ಬಿಜೆಪಿ ಜಯಮೃತ್ಯುಂಜಯ ಸ್ವಾಮಿ ಪರವಾಗಿ ಇರಲಿದೆ. ಅವರ ಹೋರಾಟವನ್ನು ಬೆಂಬಲಿಸಲಿದೆ ಎಂದು ತಿಳಿಸಿದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ
ಬಳ್ಳಾರಿ(ಡಿ.12): ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಒತ್ತಾಯಿಸಿ ನಡೆಸಿದ ಹೋರಾಟವನ್ನು ಹತ್ತಿಕ್ಕಲು ಲಾಠಿ ಚಾರ್ಜ್ ಮಾಡಿರುವ ಪೊಲೀಸರ ನಡೆ ಹೇಯವಾದದ್ದು. ಹಿರಿಯರು, ವಯಸ್ಸಾದವರು ಎನ್ನದೇ ಭಯಾನಕವಾಗಿ ಲಾಠಿ ಪ್ರಹಾರ ನಡೆಸಿದ್ದು, ಈ ಕೃತ್ಯಕ್ಕೆ ಮುಖ್ಯಮಂತ್ರಿಯೇ ನೇರ ಹೊಣೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಲಾಠಿ ಚಾರ್ಜ್ ಮಾಡುವ ಮೂಲಕ ರಾಜ್ಯ ಸರ್ಕಾರ ಸೇಡಿನ ರೀತಿಯಲ್ಲಿ ವರ್ತಿಸಿದೆ. ಹೋರಾಟಗಾರರ ಮೇಲೆ ಬ್ರಿಟಿಷರಂತೆ ಹೀನಾಯವಾಗಿ ಪೊಲೀಸರು ಹಲ್ಲೆಗೈದಿದ್ದಾರೆ. ಸಮುದಾಯದ ಜಯಮೃತ್ಯುಂಜಯ ಶ್ರೀಗಳನ್ನು ಬಂಧಿಸಲಾಗಿದೆ. ಮುಖಂಡರಾದ ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಎಡಿಜಿಪಿ ಹಿತೇಂದ್ರ ಬ್ರಿಟಿಷ್ ಕಾಲದ ರೀತಿ ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂದು ದೂರಿದರು.
ಪಂಚಮಸಾಲಿ ಹೇಳಿಕೆ ತಿರುಚುತ್ತಿರುವ ಸಿಎಂ ಸಿದ್ದರಾಮಯ್ಯ: ಸಂಸದ ಬೊಮ್ಮಾಯಿ
ಬಿಜೆಪಿ ಜಯಮೃತ್ಯುಂಜಯ ಸ್ವಾಮಿ ಪರವಾಗಿ ಇರಲಿದೆ. ಅವರ ಹೋರಾಟವನ್ನು ಬೆಂಬಲಿಸಲಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.
undefined
ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್‌ಮೋಕಾ, ಹಿರಿಯ ಮುಖಂಡರಾದ ಡಾ.ಮಹಿಪಾಲ್, ಡಾ.ಬಿ.ಕೆ. ಸುಂದರ್, ಅಡವಿಸ್ವಾಮಿ, ಶರಣು, ಕೆ.ಆರ್.ಮಲ್ಲೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಅಂಜನಾದ್ರಿ ಅಭಿವೃದ್ಧಿಗೆ ₹240 ಕೋಟಿ: ಜನಾರ್ದನ ರೆಡ್ಡಿ
ಹಂಪಿ ಅಭಿವೃದ್ಧಿಯ ಮಾದರಿಯಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯನ್ನು ₹240 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಅನುದಾನ ನೀಡಿದ್ದರು. ಆ ಹಣದಲ್ಲಿ ಎರಡು ಯಾತ್ರಿ ನಿವಾಸಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ. ಅಂಜನಾದ್ರಿ ಬೆಟ್ಟ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗಾಗಿ 70 ಎಕರೆ ಜಮೀನು ಖರೀದಿಸಲಾಗುತ್ತಿದೆ. ಆಂಜನೇಯ ದೇವಾಲಯದ ಗೋಪುರಕ್ಕೆ ಚಿನ್ನದ ಲೇಪನವಾಗಲಿದೆ. 10 ಸಾವಿರ ಜನರು ಕುಳಿತು ಊಟ ಮಾಡುವಷ್ಟು ದೊಡ್ಡದಾದ ಪ್ರಸಾದ ನಿಲಯವನ್ನು ನಿರ್ಮಿಸಲಾಗುತ್ತಿದೆ. ಕೇಂದ್ರದಿಂದ ₹1350 ಕೋಟಿ ಅನುದಾನ ಪಡೆಯಲು ಯೋಜನೆ ರೂಪಿಸಲಾಗುತ್ತಿದೆ. ಇನ್ನು ಎರಡು ವರ್ಷಗಳಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.
ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಸಂವಿಧಾನಕ್ಕೆ ವಿರುದ್ಧವಾಗಿದೆ; ಸಿಎಂ ಸಿದ್ದರಾಮಯ್ಯ!
ಪಂಚಮಸಾಲಿ ಹೋರಾಟ: ಪೊಲೀಸರಿಂದಲೇ ಕಲ್ಲು ತೂರಾಟ, ಕೂಡಲ ಶ್ರೀ
ಬೆಳಗಾವಿ: 2A ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಹೋರಾಟ ಮಾಡುತ್ತಾ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಶಾಂತ ರೀತಿಯ ಹೋರಾಟ ಮಾಡ್ತಾ ಬಂದಿದ್ವಿ. ನ್ಯಾಯಯುತ ಹೋರಾಟಕ್ಕೆ ನಿರಂತರ ಪ್ರಯತ್ನ ಮಾಡಿದ್ದೆವು. ಎಂದಿಗೂ ನಮ್ಮ ಜನ ಅಶಾಂತಿಗೆ ಅವಕಾಶ ಕೊಟ್ಟಿಲ್ಲ. 12 ಜಿಲ್ಲೆಗಳಲ್ಲಿ ಹೋರಾಟ ಮಾಡಿದಾಗ ಯಾವುದೇ ದೌರ್ಬಲ್ಯ ಆಗಿಲ್ಲ. ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದನೆ ಮಾಡಿಲ್ಲ ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, ಸುವರ್ಣ ಸೌಧ ಬಳಿ ನ್ಯಾಯ ಕೇಳಬೇಕು ಎಂದು ಉಗ್ರ ಹೋರಾಟ ಮಾಡಿದ್ವಿ. ನಮ್ಮ ಪದಾಧಿಕಾರಿಗಳಿಗೆ ಪೊಲೀಸ್ ಇಲಾಖೆಯಿಂದ ನಿರಂತರ ಬೆದರಿಕೆ ಹಾಕಲಾಗಿದೆ. ರ್ಯಾಲಿಗೆ ಬರುವ ಟ್ರ್ಯಾಕ್ಟರ್ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊಡಸಿದ್ರು. ಕೊಂಡಸಕೊಪ್ಪ ಬಳಿ ರ್ಯಾಲಿ ಮಾಡಿ ಸಿಎಂ ಸಿದ್ದರಾಮಯ್ಯ ಒತ್ತಡ ತರುಲು ಪ್ರಯತ್ನ ಮಾಡಿದ್ದೆವು ಎಂದು ಹೇಳಿದ್ದರು.