ಬಿಗ್‌ಬಾಸ್‌ ತೆಲುಗು 8 ಮುಕ್ತಾಯ, ಟೈಟಲ್‌ ಗೆದ್ದು ಇತಿಹಾಸ ಬರೆದ ಕನ್ನಡಿಗ ನಿಖಿಲ್‌ಗೆ ಸಿಕ್ಕಿದ್ದೆಷ್ಟು ಲಕ್ಷ?

Published : Dec 16, 2024, 12:00 AM ISTUpdated : Dec 16, 2024, 12:15 AM IST
ಬಿಗ್‌ಬಾಸ್‌ ತೆಲುಗು 8 ಮುಕ್ತಾಯ, ಟೈಟಲ್‌ ಗೆದ್ದು ಇತಿಹಾಸ ಬರೆದ ಕನ್ನಡಿಗ ನಿಖಿಲ್‌ಗೆ ಸಿಕ್ಕಿದ್ದೆಷ್ಟು ಲಕ್ಷ?

ಸಾರಾಂಶ

ಕನ್ನಡಿಗ ನಿಖಿಲ್ ಮಲಿಯಕ್ಕಳ್ ಬಿಗ್‌ಬಾಸ್ ತೆಲುಗು ಸೀಸನ್ 8ರ ವಿಜೇತರಾಗಿ 55 ಲಕ್ಷ ನಗದು ಹಾಗೂ ಐಷಾರಾಮಿ ಕಾರನ್ನು ಗೆದ್ದಿದ್ದಾರೆ. ರನ್ನರ್ ಅಪ್ ಗೌತಮ್ ಕೃಷ್ಣ. 105 ದಿನಗಳ ಶೋನಲ್ಲಿ 22 ಸ್ಪರ್ಧಿಗಳಿದ್ದು, ಐವರು ಫೈನಲ್ ತಲುಪಿದ್ದರು. ರಾಮ್ ಚರಣ್ ಟ್ರೋಫಿ ಪ್ರದಾನ ಮಾಡಿದರು. ಉಪೇಂದ್ರ, ರೀಷ್ಮಾ ನಾಣಯ್ಯ ಅತಿಥಿಗಳಾಗಿದ್ದರು.

ನಾಗಾರ್ಜುನ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು ಸೀಸನ್ 8ಕ್ಕೆ ತೆರೆ ಬಿದ್ದಿದೆ. ಕನ್ನಡಿಗ ನಿಖಿಲ್ ಮಲಿಯಕ್ಕಳ್ ಬಿಗ್‌ಬಾಸ್‌ ತೆಲುಗು 8 ಟೈಟಲ್‌ ಗೆದ್ದು ಬರೋಬ್ಬರಿ 55 ಲಕ್ಷ ರೂಪಾಯಿ ಬಹುಮಾನ ಜೊತೆಗೆ ಐಷಾರಾಮಿ ಕಾರು  ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಬೇರೆ ಭಾಷೆಯ ಬಿಗ್‌ಬಾಸ್‌ ಗೆದ್ದು ಕನ್ನಡಿಗ ನಿಖಿಲ್‌ ಹೊಸ ಇತಿಹಾಸ ಬರೆದಿದ್ದಾರೆ. ಗೌತಮ್ ಕೃಷ್ಣ ರನ್ನರ್‌ ಅಪ್‌ ಆಗಿ ಹೊರಹೊಮಿದ್ದಾರೆ.
 
ನಿಖಿಲ್ ಮಲಿಯಕ್ಕಲ್ ಕಲರ್ಸ್ ಸೂಪರ್‌ ನ ಮನೆಯೇ ಮಂತ್ರಾಲಯ ಎಂಬ ಧಾರವಾಹಿಯಲ್ಲಿ ನಟಿಸಿದ್ದರು. ನಟ  ಹಲವಾರು ಟಿವಿ ಧಾರಾವಾಹಿಗಳನ್ನು ಮಾಡುವ ಮೂಲಕ ತೆಲುಗಿನಲ್ಲಿ ಜನಪ್ರಿಯರಾಗಿದ್ದಾರೆ. ಮೈಸೂರು ಮೂಲದ ನಿಖಿಲ್ ವಾರಕ್ಕೆ   ರೂ. 2.25 ಲಕ್ಷ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.

ತಮನ್ನಾ ಭಾಟಿಯಾ ಸೌಂದರ್ಯದ ರಹಸ್ಯವೇನು?

ಟೈಟಲ್ ಪೈಪೋಟಿ ಗೌತಮ್ ಮತ್ತು ನಿಖಿಲ್ ನಡುವೆ ಆರಂಭವಾಗುತ್ತದೆ. ನಟ, ನಿರೂಪಕ ನಾಗಾರ್ಜುನ ಆಸಕ್ತಿದಾಯಕ ಆಟವನ್ನು ಆರಂಭಿಸಿದರು. ಬಿಗ್ ಬಾಸ್ ಸೀಸನ್ ವಿಜೇತರಿಗೆ 55 ಲಕ್ಷ ರೂಪಾಯಿ ಬಹುಮಾನದ ಜೊತೆಗೆ ಐಷಾರಾಮಿ ಕಾರು ಕೂಡ ಸಿಗಲಿದೆ. ಮೊದಲು ನಾಗಾರ್ಜುನ ಟೈಟಲ್ ತ್ಯಾಗ ಮಾಡಿ 40 ಲಕ್ಷ ರೂಪಾಯಿಗಳ ಸೂಟ್‌ಕೇಸ್ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು. ಆದರೆ ಈ ಆಫರ್‌ಗೆ ಇಬ್ಬರೂ ಮರುಳಾಗಲಿಲ್ಲ.

ಕೊನೆಗೆ ನಾಗಾರ್ಜುನ ಸೂಟ್‌ಕೇಸ್ ಆಫರ್ ಅನ್ನು ಒಟ್ಟು ಬಹುಮಾನ 55 ಲಕ್ಷ ರೂಪಾಯಿಗೆ ಏರಿಸಿದರು. ಟೈಟಲ್ ಬಿಟ್ಟು ಸೂಟ್‌ಕೇಸ್ ತೆಗೆದುಕೊಂಡರೆ 55 ಲಕ್ಷ ರೂಪಾಯಿ ಸಿಗುತ್ತದೆ. ಆಸೆಗೆ ಒಳಗಾಗದವರಿಗೆ ಟೈಟಲ್ ಜೊತೆಗೆ ಐಷಾರಾಮಿ ಕಾರು ಸಿಗುತ್ತದೆ. ನಿಖಿಲ್ ಹಣ ತೆಗೆದುಕೊಳ್ಳಲು ಸ್ವಲ್ಪ ಆಸೆಪಟ್ಟರು. ಆದರೆ ಕುಟುಂಬ ಸದಸ್ಯರ ಸಲಹೆಯ ಮೇರೆಗೆ ಬೇಡ ಎಂದು ನಿರ್ಧರಿಸಿದರು. ಕೊನೆಗೆ ನಿಖಿಲ್ ಟೈಟಲ್ ಗೆದ್ದು ಬಹುಮಾನವನ್ನು ಪಡೆದರು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಗೌತಮ್ ರನ್ನರ್ ಅಪ್ ಆದರು.

ಪುಷ್ಪ 3 ರಲ್ಲಿ ವಿಜಯ್ ದೇವರಕೊಂಡ? ಅಲ್ಲು ಅರ್ಜುನ್ ಗೆ ಟಕ್ಕರ್!

ನಿಖಿಲ್‌ ತೆಲುಗು ಬಿಗ್‌ಬಾಸ್‌ ಶೋ ವೀಕ್ಷಕರ ಫೇವರಿಟ್‌ ಮತ್ತು ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಕನ್ನಡತಿ ಪ್ರೇರಣಾ ಕಂಬಂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಈ ಸೀಸನ್‌ ಸ್ಪರ್ಧಿಗಳಾದ ವಿಷ್ಣುಪ್ರಿಯ, ಹರಿತೇಜ, ನಯನಿ ಪಾವನಿ ಹೊರತುಪಡಿಸಿ ಎಲ್ಲಾ  ಸ್ಪರ್ಧಿಗಳು ಹಾಜರಿದ್ದರು. 

ನಟ  ರಾಮ್ ಚರಣ್ ಮುಖ್ಯ ಅತಿಥಿಯಾಗಿ ಆಗಮಿಸಿ ಟೈಟಲ್‌ ಗೆದ್ದ ನಿಖಿಲ್‌ ಗೆ ಟ್ರೋಫಿ ಪ್ರದಾನ ಮಾಡಿದರು. ಇನ್ನು ಯುಐ ಚಿತ್ರದ ಪ್ರಚಾರಕ್ಕಾಗಿ ಕನ್ನಡದ ನಟ-ನಿರ್ಮಾಪಕ ಉಪೇಂದ್ರ, ನಾಯಕಿ ರೀಷ್ಮಾ ನಾಣಯ್ಯ ವಿಶೇಷ ಅತಿಥಿಗಳಾಗಿ ಫಿನಾಲೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ನಾಗಾರ್ಜುನ ಅವರಿಗೆ ಉಪ್ಪಿ ಐ ಎಮ್‌ ಗಾಡ್‌ , ಗಾಡ್‌ ಈಸ್‌ ಗ್ರೇಟ್  ಡೈಲಾಗ್ ಹೇಳಿದ್ರು. ಬಿಗ್‌ಬಾಸ್‌ ಮನೆಯೊಳಗೆ ಹೋದ ಉಪ್ಪಿ ಸ್ಪರ್ಧಿ ಅವಿನಾಶ್‌ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದರು. ಈ ವೇಳೆ ಪ್ರೇರಣಾ ಅವರಿಗೆ ಥೀಯೇಟರ್‌ ಗೆ ಹೋಗಿ ಮೂವಿ ನೋಡಿ ಎಂದು ಉಪೇಂದ್ರ ಮನವಿ ಮಾಡಿಕೊಂಡರು.

105 ದಿನಗಳ  ಕಾಲ ನಡೆದ ಈ ಶೋವನ್ನು ಸೂಪರ್‌ಸ್ಟಾರ್ ನಾಗಾರ್ಜುನ ಹೋಸ್ಟ್ ಮಾಡಿದರು. ಬಿಗ್ ಬಾಸ್ ತೆಲುಗು ತನ್ನ 8 ನೇ ಸೀಸನ್ ಅನ್ನು ಮುಕ್ತಾಯಗೊಳಿಸುತ್ತಿದೆ. ವಿವಾದಾತ್ಮಕ ಮತ್ತು ಜನಪ್ರಿಯ ಕಾರ್ಯಕ್ರಮವನ್ನು ಸೆಪ್ಟೆಂಬರ್ 1 ರಂದು ಸ್ಟಾರ್ ಮಾದಲ್ಲಿ ಆರಂಭವಾಗಿತ್ತು. ಈ ಬಾರಿ ಒಟ್ಟು 22 ಮಂದಿ ಸ್ಪರ್ಧಿಗಳು ಶೋನಲ್ಲಿದ್ದರು. ಅವರಲ್ಲಿ 5 ಮಂದಿ ಮಾತ್ರ  ಫೈನಲ್‌ ಗೆ ಲಗ್ಗೆ ಇಟ್ಟಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಪ್ಪ, ಅಮ್ಮನನ್ನು ಒಂದು ಮಾಡಲು ಪ್ರಯತ್ನಪಟ್ಟಿದ್ದೆ: ಓಂ ಪ್ರಕಾಶ್‌, ರೇಖಾ ದಾಸ್‌ ಮಗಳು ನಟಿ ಸಾತ್ವಿಕಾ
Karna Serial Update: ಶೀಘ್ರದಲ್ಲಿ ನಿತ್ಯಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ? ಧಾರಾವಾಹಿಯಿಂದ ಹೊರ ಬಂದ ನಮ್ರತಾ!