Dec 15, 2024, 5:13 PM IST
ಅದೊಂದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಒಬ್ಬ ಮಗ. ಗಂಡ ಹೆಂಡತಿ ಇಬ್ಬರು ಬೇಕರಿ ನಡೆಸುತ್ತಿದ್ರು. ಒಳ್ಳೆ ವ್ಯಾಪಾರ. ಇಡೀ ಊರಿಗೆ ಬೆಸ್ಟ್ ಬೇಕರಿ ಆಗಿತ್ತು ಅದು. ಇನ್ನೂ ಗಂಡ ಹೆಂಡತಿ ಬೇಕರಿಯಲ್ಲೇ ಇರುತ್ತಿದ್ರೆ ಮಗ ಶಾಲೆಗೆ ಹೋಗಿ ಬರ್ತಿದ್ದ. ಇದೇ ಬೇಕರಿಯಿಂದ ಕೋಟಿ ಕೋಟಿ ಆಸ್ತಿ ಮಾಡಿದ್ರು. ಆದ್ರೆ ಆವತ್ತೊಂದು ದಿನ ಅದೇನಾಯ್ತೋ ಏನೊ ಗಂಡ ಬೇಕರಿಯಲ್ಲಿರುವಾಗ್ಲೇ ಆತನ ಮೇಲೆ ಡೆಡ್ಲಿ ಅಟ್ಯಾಕ್ ಆಗಿತ್ತು.
ಅದೆಲ್ಲಿಂದಲೋ ಬಂದ ಹಂತಕರು ಅವನ ಬೇಕರಿ ಮುಂದೆಯೇ ಕೊಚ್ಚಿ ಕೊಚ್ಚಿ ಕೊಂದುಬಿಟ್ಟಿದ್ರು. ಇನ್ನೂ ಇದೇ ಕೇಸ್ನ ತನಿಖೆ ನಡೆಸಿದ ಪೊಲೀಸರಿಗೆ ಹಂತಕರು ಯಾರು ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಕಾರಣ ಅವನನ್ನ ಕೊಂದಿದ್ದು ಯಾರು ಅನ್ನೋದು ಹೆಣ ಬೀಳುತ್ತಲೇ ಇಡೀ ಊರಿಗೇ ಗೊತ್ತಾಗಿತ್ತು. ಹಾಗಾದ್ರೆ ಅವನನ್ನ ಕೊಂದಿದ್ಯಾರು? ಯಾಕಾಗಿ ಕೊಂದ್ರು? ಒಂದು ಡೆಡ್ಲಿ ಮರ್ಡರ್ ಹಿಂದಿನ ರೋಚಕ ಕಹನಿ ಇಲ್ಲಿದೆ ನೋಡಿ