ಬೆಂಗ್ಳೂರಲ್ಲಿ ನಿಲ್ಲದ ಬೀದಿ ನಾಯಿ ಹಾವಳಿ, ಶಾಲಾ ವಿದ್ಯಾರ್ಥಿ ಮೇಲೆ ದಾಳಿ: ಜನ್ರಿಗಿಲ್ಲ ಸುರಕ್ಷತೆಯ ಗ್ಯಾರಂಟಿ?

ಬೆಂಗ್ಳೂರಲ್ಲಿ ನಿಲ್ಲದ ಬೀದಿ ನಾಯಿ ಹಾವಳಿ, ಶಾಲಾ ವಿದ್ಯಾರ್ಥಿ ಮೇಲೆ ದಾಳಿ: ಜನ್ರಿಗಿಲ್ಲ ಸುರಕ್ಷತೆಯ ಗ್ಯಾರಂಟಿ?

Published : Dec 12, 2024, 06:54 PM IST

ಮಕ್ಕಳನ್ನ ಸ್ಕೂಲಿಗೆ ಕಳುಹಿಸಲು ಕೂಡ ಕಷ್ಟವಾಗ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಟ್ರು ಯಾವುದೇ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳಿಂದ ನಮ್ಮನ್ನ ರಕ್ಷಣೆ ಮಾಡಿ ಅಂತ ಬಿಬಿಎಂಪಿಗೆ ಕನಕನಗರದ ನಿವಾಸಿಗಳ ಮನವಿ ಮಾಡಿಕೊಂಡಿದ್ದಾರೆ. 

ಬೆಂಗಳೂರು(ಡಿ.12): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿವೆ ರಕ್ಕಸ ನಾಯಿಗಳು ಮಕ್ಕಳನ್ನೇ ಟಾರ್ಗೆಟ್ ಮಾಡಿವೆ. ಈ ಬಗ್ಗೆ  ಬಿಬಿಎಂಪಿಗೆ ದೂರು‌ ನೀಡಿದ್ರು‌ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆಯಿಂದ ‌ಮಕ್ಕಳನ್ನ ಹೊರಗಡೆ ಕಳುಹಿಸಲು ಪೋಷಕರು ಭಯ ಪಡುತ್ತಿದ್ದಾರೆ. ಸುಲ್ತಾನ್ ಪಾಳ್ಯ, ಕನಕನಗರದ 6 ನೇ ಎ ಕ್ರಾಸ್ ನಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಬೀದಿ ನಾಯಿಗಳ‌ ಕಾಟಕ್ಕೆ ಜನರು ಹೈರಾಣಾಗಿದ್ದಾರೆ. 

ಡೆಡ್ಲಿ‌ ನಾಯಿಗಳು ಮಕ್ಕಳು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಮೂರು ಜನರನ್ನ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇಮ್ರಾನ್ ಎಂಬುವರ ಮಕ್ಕಳಿಗೆ ನಾಯಿ ಕಚ್ಚಿದೆ.  ಇದು ಎರಡನೇ ಬಾರಿಗೆ ನನ್ನ ಮಗನಿಗೆ ಬೀದಿ ನಾಯಿ ಕಚ್ಚಿದೆ ಎಂದು ಇಮ್ರಾನ್ ತಿಳಿಸಿದ್ದಾರೆ. 

ಆಸ್ಪತ್ರೆಯಲ್ಲಿ ದರ್ಶನ್ ಹೈಡ್ರಾಮಾ! ಮಧ್ಯಂತರ ಜಾಮೀನು ವಿಸ್ತರಣೆಯಾಗುತ್ತಿದ್ದಂತೆ ಕಳ್ಳಾಟ!

ಸಂಜೆ ಹಾಗೂ ‌ಬೆಳಿಗ್ಗೆ ನಾಯಿಗಳ ಕಾಟ ಹೆಚ್ಚಿದೆ. ನಾಯಿ ಕಾಟದ ಬಗ್ಗೆ ‌ಬಿಬಿಎಂಪಿಗೆ ದೂರು ಸಹ ಕೊಡಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ‌ಮೂವರಿಗೆ ನಾಯಿ ಕಚ್ಚಿದೆ. ಆದ್ರೆ ಪಕ್ಕದ ಮನೆಯವರು ಬೀದಿ ನಾಯಿಗಳಿಗೆ ಊಟ ಹಾಕ್ತಾರೆ. ನಾಯಿಗಳಿಂದ ತೊಂದರೆ ಬಗ್ಗೆ ಅವರ ಗಮನಕ್ಕೂ ತರಲಾಗಿದೆ. ಆದ್ರೆ ಇದ್ಯಾವುದನ್ನ ಲೆಕ್ಕಿಸದೆ ಬೀದಿ ನಾಯಿಗಳಿಗೆ ಊಟ ಹಾಕೋದನ್ನ ನಿಲ್ಲಿಸಿಲ್ಲ. ನಾಯಿಗಳಿಂದ ಜನರಿಗೆ ತೊಂದರೆ ಆಗ್ತಿದೆ ಅಂದ್ರೂ ಕೂಡ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ‌ಮಕ್ಕಳನ್ನ ಸ್ಕೂಲಿಗೆ ಕಳುಹಿಸಲು ಕೂಡ ಕಷ್ಟವಾಗ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಟ್ರು ಯಾವುದೇ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳಿಂದ ನಮ್ಮನ್ನ ರಕ್ಷಣೆ ಮಾಡಿ ಅಂತ ಬಿಬಿಎಂಪಿಗೆ ಕನಕನಗರದ ನಿವಾಸಿಗಳ ಮನವಿ ಮಾಡಿಕೊಂಡಿದ್ದಾರೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more