ಮಸೀದಿ, ಚರ್ಚ್‌ನಲ್ಲೂ ಪೂಜೆಗೆ ಅವಕಾಶ ನೀಡಿ: ಪ್ರಮೋದ್ ಮುತಾಲಿಕ್

By Kannadaprabha News  |  First Published Dec 15, 2024, 11:49 PM IST

ಕೇವಲ ಹಿಂದುಗಳ ಮೇಲೆ ಸೌಹಾರ್ದದ ಕೈ ಇಡುವ ಪ್ರಕ್ರಿಯೆ ಇನ್ನು ಮುಂದೆ ನಡೆಯುವುದಿಲ್ಲ. ಪ್ರತಿವಾರ ದತ್ತಪೀಠದಲ್ಲಿ ನಡೆಯುವ ನಮಾಜನ್ನು ನಾಗೇನಹಳ್ಳಿ ಯಲ್ಲಿರುವ ದರ್ಗಾಕ್ಕೆ ಶಿಫ್ಟ್ ಮಾಡಬೇಕು ಎಂದು ಆಗ್ರಹಿಸಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ 


ಚಿಕ್ಕಮಗಳೂರು(ಡಿ.15):  ದತ್ತಪೀಠದಲ್ಲಿ ಮುಸ್ಲಿಮರಿಗೆ ಉರುಸ್ ಮಾಡಲು, ನಮಾಜ್ ಮಾಡಲು ಅವಕಾಶ ನೀಡಿದರೆ ಅದು ಸೌಹಾರ್ದವಾಗುವುದಿಲ್ಲ. ಬದಲಿಗೆ ಸಂಘರ್ಷವಾಗುತ್ತದೆ. ಇದರ ಬದಲಾಗಿ ಮುಸ್ಲಿಮರ ಮಸೀದಿ ಹಾಗೂ ಕ್ರಿಶ್ಚಿಯನರ ಚರ್ಚ್ ಗಳಲ್ಲಿ ಪೂಜೆ, ಪುನಸ್ಕಾರ, ಹೋಮ, ಹವನ ಮಾಡಲು ಅವಕಾಶ ನೀಡಿದರೆ ಸೌಹಾರ್ಧಕ್ಕೆ ಅರ್ಥ ಬರುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

ದತ್ತಪೀಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಹಿಂದುಗಳ ಮೇಲೆ ಸೌಹಾರ್ದದ ಕೈ ಇಡುವ ಪ್ರಕ್ರಿಯೆ ಇನ್ನು ಮುಂದೆ ನಡೆಯುವುದಿಲ್ಲ. ಪ್ರತಿವಾರ ದತ್ತಪೀಠದಲ್ಲಿ ನಡೆಯುವ ನಮಾಜನ್ನು ನಾಗೇನಹಳ್ಳಿ ಯಲ್ಲಿರುವ ದರ್ಗಾಕ್ಕೆ ಶಿಫ್ಟ್ ಮಾಡಬೇಕು ಎಂದು ಆಗ್ರಹಿಸಿದರು.

Tap to resize

Latest Videos

ದೇಶದ್ರೋಹಿ ಕೆಲಸ ಮಾಡುತ್ತಿರುವ ಜಮೀರ್‌ ಅಹಮದ್‌ನನ್ನ ಗಲ್ಲಿಗೇರಿಸಿ: ಪ್ರಮೋದ ಮುತಾಲಿಕ್

ದತ್ತಪೀಠದಲ್ಲಿ ತುಳಸಿ ಕಟ್ಟೆ, ಹೋಮಕುಂಡ, ಧ್ವಜಸ್ತಂಬ ಹೀಗೆ ಅನೇಕ ಕುರುಹುಗಳಿದ್ದವು. ಆದರೆ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ನೀತಿಯಿಂದಾಗಿ ಇಲ್ಲಿನ ಮುಸ್ಲಿಮರು ಹಿಂದೂ ಕುರುಹುಗಳನ್ನು ನಾಶ ಮಾಡಿರುವುದು ಸತ್ಯ. ಇದಲ್ಲದೆ ದತ್ತಪೀಠ ಭಾಗದಲ್ಲಿ ಮಸೀದಿ ಕಟ್ಟಿ, ಮೈಕ್ ಹಾಕಿ, ಗೋಮಾಂಸ ಭಕ್ಷಣೆ ಮಾಡುತ್ತಿದ್ದರು. ಹೋರಾಟದ ಮೂಲಕವೇ ಈ ಎಲ್ಲವನ್ನು ನಿಲ್ಲಿಸಿದ್ದೇವೆ. ಮುಸ್ಲಿಮರ ಮೂಲ ಮಾನಸಿಕತೆಯೇ ಅತಿಕ್ರಮಣ. ದೇಶದ ಎಲ್ಲೆಡೆಯೂ ಹಿಂದುಗಳ ಧಾರ್ಮಿಕ ಕ್ಷೇತ್ರಗಳನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

undefined

ಭಯೋತ್ಪಾದನೆಯಲ್ಲಿ ತೀರ್ಥಹಳ್ಳಿ 2ನೇ ಭಟ್ಕಳ: ಪ್ರಮೋದ್ ಮುತಾಲಿಕ್

ತೀರ್ಥಹಳ್ಳಿ: ದೇಶದ ಗಮನ ಸೆಳೆದ ಕುಕ್ಕರ್‌ಬಾಂಬ್ ಹಾಗೂ ರಾಮೇಶ್ವರಂ ಕೆಫೆಯ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಇಸ್ಲಾಮಿಕ್ ಮಾನಸಿಕತೆ ವ್ಯಕ್ತಿಗಳಿಂದಾಗಿ ತೀರ್ಥಹಳ್ಳಿ ಎರಡನೇ ಭಟ್ಕಳವಾಗಿ ಪರಿವರ್ತನೆ ಗೊಳ್ಳುತ್ತಿದೆ ಎಂದು ಶ್ರೀ ರಾಮಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದ್ದರು. 

ಆತಂಕ ಸೃಷ್ಟಿಸಿದ ಭಯೋತ್ಪಾದಕ ಘಟನೆಗಳಾದ ಕುಕ್ಕರ್ ಬಾಂಬ್ ಮತ್ತು ರಾಮೇಶ್ವರಂ ಕೆಫೆ ಬ್ಲಾಸ್ಟ್ ರೂವಾರಿ ಶಾರಿಕ್ ಮತ್ತು ಮತೀನ್ ಇಲ್ಲಿಯವರಾಗಿದ್ದಾರೆ. ಅಷ್ಟೇ ಅಲ್ಲದೇ ನಂದಿತಾ ಕೊಲೆ ಪ್ರಕರಣದ ಹಿಂದೆಯೂ ಭಯೋತ್ಪಾದಕರಿದ್ದರು. ಆದರೆ, ಆ ಬಗ್ಗೆ ಸರಿಯಾದ ತನಿಖೆ ನಡೆದಿರಲಿಲ್ಲ. ಸರಿಯಾದ ತನಿಖೆ ನಡೆದಿದ್ದರೆ ಇಸ್ಲಾಮಿಕ್ ಮಾನಸಿಕತೆಯ ದೊಡ್ಡ ವ್ಯಕ್ತಿಗಳೂ ಬಯಲಿಗೆ ಬರುತ್ತಿದ್ದರು ಎಂದು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. 

ಹಿಂದುತ್ವ ಮರೆತಿದ್ದಕ್ಕೆ ಇಂದು ವಿಪಕ್ಷ ಸ್ಥಾನದಲ್ಲಿ ಬಿಜೆಪಿ: ಪ್ರಮೋದ್‌ ಮುತಾಲಿಕ್‌

ವಕ್ಫ್‌ ಬೋರ್ಡ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ದೇಶ ದ್ರೋಹಿ ಚಟುವಟಿಕೆಗೆ ಪೂರಕವಾಗಿರುವ ಈ ಕಾಯ್ದೆಗೆ ಕಾಂಗ್ರೆಸ್ ವಿಶೇಷ ಅಧಿಕಾರ ನೀಡಿದ್ದು, ಮುಸ್ಲಿಮರ ತುಷ್ಠಿಕರಣದ ಸಲುವಾಗಿಯೇ ಈ ಕಾಯ್ದೆ ಸೃಷ್ಟಿ ಮಾಡಲಾಗಿದೆ. ರೈತರ ಜಮೀನು ವಕ್ಸ್ ಖಾತೆಗೆ ಸೇರಿದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ರೈತ ಭುಗಿಲೆದ್ದಿದ್ದಾನೆ. ದಲಿತರ ಭೂಮಿ, ದೇವಸ್ಥಾನ, ಗರಡಿಮನೆ ಸರ್ಕಾರಿ ಭೂಮಿಯನ್ನೂ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದರು. 

ರಾಯಚೂರು ಜಿಲ್ಲೆ ಸಿಂಧನೂರು ಶಾಸಕರ 12 ಎಕರೆ ಜಮೀನು ವಕ್ಫ್‌ ಆಸ್ತಿ ಎಂದೂ ಹೇಳಲಾಗಿದೆ. 9.40 ಲಕ್ಷ ಎಕರೆ ಭೂಮಿಯನ್ನು ವಕ್ಫ್‌ ಬೋರ್ಡ್‌ಗೆ ದಾನ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರಲ್ಲದೇ, ಯಾವುದೇ ಇಸ್ಲಾಂ ರಾಷ್ಟ್ರದಲ್ಲೂ ಇಷ್ಟರ ಮಟ್ಟಿನ ಅಧಿಕಾರ ನೀಡಿದ ಒಂದು ಉದಾಹರಣೆಯೂ ಇಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಕಾಯ್ದೆ ವಾಪಾಸು ತೆಗೆದುಕೊಳ್ಳಲು ಹೇಳಿದ್ದರೂ ನೋಟಿಸ್ ಕಳುಹಿಸಲಾಗುತ್ತಿದೆ. ಹಾಗಾದರೆ ಮುಖ್ಯಮಂತ್ರಿಗಳ ಆದೇಶಕ್ಕೂ ಬೆಲೆ ಇಲ್ಲವೇ ಎಂದು ಎಂದಿದ್ದರು.  

click me!