ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಎಎಪಿ ವಿರೋಧ!

Dec 12, 2024, 8:38 PM IST

ಬೆಂಗಳೂರು (ಡಿ.12): I.N.D.I.A ಮೈತ್ರಿಗೆ ರಾಹುಲ್ ನೇತೃತ್ವಕ್ಕೆ ಮಿತ್ರಪಕ್ಷಗಳ ಅಪಸ್ವರ  ಎತ್ತಿದ್ದಾರೆ. ಟಿಎಂಸಿ, ಆರ್​​ಜೆಡಿ, ಎನ್​ಸಿಪಿ, ಆಪ್‌ನಿಂದ ಮಮತಾಗೆ ಬೆಂಬಲ ಸಿಕ್ಕಿದೆ. ‘ನಾಯಕತ್ವ ವಹಿಸಿಕೊಳ್ಳಲೂ ರೆಡಿ’ ಎಂದು ಸ್ವತಃ ಮಮತಾ ಬ್ಯಾನರ್ಜಿ  ಕೂಡ ಹೇಳಿದ್ದಾರೆ.

ಇನ್ನೊಂದೆಡೆ, ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಜಗದೀಪ್ ಧನ್ಕರ್ ವಿರುದ್ಧ ಅವಿಶ್ವಾಸ ಮಂಡನೆಗೆ ನೋಟಿಸ್ ನೀಡಲಾಗಿದೆ.

Breaking: ಭಾರತದ ಡಿ. ಗುಕೇಶ್‌ ಚೆಸ್‌ ಇತಿಹಾಸದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್‌!

ಮತ್ತೊಂದೆಡೆ, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಎಎಪಿ ವಿರೋಧ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಕಡಿದುಕೊಳ್ಳುವ ಬಗ್ಗೆ ಚರ್ಚೆ ನಡೆಸಿದೆ. ಎಲ್ಲಾ ಸ್ಥಾನಗಳಲ್ಲೂ ಆಮ್ ಆದ್ಮಿ ಸ್ಪರ್ಧೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.