ಸೈಲೆಂಟ್ ಆಗಿದ್ದ ಸಮಂತಾ ರುತ್ ಪ್ರಭು ಭಾವುಕ, ನಾನು ಅಳುತ್ತಿಲ್ಲ ಎಂದು ಕಣ್ಣೀರಿಟ್ರಾ ನಟಿ?

By Chethan Kumar  |  First Published Dec 14, 2024, 10:12 PM IST

ನಟಿ ಸಮಂತಾ ರುತ್ ಪ್ರಭು ಭಾವುಕರಾಗಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ನಟಿ ನಾನು ಅಳುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಆದರೆ ನಟಿ ಕಣ್ಣಿರಿಟ್ಟಿದ್ದೇಕೆ? 


ಹೈದರಾಬಾದ್(ಡಿ.14) ನಟ, ಮಾಜಿ ಪತಿ ನಾಗ ಚೈತನ್ಯ ಮದುವೆಯಿಂದ  ನಟಿ ಸಮಂತಾ ರುತ್ ಪ್ರಭು ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದರು. ಇದೀಗ ಖುದ್ದು ನಟಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಸಮಂತಾ ಅಭಿಮಾನಿಗಳು ಭಾವುಕರಾಗಿದ್ದಾರೆ. ಪೋಸ್ಟ್ ಜೊತೆ ನಾನು ಅಳುತ್ತಿಲ್ಲ ಎಂದು ಸಮಂತಾ ಬರೆದುಕೊಂಡಿದ್ದಾರೆ. ಈ ಮೂಲಕ ಕಣ್ಣೀರು ಸುರಿಸಿರುವುದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸಮಂತಾ ಭಾವುಕರಾಗಲು ಕಾರಣ, ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹ ರೆಡ್ಡಿಯ ಪ್ರೀತಿಯ ಅಪ್ಪುಗೆ.

ಅಭಿಮಾನಿ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅರೆಸ್ಟ್ ಆಗಿ ಒಂದು ದಿನ ಜೈಲಿನಲ್ಲಿ ಕಳೆದಿದ್ದರು. ಹೈಕೋರ್ಟ್ ಜಾಮೀನು ನೀಡಿದರೂ ಬಂಧನದ ಬೆನ್ನಲ್ಲೇ ಕಾನೂನು ಪ್ರಕ್ರಿಯೆ ಮುಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಲ್ಲು ಅರ್ಜುನ್ ಅನಿವಾರ್ಯವಾಗಿ ಜೈಲಿನಲ್ಲಿ ಕಳೆಯಬೇಕಾಯಿತು. ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಮರಳಿದ ಅಲ್ಲು ಅರ್ಜನ್‌ನ್ನು ಪತ್ನಿ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಭಾವುಕರಾಗಿದ್ದರು. ಆನಂದ ಭಾಷ್ಪ ಸುರಿಸುತ್ತಾ ಅಲ್ಲು ಅರ್ಜುನ್ ಬಿಗಿದಪ್ಪಿ ಅತ್ತಿದ್ದರು. ಈ ವಿಡಿಯೋವನ್ನು ನಟಿ ಸಮಂತಾ ಹಂಚಿಕೊಂಡಿದ್ದಾರೆ.

Tap to resize

Latest Videos

ಅಲ್ಲು ಅರ್ಜುನ್ ಅರೆಸ್ಟ್ ಪುಷ್ಪಾ2 ಚಿತ್ರದ ಪ್ರಮೋಶನ್‌ಗೆ ಮಾಡಿದ ನಾಟಕ? ನಿರ್ದೇಶಕನ ಬಾಂಬ್!

ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹಾ ರೆಡ್ಡಿಯ ಭಾವುಕ ಕ್ಷಣಗಳನ್ನು ಸಮಂತಾ ಹಂಚಿಕೊಂಡು ಭಾವುಕರಾಗಿದ್ದರೆ. ಈ ವಿಡಿಯೋ ನೋಡಿ ನಾನು ಅಳುತ್ತಿಲ್ಲ ಎಂದು ಸಮಾಜಾಯಿಷಿ ನೀಡಿದರೂ ಸಮಂತಾ ಕಣ್ಣಲ್ಲಿ ನೀರು ಜಿನುಗಿದೆ. ಜೊತೆ ಕಣ್ಣೀರಿಡುತ್ತಿರುವ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ನಟಿ ಸಮಂತಾ ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ  ಹಲವರು ಪ್ರತಿಕ್ರಿಯಿಸಿದ್ದಾರೆ. 

undefined

ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಮರಳಿದ ಸಂದರ್ಭ ಭಾವುಕವಾಗಿತ್ತು. ಅಲ್ಲು ಅರ್ಜುನ್‌ನ್ನು ಪತ್ನಿ ಸ್ನೇಹ ರೆಡ್ಡಿ ತಪ್ಪಿಕೊಂಡು ಅತ್ತಿದ್ದರು. ಕೆಲ ಹೊತ್ತುಗಳ ಕಾಲ ಸ್ನೇಹಾ ರೆಡ್ಡಿಗೆ ನಿಯಂತ್ರಣ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೆಲ ಹೊತ್ತು ಪತ್ನಿ ಅಲ್ಲು ಅರ್ಜುನ್ ತಬ್ಬಿಕೊಂಡು ಅತ್ತಿದ್ದಾರೆ. 

ಅಲ್ಲು ಅರ್ಜುನ್ ಮನೆಗೆ ತಾರೆಯರ ದಂಡೆ ತೆರಳಿದೆ. ತೆಲುಗು ಸಿನಿಮಾ ಕ್ಷೇತ್ರದ ದಿಗ್ಗಜ ನಟನಟಿಯರು ಅಲ್ಲು ಅರ್ಜುನ್ ಮನೆಗೆ ತೆರಳಿದ್ದಾರೆ. ಅಲ್ಲು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ. ಸ್ಯಾಂಡಲ್‌ವುಡ್ ನಟ ಉಪೇಂದ್ರ ಕೂಡ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲು ಅರ್ಜುನ್‌ಗೆ ಸಿನಿಮಾ ಕ್ಷೇತ್ರದಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಪುಷ್ಪಾ 2 ಚಿತ್ರದ ಪ್ರಿಮಿಯರ್ ಶೋನಲ್ಲಿ ಮಹಿಳಾ ಅಭಿಮಾನಿ ಮೃತಪಟ್ಟ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಹೈದರಾಬಾದ್ ನಗರದ ಸಂಧ್ಯಾ ಚಲನಚಿತ್ರ ಮಂದಿರದಲ್ಲಿ ಈ ಘಟನೆ ನಡೆದಿದೆ. ಸಂಧ್ಯಾ ಥಿಯೇಟರ್‌ನಲ್ಲಿ ಪ್ರಿಮಿಯರ್ ಶೋ ಆಯೋಜಿಸಲಾಗಿತ್ತು. ಈ ಪ್ರೀಮಿಯರ್ ಶೋಗೆ ಮಹಿಳಾ ಅಭಿಮಾನಿಯೊಬ್ಬರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು. ಮಹಿಳಾ ಅಭಿಮಾನಿ ಪುತ್ರ ಗಂಭೀರ ಗಾಯಗೊಂಡಿದ್ದರು. ಈ ಘಟೆನೆಯಲ್ಲಿ ಸಂಧ್ಯಾ ಥಿಯೇಟರ್ ಮಾಲೀಕ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು. ಎ12 ಆರೋಪಿಯಾಗಿ ಅಲ್ಲು ಅರ್ಜುನ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲವರ ಬಂಧನ ಬಳಿಕ ಡಿಸೆಂಬರ 13ರಂದು ಅಲ್ಲು ಅರ್ಜುನ್ ಕೂಡ ಬಂಧಿಸಲಾಗಿತ್ತು.
 

click me!