳು ಬಿದ್ದಿವೆ. ಮೇಲಿನ ಭಾಗ ಕರಗಿ ಕೊಳೆತಂತೆ ಕಾಣುತ್ತದೆ.
undefined
ಇದು ಪೋಸ್ಟ್ ಆಗುತ್ತಿದ್ದಂತೆಯೇ ಕ್ಯಾಡ್ಬರಿ ಕಂಪನಿ ಹಾಗೂ ಆಹಾರ ಅಧಿಕಾರಿಗಳ ವಿರುದ್ಧ ನೆಟ್ಟಿಗರು ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
'ಪದೇ ಪದೇ ಈ ಚಾಕೋಲೇಟ್ ಕಳಪೆ ಗುಣಮಟ್ಟದ್ದು ಎಂದು ಸಾಬೀತಾದರೂ ಮತ್ತೆ ಇದನ್ನೇ ಜನರು ಖರೀದಿಸುವುದು ಏಕೆಂದು ನನಗೆ ಅರ್ಥವಾಗುವುದಿಲ್ಲ' ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ, 'ನಮ್ಮ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ತಿಳಿದಿರುವ ಕಾರಣ ಅವರು ಕೆಟ್ಟ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ. ಮತ್ತು ನೀವು ಸರ್ಕಾರವನ್ನು ಟೀಕಿಸಿದರೆ, ಅವರು ನಿಮ್ಮ ವಿರುದ್ಧವೇ ಕ್ರಮ ತೆಗೆದುಕೊಳ್ಳುತ್ತಾರೆ' ಎಂದು ಹೇಳಿದ್ದಾರೆ.
ಅಬಿನಾಶ್ ಸಮಲ್ ಎಂಬ ಬಳಕೆದಾರ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದು, 'ಕ್ಯಾಡ್ಬರಿ ಸಿಲ್ಕ್ ಈಗ ನಿಜಕ್ಕೂ ಸಿಲ್ಕ್ ಹೊಂದಿದೆ' ಎಂದಿದ್ದಾರೆ.
ಅನೇಕ ಬಳಕೆದಾರರು ಗ್ರಾಹಕ ಸಂರಕ್ಷಣಾ ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಸಲಹೆ ನೀಡಿದ್ದಾರೆ.
ಏತನ್ಮಧ್ಯೆ, ದೂರನ್ನು ಅಂಗೀಕರಿಸಿದ ಕ್ಯಾಡ್ಬರಿ, 'ಹಾಯ್, ಮೊಂಡೆಲೆಜ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಹಿಂದೆ ಕ್ಯಾಡ್ಬರಿ ಇಂಡಿಯಾ ಲಿಮಿಟೆಡ್) ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ, ಮತ್ತು ನೀವು ಅಹಿತಕರ ಅನುಭವವನ್ನು ಹೊಂದಿದ್ದೀರಿ ಎಂದು ನಾವು ವಿಷಾದಿಸುತ್ತೇವೆ' ಎಂದಿದೆ.
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಸಾಮಾಜಿಕ ಕಾರ್ಯಕರ್ತ ರಾಬಿನ್ ಝಾಕಿಯಸ್, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಟ್ಯಾಗ್ ಮಾಡಿದ್ದು, ಅಸುರಕ್ಷಿತ ಆಹಾರವನ್ನು, ವಿಶೇಷವಾಗಿ ಮಕ್ಕಳು ಹೆಚ್ಚಾಗಿ ಸೇವಿಸುವ ಉತ್ಪನ್ನಗಳನ್ನು ಪೂರೈಸಲು ಎಫ್‌ಎಂಸಿಜಿ ಕಂಪನಿಗಳನ್ನು ಹೊಣೆಗಾರರಾಗಿಸಿ ಮತ್ತು ದಂಡ ವಿಧಿಸಲು ಇದು ಉತ್ತಮ ಸಮಯ ಎಂದು ಹೇಳಿದ್ದಾರೆ.
The manufacturing of these dairy milk is January 2024, expiry is best before 12 months from manufacture.
Found them like this when I opened it. Look into this pic.twitter.com/ZcAXF2Db6x