ಧನಂಜಯ್ ಮದುವೆ ಕಾರ್ಡ್ ರೆಡಿ; ಸರಳವಾದ ಚೆಂದದ ಆಮಂತ್ರಣ ಪತ್ರಿಕೆಗೆ ಫ್ಯಾನ್ಸ್ ಫಿದಾ

By Mahmad Rafik  |  First Published Dec 15, 2024, 10:19 AM IST

ನಟ ಧನಂಜಯ್ ಅವರ ಮದುವೆ ಕರೆಯೋಲೆ ಸರಳವಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಫೆಬ್ರವರಿ 16, 2025 ರಂದು ಮೈಸೂರಿನಲ್ಲಿ ಧನ್ಯತಾ ಅವರೊಂದಿಗೆ ಧನಂಜಯ್ ವಿವಾಹವಾಗಲಿದ್ದಾರೆ.


ಬೆಂಗಳೂರು: ನಟ ಧನಂಜಯ್  ಮದುವೆ  ಕಾರ್ಡ್ ರೆಡಿಯಾಗಿರುವ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸ್ಟಾರ್ ನಟರ ಮದುವೆ ಕಾರ್ಡ್ ಗಳು ತುಂಬಾ ಅದ್ಧೂರಿಯಾಗಿರುತ್ತವೆ. ಹಾಗೆ ಆಮಂತ್ರಣ ಪತ್ರಿಕೆ ಜೊತೆ ಕೆಲವು ಕೊಡುಗೆಗಗಳನ್ನು ಮುಂಗಡವಾಗಿ ನೀಡುತ್ತಾರೆ. ಅದ್ರೆ  ಧನಂಜಯ್ ಇದಕ್ಕೆ ತದ್ವಿರುದ್ದವಾಗಿದ್ದು, ತುಂಬಾನೇ  ಸರಳವಾಗಿ  ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಮದುವೆ ಕರೆಯೋಲೆ ನೀಡಿದ ಅಭಿಮಾನಿಗಳು, ಅರ್ಥ ಪೂರ್ಣವಾದ ಮದುವೆಯ ಕರೆಯೋಲೆ. ಬಹುಶಃ ಈ ಶುಭ ಸಂಭ್ರಮದ ಕರೆಯೋಲೆಯಲ್ಲಿ ಕೈಯಾರೆ ಬರೆದ ಪ್ರತಿ ಅಕ್ಷರವೂ ಬರೆದವನ ಮನಸ್ಸಿನಲ್ಲಿ ಮತ್ತು ಕರೆಯೋಲೆ ಓದುವವನ ಮನಸ್ಸಿನಲ್ಲಿ ಸಂತೃಪ್ತಿಯ ಭಾವ ಮೂಡಿಸಲಿದೆ  ಎಂದು  ಸೂರ್ಯ ಗೌಡ ಎಂಬವರು  ಕಮೆಂಟ್  ಮಾಡಿದ್ದಾರೆ.

ಧನಂಜಯ್ ಆಮಂತ್ರಣ ಪತ್ರಿಕೆ 
ಪ್ರೀತಿಯ ಬಂಧು ಮಿತ್ರರೇ,
ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತ ಮಾಡುವ ನಮಸ್ಕಾರಗಳು. ನಾವು  ಖುಷಿಯಾಗಿದ್ದೇವೆ, ನಮ್ಮಿ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮಿ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಾಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇನೆ. ತಾವು ಎಲ್ಲಿದ್ದರೂ, ಜಗದ ಯಾವ ಮೂಲೆಯಲ್ಲಿದ್ದರೂ, ಕುಟುಂಬ ಸಮೇತರಾಗಿ ಬಂದು ನಮ್ಮಿ ಸಮಾಗಮಕ್ಕೆ ನೀವು  ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯಲ್ಲಿ ಬಾಳಿನ ಬೆಳಕು ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ.
ಮತ್ತೆಲ್ಲಾ ಕ್ಷೇಮವಷ್ಟೇ!
ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ 
ಧನಂಜಯ-ಧನ್ಯತ

Tap to resize

Latest Videos

ಆರತಕ್ಷತೆ: 15-02-2025ನೇ ಶನಿವಾರ ಸಂಜೆ 6 ಗಂಟೆಗೆ
ಮುಹೂರ್ತ: 16-02-2025ನೇ ಭಾನುವಾರ ಬೆಳಗ್ಗೆ 8.20 ರಿಂದ 10.00 ಗಂಟೆ, ಲಗ್ನ: ಮೀನ
ಸ್ಥಳ: ವಸ್ತು ಪ್ರದರ್ಶನ ಮೈದಾನ, ಅಂಬಾವಿಲಾಸ ಅರಮನೆ ಮುಂಭಾಗ, ಮೈಸೂರು

click me!