ಮಂಡ್ಯ: ಅನೈತಿಕ ಸಂಬಂಧ ಶಂಕೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

By Girish Goudar  |  First Published Dec 12, 2024, 8:24 PM IST

ಕಳೆದ 7-8 ವರ್ಷಗಳಿಂದ KRSನಲ್ಲಿ ಚೇತನ್ ಬೇಕರಿಯೊಂದನ್ನ ನಡೆಸುತ್ತಿದ್ದ. ಸಂತೋಷ್ ಎಂಬ ಯುವಕನ ಪ್ರೇಯಸಿ ಜೊತೆಗೆ ಚೇತನ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಸಾಕಷ್ಟು ಬಾರಿ ಇದೇ ವಿಚಾರಕ್ಕೆ ಚೇತನ್ ಹಾಗೂ ಸಂತೋಷ್ ನಡುವೆ ಕಿರಿಕ್ ನಡೆದಿತ್ತು. 

40 Years Old Man Killed at KRS in Mandya grg

ಮಂಡ್ಯ(ಡಿ.12): ವ್ಯಕ್ತಿಯೊಬ್ಬನನ್ನ ಬರ್ಬರ ಹತ್ಯೆಗೈದ ಘಟನೆ ಜಿಲ್ಲೆಯ KRS ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಅನೈತಿಕ ಸಂಬಂಧ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನ ಬರ್ಬರ ಹತ್ಯೆ ಮಾಡಲಾಗಿದೆ. ಕೆಆರ್ ನಗರ ಮೂಲದ ಚೇತನ್(40) ಮೃತ ದುರ್ದೈವಿ.

ಕೊಲೆಯಾದ ಚೇತನ್ ಶ್ರೀರಂಗಪಟ್ಟಣದ ಬೋರೆಆನಂದೂರು ಗ್ರಾಮದ ಯುವತಿ ಜೊತೆ ಮದುವೆಯಾಗಿ KRSನಲ್ಲಿ ವಾಸವಾಗಿದ್ದ. ಕಳೆದ 7-8 ವರ್ಷಗಳಿಂದ KRSನಲ್ಲಿ ಚೇತನ್ ಬೇಕರಿಯೊಂದನ್ನ ನಡೆಸುತ್ತಿದ್ದ. ಸಂತೋಷ್ ಎಂಬ ಯುವಕನ ಪ್ರೇಯಸಿ ಜೊತೆಗೆ ಚೇತನ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಸಾಕಷ್ಟು ಬಾರಿ ಇದೇ ವಿಚಾರಕ್ಕೆ ಚೇತನ್ ಹಾಗೂ ಸಂತೋಷ್ ನಡುವೆ ಕಿರಿಕ್ ನಡೆದಿತ್ತು. 

Tap to resize

Latest Videos

ಅಮ್ಮ-ಮಗಳು ಇಬ್ಬರಿಗೂ ಅವನೇ ಬೇಕು! ಅಡ್ಡಿಯಾಗಿದ್ದ ಯಜಮಾನನಿಗೆ ಮುಹೂರ್ತ ಇಟ್ಟರು!

ಕಡೆಗೆ ಚೇತನ್ ಹತ್ಯೆಗೆ ಸಂತೋಷ್ ನಿರ್ಧರಿಸಿದ್ದ.  ಇಂದು ಸಂಜೆ 5:40ರ ಸಮಯದಲ್ಲಿ ಸ್ನೇಹಿತನ ಜೊತೆಗೂಡಿ ಚೇತನ್ ಮೇಲೆ ಮಾರಕಾಸ್ತ್ರಗಳಿಂದ ಸಂತೋಷ್ ಹಲ್ಲೆ ನಡೆಸಿದ್ದಾನೆ. ಬೇಕರಿ ಮುಂಭಾಗವೇ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಂತೋಷ್ ಪರಾರಿ‌ಯಾಗಿದ್ದಾನೆ. 

ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೇತನ್‌ನನ್ನು ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. KRS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಚುಚ್ಚಿ ಕೊಂದ ಚಿರಂಜೀವಿ, ಚಿನ್ನದಂಥ ಗಂಡನಿದ್ದರೂ ವಾಟ್ಸಪ್‌ ಪ್ರೇಮಿಗೆ ಬಲಿಯಾದ ತೃಪ್ತಿ!

ಚಿಕ್ಕಮಗಳೂರು: ಚಿನ್ನದಂಥ ಗಂಡನಿದ್ದರೂ ವಾಟ್ಸಾಪ್‌ ಪ್ರೇಮಿಯ ಹಿಂದೆ ಬಿದ್ದ 25 ವರ್ಷದ ಗೃಹಿಣಿ ದಾರುಣವಾಗಿ ಕೊಲೆಯಾಗಿದ್ದಾಳೆ. ಆಕೆಯ ವಾಟ್ಸಾಪ್‌ ಸ್ನೇಹಿತನೇ ಆಕೆಯನ್ನು ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ. ಚಾಕುವಿನಿಂದ ಚುಚ್ಚಿದರೂ ಆಕೆ ಸಾವು ಕಾಣದೇ ಇದ್ದಾಗ ಮನೆಯ ಹಿಂದಿನ ಕೆರೆಗೆ ಆಕೆಯನ್ನು ದೂಡಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅನೈತಿಕ ಸಂಬಂಧಕ್ಕೆ ಬಿತ್ತು 25 ವರ್ಷದ ಗೃಹಿಣಿ ಸಾವು ಕಂಡಿರುವುದು ಜಿಲ್ಲೆಯಲ್ಲಿ ಆಘಾತ ಮೂಡಿಸಿದೆ. ಆಕೆಯ ವಾಟ್ಸಾಪ್‌ ಸ್ನೇಹಿತನೇ ಬರ್ಬರವಾಗಿ ಹತ್ತೆ ಮಾಡಿದ್ದಾನೆ. ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಿಚ್ಚಬ್ಬಿ ಗ್ರಾಮದ ತೃಪ್ತಿ 25 ಮೃತ ದುರ್ದೈವಿ. ವಾಟ್ಸಾಪ್ ಸ್ನೇಹಿತ ಚಿರಂಜೀವಿ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದರು.

ಕ್ಯಾಮೆರಾ ಮುಂದೆ ಗೋಳಾಡಿದ್ದ ಹೆಂಡತಿನೇ ಗಂಡನ ಹೆಣ ಹಾಕಿಸಿದ್ಳು; ಅಮಾಯಕ ಪತಿಯ ಕೊಲೆ ರಹಸ್ಯ

ಚಾಕುವಿನಲ್ಲಿ ಚುಚ್ಚಿದರೂ, ಆಕೆ ಸಾಯದೇ ಇದ್ದಾಗ ತೃಪ್ತಿಯನ್ನು ಚಿರಂಜೀವಿ ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ. ಚಿರಂಜೀವಿ ಹಾಗೂ ತೃಪ್ತಿ ವಾಟ್ಸಾಪ್‌ ಮೂಲಕ ಸ್ನೇಹಿತರಾಗಿದ್ದರು. ಬಳಿಕ ಇದು ಪ್ರೀತಿಗೆ ತಿರುಗಿತ್ತು. ತಿಂಗಳ ಹಿಂದೆ ಚಿರಂಜೀವಿ ಹಾಗೂ ತೃಪ್ತಿ ಮನೆ ಬಿಟ್ಟು ಓಡಿ ಹೋಗಿದ್ದರು. ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೂಡ ದಾಖಲಾಗಿತ್ತು. ವಾಪಸ್ ಬಂದ ಬಳಿಕ ಮನೆಯವರ ರಾಜಿ ಬಳಿಕ ಆತನ ಜೊತೆ ಮಾತು ಹಾಗೂ ಸ್ನೇಹವನ್ನೂ ತೃಪ್ತಿ ಬಿಟ್ಟಿದ್ದಳು.

ಶನಿವಾರ ಏಕಾಏಕಿ ಮನೆಗೆ ಬಂದು ಮಕ್ಕಳ ಎದುರೇ ಚಾಕುವಿನಿಂದ ಚುಚ್ಚಿ ತೃಪ್ತಿ ಕೊಲೆಗೆ ಯತ್ನಿಸಿದ್ದಾಣೆ. ಚಾಕುವಿನಿಂದ ಚುಚ್ಚಿ ಸಾಯಲಿಲ್ಲ ಎಂದು ಮನೆ ಹಿಂದಿನ ಕೆರೆಗೆ ಆಕೆಯನ್ನು ಎಸೆದಿದ್ದಾನೆ. ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

vuukle one pixel image
click me!
vuukle one pixel image vuukle one pixel image