Dec 12, 2024, 8:28 PM IST
ಬೆಂಗಳೂರು (ಡಿ.12): ಓಡಿದ ಸರ್ವಾಧಿಕಾರಿ.. ಅಸಲಿ ಆಟ ಆರಂಭಿಸಿದ ಇಸ್ರೇಲ್. ಎರಡು ದಿನದಲ್ಲಿ ನರಕ ತೋರಿಸಿದ ನೆತನ್ಯಾಹು. ಸಿರಿಯಾ ಜೊತೆಗಿನ ಒಪ್ಪಂದ ಒದ್ದ ಇಸ್ರೇಲ್.
ಸಿರಿಯಾದಲ್ಲಿ ಇಸ್ರೇಲ್ ನೆತ್ತರ ಅಧ್ಯಾಯ. 48 ಗಂಟೆ.. 480 ದಾಳಿ..ಅಖಾಡವಾದ ಆಕಾಶ.. ಸ್ಮಶಾನವಾದ ಭೂಮಿ. ಅರ್ಧ ಸತ್ತಿರೋ ಸಿರಿಯಾ ಮೇಲೆ ಇಸ್ರೇಲ್ ರೋಷಾವೇಷವೇಕೆ.? ನೆತನ್ಯಾಹು ಆಟಕ್ಕೆ ನಡುಕ ಶುರುವಾಗಿರೋದು ಯಾರಿಗೆ..? ರಕ್ತಸಿಕ್ತ ನೆಲದಲ್ಲಿ ಯಹೂದಿ ರಾಷ್ಟ್ರ ಆಡ್ತಾ ಇರೋ ಆಟ ಎಂಥದ್ದು..? ಅಮೆರಿಕಾ, ಇಸ್ರೇಲ್ ಮೇಲೆ ಮತ್ತೆ ಗುರ್ ಎಂದಿದ್ದೇಕೆ ಇರಾನ್..?
Breaking: ಭಾರತದ ಡಿ. ಗುಕೇಶ್ ಚೆಸ್ ಇತಿಹಾಸದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್!
ಸಿರಿಯಾದ ಸರ್ವಾಧಿಕಾರಿ ಅಸಾದ್ ದೇಶ ಬಿಟ್ಟು ಓಡಿ ಹೋದ ಬಳಿಕ ಮುಂದೆ ಸಿರಿಯಾದ ಕಥೆ ಏನು..? ಅಲ್ಲಿ ಅಧಿಕಾರ ನಡೆಸೋದು ಯಾರು ಅನ್ನೋ ಪ್ರಶ್ನೆ ಎದ್ದು ಕೂತಿತ್ತು. ಆ ಪ್ರಶ್ನೆಗೆ ಈಗ ಮಧ್ಯಂತರ ಸರ್ಕಾರದ ರಚನೆ ಮೂಲಕ ಮಧ್ಯಂತರವಾದ ಒಂದು ಉತ್ತರ ಸಿಕ್ಕಿದೆ.