ಮೈಸೂರು: ಮನೆ, ಕಾರಿನಲ್ಲಿ ದಾಸ್ತಾನು ಮಾಡಿದ್ದ ಗಾಂಜಾ ವಶಕ್ಕೆ, ಓರ್ವನ ಬಂಧನ

Published : Dec 12, 2024, 06:40 PM IST
ಮೈಸೂರು: ಮನೆ, ಕಾರಿನಲ್ಲಿ ದಾಸ್ತಾನು ಮಾಡಿದ್ದ ಗಾಂಜಾ ವಶಕ್ಕೆ, ಓರ್ವನ ಬಂಧನ

ಸಾರಾಂಶ

ಗಾಂಜಾ ಮಾರಾಟ ತಡೆಗಟ್ಟಲು ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳಲ್ಲಿ ನಿರಾಸಕ್ತಿ ಇದ್ದರಿಂದ ಲೀಲಾಜಾಲವಾಗಿ ಎಲ್ಲೆಂದರಲ್ಲಿ ಯುವಕರ ಕೈಯಲ್ಲಿ ದೊರೆಯುವಂತೆ ಗಾಂಜಾ ಮಾರಾಟಗಾರರು ಯಶಸ್ವಿಯಾಗಿದ್ದರು. 

ಕೆ.ಆರ್. ನಗರ(ಡಿ.12): ವಾರದಿಂದ ಹೊಂಚು ಹಾಕಿ ಕಾದು ಕೊನೆಗೂ ಮನೆ ಮತ್ತು ಕಾರಿನಲ್ಲಿ ಮೂಟೆಯಲ್ಲಿ ದಾಸ್ತಾನು ಮಾಡಿದ್ದ ಗಾಂಜಾ ಹಾಗೂ ಓರ್ವ ವ್ಯಕ್ತಿಯನ್ನು ಕೆ.ಆರ್. ನಗರ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. 

ಭೇರ್ಯ ಸಮೀಪದ ಚಿಕ್ಕ ಭೇರ್ಯ ಗ್ರಾಮದಲ್ಲಿ ದಾಸ್ತಾನು ಇಟ್ಟಿದ ಕಾರು, ಒರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಕೆ. ಆ‌ರ್.ಪೇಟೆ ತಾಲೂಕಿನ ರಜಿಕ್ ಪಾಷ ಬಂಧಿತ ಆರೋಪಿ. ವರ್ಷದಿಂದ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಹೆಚ್ಚಾಗಿ ಗಾಂಜಾ ಮಾರಾಟ ಜಾಲ ದೊಡ್ಡದಾಗಿ ಬೆಳದಿತ್ತು, ಆದರೆ ಗಾಂಜಾ ಮಾರಾಟ ತಡೆಗಟ್ಟಲು ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳಲ್ಲಿ ನಿರಾಸಕ್ತಿ ಇದ್ದರಿಂದ ಲೀಲಾಜಾಲವಾಗಿ ಎಲ್ಲೆಂದರಲ್ಲಿ ಯುವಕರ ಕೈಯಲ್ಲಿ ದೊರೆಯುವಂತೆ ಗಾಂಜಾ ಮಾರಾಟಗಾರರು ಯಶಸ್ವಿಯಾಗಿದ್ದರು. 

ಗಂಗಾವತಿ: ಗಾಂಜಾ ಸೇದುವವರನ್ನು ಪತ್ತೆ ಹಚ್ಚಲು ಮಾರಿಜೋನಾ ಕಿಟ್‌

ಇತ್ತೀಚಿಗೆ ಅಬಕಾರಿ ಇಲಾಖೆಗೆಇನ್ಸ್‌ ಪೆಕ್ಟರ್ ಆಗಿ ಬಂದ ವೈ.ಎಸ್. ಲೋಕೇಶ್ ಕಳೆದ ಒಂದು ತಿಂಗಳಿಂದ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಗಸ್ತು ತಿರುಗಿ ಮಾಹಿತಿ ಪಡೆದು ಗಾಂಜಾ ಸರಬರಾಜಾಗುವ ಮೂಲ ಆಧರಿಸಿ ಮೊದಲಿಗೆ ಕೆ.ಆರ್. ನಗರ ಪಟ್ಟಣದ ಬಸ್ ಡಿಪೋ ಪಕ್ಕದ ರಸ್ತೆಯ ಪೊದೆಯಲ್ಲಿ ಬೆಳದಿದ್ದ 150 ಗ್ರಾಂ ತೂಕದ ಗಾಂಜಾ ಗಿಡ ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಡಿ. 9 ರ ರಾತ್ರಿ ಪಟ್ಟಣದ ಮಧುವನಹಳ್ಳಿ ರಸ್ತೆಯ ಟಿ. ಮರಿಯಪ್ಪ ಕಾಲೇಜು ಮುಂಬಾಗ ರಾತ್ರಿ 8.30ರ ಸಮಯದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿ ಒಂದು ದ್ವಿಚಕ್ರ ವಾಹನ ಹಾಗೂ 52 ಗ್ರಾಂ ಬೀಜಮಿಶ್ರಿತ ಒಣಗಾಂಜಾ ಜಪ್ತಿ ಮಾಡಿ ಫಹಾದ್ ಮತ್ತು ಜಿಬ್ರಾನ್ ಎಂಬ ಆರೋಪಿಗಳನ್ನು ಬಂದಿಸಿ ಅವರ ವಿರುದ್ಧ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. 

ದೊಡ್ಡ ಜಾಲದ ಬಗ್ಗೆ ಮಾಹಿತಿ: 

ಭೇರ್ಯ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ಕೆ. ಆ‌ರ್.ಪೇಟೆ ಕಡೆಯಿಂದ ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳು ಬರುತ್ತಾರೆ ಎಂಬ ಖಚಿತ ಮಾಹಿತಿ ಪಡೆದು ವಾರದಿಂದ ಈ ಭಾಗದಲ್ಲಿ ಸಿಬ್ಬಂದಿಗಳಜೊತೆಮಷ್ಟಿಯಲ್ಲಿಸುತ್ತಿ ಭೇರ್ಯ ಸಮೀಪದ ಚಿಕ್ಕ ಭೇರ್ಯ ಗ್ರಾಮದ ಮಸೀದಿ ಹಿಂಭಾಗದಲ್ಲಿರುವ ಜಬೀವುಲ್ಲಾ ಎಂಬವವರಿಗೆ ಸೇರಿದ ವಾಸದ ಮನೆಯಲ್ಲಿ ಮತ್ತು ಮನೆಯ ಮುಂಭಾಗದಲ್ಲಿರುವ ಸ್ಯಾಂಟ್ರೋ ಕಾರಿನ ಮೇಲೆ ದಾಳಿ ನಡೆಸಿ ಶೋಧನೆ ನಡೆಸಲಾಗಿ ಒಟ್ಟು 8.658 ಕೆ.ಜಿ ಬೀಜ ಮಿಶ್ರಿತ ಒಣ ಗಾಂಜಾವನ್ನು ಅಕ್ರಮವಾಗಿ ಮಾರಾಟದ ಉದ್ದೇಶದಿಂದ ದಾಸ್ತಾನಿಟ್ಟಿರುವುದನ್ನು ಪತ್ತೆ ಮಾಡಿ ಮಾಲನ್ನು ವಶ ಪಡಿಸಿಕೊಂಡಿದ್ದಾರೆ. 

ಕೊಡಗು: ಥೈಲ್ಯಾಂಡ್‌ನಿಂದ ಭಾರತದ ಮೂಲಕ ದುಬೈಗೆ ಗಾಂಜಾ ಸಾಗಾಟ, 7 ಅಂತಾರಾಷ್ಟ್ರೀಯ ಪೆಡ್ಲರ್ಸ್‌ ಅರೆಸ್ಟ್‌

ಚಿಕ್ಕಭೇರ್ಯ ಗ್ರಾಮದ ಜಬೀವುಲ್ಲಾ ಪರಾರಿಯಾಗಿದ್ದು, ರಜಿಕ್ ಪಾಷ ಹಾಗೂ ಪರಾರಿಯಾದ ಜಬೀವುಲ್ಲಾ ಎಂಬವವರ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ. 

ಜಿಲ್ಲಾ ಅಬಕಾರಿ ಆಯುಕ್ತ ಡಾ. ಮಹಾದೇವಿ ಬಾಯಿ ಹಾಗೂ ಹುಣಸೂರು ಉಪ ವಿಭಾಗದ ಅಧೀಕ್ಷಕ ಎಂ.ಡಿ.ಮೋಹನ್ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಮುಖ್ಯಪೇದೆ ಎಸ್.ಮಲ್ಲೇಶಮತ್ತು ಅಬಕಾರಿ ಪೇದೆಗಳಾದ ಎಂ.ಎಸ್. ಪುಟ್ಟಸ್ವಾಮಿಗೌಡ, ಶಿವಪ್ಪ ಮಾಳಪ್ಪಭಾನುಸಿ, ಬಿ.ಎನ್. ಸಂದೀಪ ಮತ್ತು ವಾಹನ ಚಾಲಕ ಕೆ. ಮಹದೇವ ಭಾಗವಹಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ