ಪ್ರಸಿದ್ಧ ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ ಫುಡ್ ರಿಯಾಲಟಿ ಶೋನಲ್ಲಿ ಪಾನಿಪುರಿ ಹವಾ!

By Suvarna News  |  First Published Apr 29, 2024, 11:52 AM IST

ಪಾನಿಪುರಿ ಹೆಸರು ಹೇಳ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಮಧ್ಯರಾತ್ರಿ ಎಬ್ಬಿಸಿ ಕೊಟ್ರೂ ಬಾಯಿ ಚಪ್ಪರಿಸಿ ತಿನ್ನುವ ತಿಂಡಿಗಳಲ್ಲಿ ಇದೂ ಒಂದು. ಈಗ ಪಾನಿಪುರಿ ನಮ್ಮಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. 
 


ನಿಮಗೆ ಸ್ಟ್ರೀಟ್ ಫುಡ್ ನಲ್ಲಿ ಯಾವುದು ಬೆಸ್ಟ್ ಅಂತಾ ಕೇಳಿದ್ರೆ ಬಹುತೇಕ ಭಾರತೀಯರ ಬಾಯಲ್ಲಿ ಬರುವ ಹೆಸರು ಪಾನಿಪುರಿ. ಹಾಗಾಗಿಯೇ ಭಾರತದ ಬೀದಿ ಬೀದಿಯಲ್ಲಿ ನಾಲ್ಕೈದು ಪಾನಿಪುರಿ, ಗೊಲ್ಗಪ್ಪಾ ಅಂಗಡಿ ಇದ್ರೂ ಎಲ್ಲ ಅಂಗಡಿಯಲ್ಲಿ ಜನ ಇರ್ತಾರೆ. ಮಟಮಟ ಮಧ್ಯಾಹ್ನ ಗೊಲ್ಗಪ್ಪಾ ತಿನ್ನುವ ಜನ ಇದ್ದಾರೆ ಅಂದ್ರೆ ನೀವೇ ಊಹಿಸಿ, ಭಾರತದಲ್ಲಿ ಪಾನಿಪುರಿ ಎಷ್ಟು ಫೇಮಸ್ ಅಂತ. ಈ ಪಾನಿಪುರಿ ಈಗ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ ಸೀಸನ್ 16ನಲ್ಲೂ ಈಗ ಪಾನಿಪುರಿ ಹವಾ ಕಾಣಸಿಗ್ತಿದೆ. 

ಮಾಸ್ಟರ್‌ಚೆಫ್ (MasterChef) ಆಸ್ಟ್ರೇಲಿಯಾ ಸೀಸನ್ 16 ಕುಕಿಂಗ್ ರಿಯಾಲಿಟಿ ಶೋನಲ್ಲಿ ಭಾರತೀಯ ಮೂಲದ  ಸುಮೀತ್ ಸಹಗಲ್ (Sumeet Sahagal) ಸ್ಪರ್ಧಿಯಾಗಿದ್ದಾರೆ. ಈ ಬಾರಿ ಸುಮೀತ್ ಸಹಗಲ್, ಮಾಸ್ಟರ್ ಚೆಫ್ ಜಡ್ಜ್ (Judge) ಗಳಿಗೆ ಪಾನಿಪುರಿ ರುಚಿ ತೋರಿಸಿದ್ದಾರೆ. ಪಾನಿಪುರಿ ಹೇಗೆ ರೆಡಿ ಮಾಡ್ಬೇಕು ಎಂಬುದನ್ನು ವಿವರಿಸುತ್ತಾ ಸುಮೀತ್ ಸಹಗಲ್, ಜಡ್ಜ್ ಗಳಿಗೆ ಪಾನಿಪುರಿ ನೀಡ್ತಾರೆ. ಅದನ್ನು ತಿನ್ನುತ್ತಿದ್ದಂತೆ ಜಡ್ಜ್ ಗಳ ರಿಯಾಕ್ಷನ್ ಅಧ್ಬುತವಾಗಿತ್ತು.

Latest Videos

undefined

ಬಿಸಿ ನೀರಿಗೆ ತಣ್ಣೀರು ಮಿಕ್ಸ್ ಮಾಡಿ ಕುಡೀತೀರಾ? ಆಹಾರದ ವಿಷಯದಲ್ಲಿ ಈ 4 ತಪ್ಪು ಮಾಡ್ಲೇಬೇಡಿ!

Masterchefau ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಸುಮೀತ್ ಸಹಗಲ್, ಜಡ್ಜ್ ಗಳಿಗೆ ಹೇಗೆ ಪಾನಿಪುರಿ ತಯಾರಿಸೋದು ಎಂಬುದನ್ನು ಹೇಳ್ತಾರೆ. ಮೊದಲು ಗೊಲ್ಗಪ್ಪಾ ಒಡೆಯಿರಿ, ಇದ್ರೊಳಗೆ ಮೊದಲು ಮಸಾಲೆ ಬೆರೆಸಿದ ಆಲೂಗಡ್ಡೆಯನ್ನು ಹಾಕಿ. ಆ ನಂತ್ರ ಪುದೀನಾ - ಕೊತ್ತಂಬರಿ ಚಟ್ನಿಯನ್ನು ಅದಕ್ಕೆ ಹಾಕಿ. ಆ ಮೇಲೆ ಖರ್ಜೂರ ಮತ್ತು ಹುಣಸೆ ಹಣ್ಣಿನ ಚಟ್ನಿಯನ್ನು ಹಾಕಿ. ಅದಕ್ಕೆ ತಾಜಾ, ಮಸಾಲೆಯುಕ್ತ ಪಾನಿಹಾಕಿ. ನಂತ್ರ ತಿನ್ನಿ ಎನ್ನುತ್ತ ಸುಮೀತ್ ಪಾನಿಪುರಿ ನೀಡ್ತಾರೆ. ಜಡ್ಜ್ ಪಾನಿಪುರಿ ಬಾಯಿಗೆ ಹಾಕಿದ ತಕ್ಷಣ ಹೀಗಿದೆ ಎಂಬುದನ್ನು ತಮ್ಮ ರಿಯಾಕ್ಷನ್ ಮೂಲಕ ತೋರಿಸ್ತಾರೆ.

ಒಬ್ಬ ಜಡ್ಜ್ ಪಾನಿಪುರಿ ತಿನ್ನುತ್ತಲೇ ಖುಷಿಯಲ್ಲಿ ರಿಯಾಕ್ಷನ್ ನೀಡ್ತಾರೆ. ಅವರ ರಿಯಾಕ್ಷನ್ ಎಲ್ಲ ಭಾರತೀಯರ ಖುಷಿ ಹೆಚ್ಚಿಸೋದು ಸುಳ್ಳಲ್ಲ. ವಿಡಿಯೋದ ಕೊನೆಯಲ್ಲಿ ಎಲ್ಲ ಜಡ್ಜ್ ಸುಮೀತ್ ಅವರನ್ನು ಹೊಗಳ್ತಿದ್ದಾರೆ. ಮಾಸ್ಟರ್ ರಿಂದ ಪಾನಿ ಪುರಿ ಪಾಠ ಎಂದು ಈ ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಸುಮೀತ್ ಅಹಗಲ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾನಿಪುರಿ ರೆಸಿಪಿ ಮತ್ತು ಶೋದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಭಾರತೀಯ ಬೀದಿ ಆಹಾರ ಮತ್ತು ಚಾಟ್ ಒಂದು ಸಾಮ್ರಾಜ್ಯವಾಗಿದ್ದರೆ, ಪಾನಿ ಪುರಿ ಯಾವಾಗಲೂ ಆಳುವ ರಾಜನಾಗಿರುತ್ತಾನೆ. ಇದು ಭಾರತೀಯ ಬೀದಿ ಆಹಾರದ ಧ್ವಜಧಾರಿ ಎಂದು ಸುಮೀತ್ ಸಹಗಲ್ ಶೀರ್ಷಿಕೆ ಹಾಕಿದ್ದಾರೆ. ಜಡ್ಜ್ ರುಚಿಯನ್ನು  ಆನಂದಿಸುವುದನ್ನು ನೋಡಿ ಸಮಾಧಾನವಾಯ್ತು, ಗೌರವದ ಅನುಭವವಾಯ್ತು ಎಂದು ಸುಮೀತ್ ಬರೆದಿದ್ದಾರೆ. 

20 ವರ್ಷ ಬ್ರೇನ್ ಸ್ಟಡಿ ಮಾಡಿದ ವೈದ್ಯೆ ಮೆದುಳಿನ ಆರೋಗ್ಯಕ್ಕೆ ಶಿಫಾರಸು ಮಾಡೋ ಸೂಪರ್‌ಫುಡ್ ಇದು!

ಸುಮೀತ್ ಸಹಗಲ್ ಮತ್ತು ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ ಸೀಸನ್ 16 ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಸಾಕಷ್ಟು ಲೈಕ್ಸ್ ಬಂದಿದೆ. ಜನರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಪಾನಿಪುರಿ ರೆಸಿಪಿ ಕೇಳಿದ್ರೆ ಮತ್ತೆ ಕೆಲವರು ಇಷ್ಟು ಪ್ರಸಿದ್ಧ ಜೆಡ್ಜ್ ಗೆ ತಮ್ಮ ಪಾನಿಪುರಿ ತಿನ್ನಿಸೋದು ಖುಷಿ ವಿಷ್ಯ ಎಂದು ಕಮೆಂಟ್ ಮಾಡಿದ್ದಾರೆ. ವಿಶ್ವದಲ್ಲಿ ಯಾವುದೇ ವ್ಯಕ್ತಿ ಬಾಯಿಗೆ ಪಾನಿಪುರಿ ಹಾಕಿದ ತಕ್ಷಣ ಇದೇ ರೀತಿ ರಿಯಾಕ್ಷನ್ ನೀಡ್ತಾರೆ. ಇದ್ರಲ್ಲಿ ಇನ್ನೊಂದು ವಿಶೇಷ ಅಂದ್ರೆ ನೀವು ಒಂದು ಪಾನಿಪುರಿ ತಿಂದ್ಮೇಲೆ ಅಲ್ಲಿಗೆ ನಿಲ್ಲಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ ಸೀಸನ್ 16 ಪ್ರಸಿದ್ಧ ಶೋಗಳಲ್ಲಿ ಒಂದು. ಒಳ್ಳೆ ಚೆಫ್ ಆಗಲು ತಮ್ಮ ಸೇಲ್ಸ್ ಮ್ಯಾನೇಜ್ಮೆಂಟ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

click me!