ಕುಟುಂಬ ನಿರ್ಹವಣೆಗಾಗಿ ಗಂಡನಿಗೆ ತಿಳಿಯದಂತೆ ಮಗು ಮಾರಿದ ತಾಯಿ!

Dec 12, 2024, 8:22 PM IST

ಬಡತನ ಎನ್ನುವುದು ಎಷ್ಟು ಕ್ರೂರ ಎಂದು ಅದನ್ನು ಅನುಭವಿಸಿದವರಿಗೆ ಗೊತ್ತು. ಆದರೆ, ದುಡಿದು ತಂದು ಹಾಕುವ ಗಂಡ ಹಾಗೂ ಮನೆಯಲ್ಲಿನ ಗಂಡಸರು ಮನೆ ತುಂಬಾ ಮಕ್ಕಳನ್ನು ಮಾಡಿ ಅಲ್ಪ ದುಡಿಮೆಯಿಂದ ಜೀವನ ನಡೆಸುವ ಪರಿಸ್ಥಿತಿಯನ್ನು ಹೆಂಡತಿಗೆ ತಂದು ಹಾಕುತ್ತಾರೆ. ಇಂದಿನ ಬೆಲೆ ಏರಿಕೆ ಜಮಾನದಲ್ಲಿ ಪಕ್ಕದ ಮನೆಯಲ್ಲಿ ಹೆಣ ಬಿದ್ದರೂ ತಿರುಗಿ ನೋಡದ ಸಿಟಿ ಜನರ ನಡುವೆ ಊಟಕ್ಕೆ ಗತಿ ಇಲ್ಲದಂತೆ ಜೀವನ ಮಾಡುವುದು ನಿಜಕ್ಕೂ ನರಕದಂತೆ ಭಾಸವಾಗುತ್ತದೆ. ತಾನು ಗಂಡ ಬರುವವರೆಗೂ ಹಸಿವಿನಿಂದ ಬಳಲಿದರೂ ಸಹಿಸಿಕೊಳ್ಳಬಹುದು. ಆದರೆ, ಒಬ್ಬ ತಾಯಿಯಾಗಿ ಮಕ್ಕಳು ಹಸಿವಿನಿಂದ ಬಳಲುತ್ತಿದ್ದರೆ ಹೇಗೆ ತಾನೆ ಸಹಿಸಿಕೊಳ್ಳುತ್ತಾಳೆ ಹೇಳಿ.

ಅದೇ ರಿತಿ ಮನೆ ತುಂಬಾ ಮಕ್ಕಳಿದ್ದರೂ ಗಂಡನ ದಿನಗೂಲಿ ಮೇಲೆಯೇ ಜೀವನ ನಡೆಸುತ್ತಿದ್ದ ಹೆಂಡತಿ ಇದೀಗ ತನ್ನ ಸ್ವಂತ ಮಗುವೊಂದನ್ನು ಕುಟುಂಬ ನಿರ್ಹಣೆಗಾಗಿ ಮಾರಾಟ ಮಾಡಿದ ದಯನೀಯ ಸ್ಥಿತಿಯ ಘಟನೆ ರಾಮನಗರದ ಸಿಟಿಯಲ್ಲಿ ನಡೆದಿದೆ. ತನ್ನ ಒಂದು ತಿಂಗಳ ಹಸುಗೂಸನ್ನು 1.5 ಲfಷ ರೂ. ಹಣಕ್ಕೆ ಮಾರಾಟ ಮಾಡಿ ಬಂದಿದ್ದಾಳೆ. ಕೂಲಿ ಕೆಲಸ ಮಾಡುತ್ತಾ ಬಡತನದಲ್ಲಿ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದ ಗಂಡ ತನ್ನ ಚಿಕ್ಕ ಮಗುವೆಲ್ಲಿ ಎಂದು ಹೆಂಡತಿಯನ್ನು ಕೇಳಿದರೆ ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿರುವುದಾಗಿ ಸುಳ್ಳು ಹೇಳಿದ್ದಾಳೆ. ಈ ಘಟನೆ ನಡೆದು ಒಂದು ತಿಂಗಳ ನಂತರ ಬೆಳಕಿಗೆ ಬಂದಿದ್ದು, ಅಕ್ರಮವಾಗಿ ಮಗು ಮಾರಾಟ ಮಾಡಿದ್ದ ತಾಯಿ ನಸ್ರೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 6 ವರ್ಷದ ಹಿಂದೆ ಸದ್ದಾಂ ಮತ್ತು ನಸ್ರೀನ್ ಮದುವೆ ಮಾಡಿಕೊಂಡಿದ್ದರು. ರಾಮನಗರದಲ್ಲಿ ವಿವಿಧ ಅಂಗಡಿ, ಮಯಂಗಟ್ಟು ಹಾಗೂ ಇತರೆ ಮನೆ ಕೆಲಸ ಸೇರಿದಂತೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಗಂಡನಿಗೆ ಗೊತ್ತಿಲ್ಲದೆ ಮಗು ಮಾರಾಟ ಮಾಡಿದ ಪತ್ನಿ ಇದೀಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.