ಮಾಡೆಲ್ ಆಗಿ ಹೆಸರು ಮಾಡಿದ್ದ ಜೇನಿಯಾ ಕಂಜೋ ಗಂಡನಿಂದಲೇ ಹತ್ಯೆಯಾಗಿದ್ದಾಳೆ.
undefined
ಇಬ್ಬರ ನಡುವೆ ಬಹಳ ದಿನಗಳಿಂದ ಕಲಹ ನಡೆಯುತ್ತಿದ್ದು ಮಾಡೆಲ್ ಡಿವೋರ್ಸ್ ಪಡೆದುಕೊಳ್ಳುವ ತೀರ್ಮಾನ ಮಾಡಿದ್ದರು.
undefined
ಪೊಲೀಸರಿಗೆ ದೂರು ನೀಡಿದ್ದ ಮಾಡೆಲ್ ಗಂಡನಿಂದ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿದ್ದಳು.
undefined
ಆರೋಪಿ ಪತಿಯನ್ನು ಇಬ್ರಾಹಿಂ ಗಝಲ್ ಎಂದು ಗುರುತಿಸಲಾಗಿದೆ.
undefined
ಈ ಬಗ್ಗೆ ದೂರು ದಾಖಲಿಸಿ ಬೇರೆಯಾಗುವ ಆಲೋಚನೆಯಲ್ಲಿ ಇದ್ದರು.
undefined
ಲೆಬನಾನ್ ನಲ್ಲಿ ಖ್ಯಾತಿ ಪಡೆದ ಮಾಡೆಲ್
undefined
ಟಿವಿ ಶೋದಲ್ಲಿಯೂ ಕಾಣಿಸಿಕೊಂಡಿದ್ದರು.
undefined
ಬೈರುತ್ ನಲ್ಲಿರುವ ಮನೆಯಲ್ಲಿ ಗಂಡ ಆಕೆಯನ್ನು ಹತ್ಯೆ ಮಾಡಿದ್ದಾನೆ.
undefined
ಲೆಬನಾನ್ ಸುದ್ದಿ ವಾಹಿನಿಯೊಂದು ಇದಕ್ಕೆ ಸಂಬಂಧಿಸಿ ಆಡಿಯೋ ಒಂದನ್ನು ಪ್ರಸಾರ ಮಾಡಿದ್ದು ಆರೋಪಿ ತನ್ನ ಸಹೋದರಿಯ ಜತೆಗೆ ಕೊಲೆ ಬಗ್ಗೆ ಮಾತನಾಡಿರುವುದು ಇದೆ.
undefined
ಆಕೆ ಎಷ್ಟು ಹೇಳಿದರೂ ಸುಮ್ಮನಾಗಲಿಲ್ಲ. ಅಂತಿಮವಾಗಿ ಹತ್ಯೆ ಮಾಡಬೇಕಾಯಿತು ಎಂದಿದ್ದಾನೆ.
undefined
ಕೆಲ ತಿಂಗಳ ಹಿಂದಷ್ಟೇ ಇಬ್ಬರ ವಿವಾಹ ಆಗಿತ್ತು.
undefined
ಆರೋಪಿಯ ಮೇಲೆ ವಾರಂಟ್ ಜಾರಿಯಾಗಿದ್ದು ಬಂಧನಲಕ್ಕೆ ಬಲೆ ಬೀಸಲಾಗಿದೆ .
undefined