ಶೇರ್ ಮಾಡಿರುವ ಫೋಟೋಗಳಲ್ಲಿ ಸಾರಾ ಅವರು ಬ್ರಾ ಮತ್ತು ಪಾರದರ್ಶಕ ಪ್ಯಾಂಟ್‌ನಲ್ಲಿ ಹಾಟ್ ಮತ್ತು ಸೆಕ್ಸಿಯಾಗಿ ಕಾಣುತ್ತಿದ್ದರು. ಸಾರಾ ಅಲಿ ಖಾನ್ ಇತ್ತೀಚೆಗೆ ಮ್ಯಾಗಜಿನ್‌ಗಾಗಿ ಫೋಟೋಶೂಟ್ ಮಾಡಿದ್ದಾರೆ.
ಈ ಫೋಟೋಗಳಲ್ಲಿ ಅವರು ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ. ಶೈನಿಂಗ್ ಬ್ರಾ ಮತ್ತು ಪ್ಯಾಂಟ್‌ನಲ್ಲಿ ತನ್ನ ಪರ್ಫೇಕ್ಟ್ ಫಿಗರ್ ಅನ್ನು ತೋರಿಸುತ್ತಿದ್ದಾರೆ ನಟಿ ಸಾರಾ ಅಲಿ ಖಾನ್.
ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್ ಲುಕ್ ಕಂಪ್ಲೀಟ್ ಮಾಡಲು ಕೊರಳಲ್ಲಿ ಚಿನ್ನದ ಸರ ಮತ್ತು ಮುತ್ತಿನ ಸೆಟ್ ಧರಿಸಿದ್ದಾರೆ. ಇದರೊಂದಿಗೆ ಸನ್ ಗ್ಲಾಸ್ ಹಾಕಿಕೊಂಡಿದ್ದಾರೆ.
ಫೋಟೋಗಳನ್ನು ಹಂಚಿಕೊಂಡ ಸಾರಾ ಅಲಿ ಖಾನ್, 'ನೀವು ಖರೀದಿಸುವ ಏಕೈಕ ವಸ್ತು ಪ್ರಯಾಣವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ' ಎಂದು ಶೀರ್ಷಿಕೆ ಬರೆದಿದ್ದಾರೆ. ಅವರ ಫೋಟೋಗೆ ಅಭಿಮಾನಿಗಳು ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಅದೇ ಸಮಯದಲ್ಲಿ, ಫೋಟೋಗೆ ಹಾಟ್ ಮತ್ತು ಮಾದಕ ಕಾಮೆಂಟ್‌ಗಳ ಮಹಾಪೂರವೇ ಬಂದಿದೆ. ಸಾರಾ ಅಲಿ ಖಾನ್ ಇಷ್ಟೊಂದು ಬೋಲ್ಡ್ ಫೋಟೋ ಶೇರ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಬಿಕಿನಿಯಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಾರಾ ಅಲಿ ಖಾನ್ ಚಿತ್ರರಂಗಕ್ಕೆ ಸೇರುವ ಮೊದಲು 90 ಕೆಜಿಗಿಂತ ಹೆಚ್ಚು ದಪ್ಪಗಿದ್ದರು. ಆದರೆ ತಮ್ಮ ಶ್ರಮದ ಬಲದಿಂದ ಬೊಜ್ಜನ್ನು ದೂರ ಮಾಡಿದ್ದು ಮಾತ್ರವಲ್ಲದೆ ಸಾರಾಗೆ ನಟನೆ ಬರುವುದಿಲ್ಲ ಎಂದು ಹೇಳಿದ ಬಾಯಿ ಮುಚ್ಚಿಸಿದ್ದಾರೆ.
ಸೈಫ್ ಅಲಿ ಖಾನ್ ಅವರ ಲಾಡ್ಲಿ ಸಾರಾ ಇದುವರೆಗೆ ಕೇದಾರನಾಥ್, ಸಿಂಬಾ, ಲವ್ ಆಜ್ ಕಲ್, ಕೂಲಿ ನಂ 1 ಮತ್ತು ಅತ್ರಾಂಗಿ ರೇ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಳಲ್ಲಿ ಸಾರಾ ಅವರ ಕೆಲಸವು ಬಹಳ ಪ್ರಶಂಸೆ ಗಳಿಸಿದೆ.
ಸಾರಾ 'ದಿ ಇಮ್ಮಾರ್ಟಲ್ ಅಶ್ವತ್ಥಾಮ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.