ಭಾರತದ ಚೆಸ್ ಪಟು ಗುಕೇಶ್ ಡಿ ಇದೀಗ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿದ್ದಾರೆ. ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಸೋಲಿಗೆ ಕೇವಲ 18ನೇ ವಯಸ್ಸಿಗೆ ಚೆಸ್ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕೇವಲ 7ನೇ ವಯಸ್ಸಿಗೆ ಚೆಸ್ ಆರಂಭಿಸಿ ಇದೀಗ ಅತೀ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಿದ ಈ ಗುಕೇಶ್ ಯಾರು?
ನವದೆಹಲಿ(ಡಿ.12) ಚೆಸ್ ಪಟು ಗುಕೇಶ್ ಡಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು, ಸೆಲೆಬ್ರೆಟಿಗಳು, ದಿಗ್ಗಜರು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಕೇವಲ 18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿ ಗುಕೇಶ್ ಹೊರಹೊಮ್ಮಿದ್ದಾರೆ. ಗೆಲುವಿಗಾಗಿ ನಡೆದ 14ನೇ ಸುತ್ತಿನಲ್ಲಿ ಚೀನಾಗ ಡಿಂಗ್ ಲಿರೆನ್ ಸೋಲಿಸಿದ ಗುಕೇಶ್ ಡಿ ಇತಿಹಾಸ ರಚಿಸಿದ್ದಾರೆ. ಭಾರತದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇದೀಗ ಗುಕೇಶ್ ಭಾರತದ ದಿಗ್ಗಜ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಸಾಧನೆ ಸಾಲಿಗೆ ಸೇರಿಕೊಂಡಿದ್ದಾರೆ.
13 ಸುತ್ತುಗಳಲ್ಲಿ ಗುಕೇಶ್ ಹಾಗೂ ಡಿಂಗ್ ಲಿರೆನ್ 6.5 ಅಂಕ ಪಡೆದು ಸಮಭಲ ಸಾಧಿಸಿದ್ದರು. ಹೀಗಾಗಿ 14 ಸುತ್ತು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಸಮಭಲ ಹೋರಾಟ ಕಂಡುಬಂದಿತ್ತು. ಟೈ ಬ್ರೇಕರ್‌ನಲ್ಲಿ ಅಂತ್ಯಗೊಳ್ಳಲಿದೆ ಅನ್ನುವಷ್ಟರಲ್ಲೇ ಗುಕೇಶ್ ಗೆಲುವಿನ ನಗೆ ಬೀರಿದ್ದರು. ಗುಕೇಶ್ 7.5 ಹಾಗೂ ಡಿಂಗ್ 6.5 ಅಂಕಗಳಿಸಿದರು. ಒಂದು ಸಣ್ಣ ತಪ್ಪು ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಸೋಲಿಗೆ ಕಾರಣವಾಯಿತು.
Breaking: ಭಾರತದ ಡಿ. ಗುಕೇಶ್ ಚೆಸ್ ಇತಿಹಾಸದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್!
ಯಾರು ಈ ಗುಕೇಶ್ ದೊಮ್ಮರಾಜು?
ಗುಕೇಶ್ ಡಿ ಅಥವಾ ಗುಕೇಶ್ ದೊಮ್ಮರಾಜು ಹುಟ್ಟಿದ್ದು 2006ರಲ್ಲಿ. ಚೆನ್ನೈನಲ್ಲಿ ಗುಕೇಶ್ ತನ್ನ ಪೋಷಕರ ಜೊತೆಗೆ ವಾಸವಾಗಿದ್ದಾರೆ. ತೆಲುಗು ಕುಟುಂಬವಾದರೂ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಗುಕೇಶ್ ತಂದೆ ಡಾ. ರಜನೀಕಾತ್ ಇಎನ್‌ಟಿ ಸರ್ಜನ್, ತಾಯಿ ಡಾ. ಪದ್ಮಾ ಮೈಕ್ರೋಬಯೋಲಜಿಸ್ಟ್. ಗುಕೇಶ್ ತನ್ನ 7ನೇ ವಯಸ್ಸಿನಲ್ಲಿ ಚೆಸ್ ಅಭ್ಯಾಸ ಆರಂಭಿಸಿದ್ದಾರೆ. 2013ರಲ್ಲಿ ಗುಕೇಶ್ ವಾರದ ಮೂರು ದಿನ ತಲಾ ಒಂದು ಗಂಟೆಯಂತೆ ಚೆಸ್ ಆಡಲು ಆರಂಭಿಸಿದ್ದರು. ಅಷ್ಟೇ ವೇಗದಲ್ಲಿ ಗುಕೇಶ್ ಚೆಸ್ ಪಟುವಾಗಿ ಹೊರಹೊಮ್ಮಿದರು. ಹೀಗಾಗಿ ಅತೀ ಕಿರಿಯ ವಯಸ್ಸಿನಲ್ಲಿ ಗುಕೇಶ್ ಟೆಸ್ ಟೂರ್ನಮೆಂಟ್‌ಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲತೊಡಗಿದ್ದರು.
undefined
2015ರಲ್ಲಿ ನಡೆದ ಅಂಡರ್ 9 ಏಷ್ಯನ್ ಸ್ಕೂಲ್ ಆಫ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡ ಗುಕೇಶ್ ಭಾರತ ಮಾತ್ರವಲ್ಲ ವಿಶ್ವದ ಗಮನಸೆಳೆದಿದ್ದರು. ಚಾಂಪಿಯನ್ ಆಗಿ ಹೊರಹೊಮ್ಮಿದ ಗುಕೇಶ್‌ಗೆ ಅಂಡರ್ 12 ವಿಭಾಗದಲ್ಲಿ ವಿಶ್ವ ಯೂಥ್ ಚೆಸ್ ಚಾಂಪಿಯನ್‌ಶಿಪ್‌ನಲ್ಲೂ ಪ್ರಶಸ್ತಿ ಗೆದ್ದುಕೊಂಡರು. ಕೇವಲ 12ನೇ ವಯಸ್ಸಿನಲ್ಲಿ ಗುಕೇಶ್ ಏಷ್ಯನ್ ಯೂಥ್ ಚಾಂಪಿಯನ್‌ಶಿಪ್ 2018ರಲ್ಲಿ ಬರೋಬ್ಬರಿ 5 ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದರು.
2017ರಲ್ಲಿ ಗುಕೇಶ್ ಇಂಟರ್ನ್ಯಾಷನ್ ಮಾಸ್ಟರ್ ಅನ್ನೋ ಬಿರುದು ಕೂಡ ಪಡೆದಿದ್ದಾರೆ. ಪ್ರತಿ ಟೂರ್ನಮೆಂಟ್‌ಗಳಲ್ಲಿ ಗುಕೇಶ್ ಅದ್ಭುತ ಪ್ರದರ್ಶನ ಮೂಲಕ ಹೊಸ ಮೈಲಿಗಲ್ಲು ರಚಿಸಿದ್ದರು. 2023ರಲ್ಲಿ ಗುಕೇಶ್ ಚೆಸ್ ರೇಟಿಂಗ್ 2750 ತಲುಪಿತ್ತು. ಈ ಮೂಲಕ 37 ವರ್ಷಗಳ ಚೆಸ್ ಕರಿಯರ್‌ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಗಳಿಸಿದ ರೇಟಿಂಗ್ ಹಿಂದಿಕ್ಕು ಹೊಸ ದಾಖಲೆ ಬರೆದಿದ್ದರು.
2024ರಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ನಡೆದ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಗುಕೇಶ್ ಅದ್ಭುತ ಪ್ರದರ್ಶನ ನೀಡಿದ್ದರು. ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ಇಷ್ಟೇ ಅಲ್ಲ ಒಲಿಂಪಿಯಾಡ್‌ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತ್ತು. ಪ್ರತಿ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ಸಾಧನೆ ಮಾಡಿದ್ದಾರೆ. 2023ರಲ್ಲಿ ಏಷ್ಯಾ ಚೆಸ್ ಫೌಂಡೇಷನ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜೊತೆಗೆ ಸಂಘ ಸಂಸ್ಥೆಗಳ ಪ್ರಶಸ್ತಿಗಳು ಡಿ ಗುಕೇಶ್‌ಗೆ ಒಲಿದು ಬಂದಿದೆ.