ಮುಸ್ಲಿಮರಲ್ಲಿನ ಅಸಹಿಷ್ಣತೆಯೇ ಭಯೋತ್ಪಾದನೆಗೆ ಕಾರಣ: ಸಿ.ಟಿ. ರವಿ

By Kannadaprabha News  |  First Published Dec 15, 2024, 11:29 PM IST

ಮುಸಲ್ಮಾನರು ಇರುವ ಕಡೆ ಒಬ್ಬನೇ ದೇವರು, ಒಬ್ಬನೇ ಪ್ರವಾದಿ. ಆದರೂ ಒಬ್ಬರನ್ನು ಒಬ್ಬರು ಕೊಲ್ಲುತ್ತಾರೆ. ಏಕೆ ಹೀಗೆ ಎಂದು ಸಮುದಾಯದ ವಿದ್ವಾಂಸರು ಕೂತು ಆಲೋಚಿಸಬೇಕಿದೆ ಎಂದು ಸಲಹೆ ನೀಡಿದ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ 


ಚಿಕ್ಕಮಗಳೂರು(ಡಿ.15):   ಮುಸ್ಲಿಮರಲ್ಲಿನ ಅಸಹಿಷ್ಣತೆಯೇ ಭಯೋತ್ಪಾದನೆಗೆ ಕಾರಣ. ಇಸ್ಲಾಂ ತನ್ನ ಮೂಲ ಸ್ವರೂಪ ಬದಲಿಸಿಕೊಳ್ಳಬೇಕು. 1400 ವರ್ಷಗಳ ಹಿಂದಿನ ಬರ್ಬರತೆಯನ್ನೇ ಇಂದಿಗೂ ಅಳವಡಿಸಿಕೊಳ್ಳುವುದು ಜಗತ್ತಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೂ ಒಳ್ಳೆಯದಲ್ಲ. ಭಯೋತ್ಪಾದಕರು ಎಂದರೆ ಬಹು ದೊಡ್ಡ ಪಾಲು ಮುಸಲ್ಮಾನರು ಎಂಬುದನ್ನು ಆ ಸಮುದಾಯ ಚಿಂತನೆ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹೇಳಿದರು.

ದತ್ತ ಪೀಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ 333 ಕೋಟಿ ದೇವತೆಗಳಿವೆ. ನಾವೆಲ್ಲ ದೇವನೊಬ್ಬ ನಾಮ ಹಲವು ಎಂಬ ತತ್ತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ಹೆಚ್ಚು ಎಂದರೆ ನಮ್ಮಲ್ಲಿ ಜಗಳ ನಡೆಯಬಹುದು. ಅದನ್ನು ಮೀರಿದ ಭಯೋತ್ಪಾದನೆ ನಮ್ಮಲ್ಲಿಲ್ಲ. ಮುಸಲ್ಮಾನರು ಇರುವ ಕಡೆ ಒಬ್ಬನೇ ದೇವರು, ಒಬ್ಬನೇ ಪ್ರವಾದಿ. ಆದರೂ ಒಬ್ಬರನ್ನು ಒಬ್ಬರು ಕೊಲ್ಲುತ್ತಾರೆ. ಏಕೆ ಹೀಗೆ ಎಂದು ಸಮುದಾಯದ ವಿದ್ವಾಂಸರು ಕೂತು ಆಲೋಚಿಸಬೇಕಿದೆ ಎಂದು ಸಲಹೆ ನೀಡಿದರು.

Tap to resize

Latest Videos

ಚಿಕ್ಕಮಗಳೂರು: ದತ್ತಜಯಂತಿ ಶೋಭಾಯಾತ್ರೆ, ವೀರಗಾಸೆ ಕತ್ತಿ ಹಿಡಿದು ಸಿ.ಟಿ.ರವಿ ಭರ್ಜರಿ ಡ್ಯಾನ್ಸ್!

ಇಂದು ಎಲ್ಲಾ ಧರ್ಮ ಗ್ರಂಥಗಳನ್ನು ಚರ್ಚೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ. ಭಗವದ್ಗೀತೆ, ವೇದ, ಉಪನಿಷತ್ತು, ವಚನಗಳು, ಕುರಾನ್, ಬೈಬಲ್ ಗಳನ್ನು ಚರ್ಚೆಗೆ ಒಳಪಡಿಸಿ ಮಾನವ ಕುಲಕ್ಕೆ ಹಾಗೂ ಜಗತ್ತಿಗೆ ಹಿತಕಾರಿಯಾದ ಅಂಶಗಳನ್ನು ಅಷ್ಟೇ ಧರ್ಮ ಗ್ರಂಥಗಳಲ್ಲಿ ಉಳಿಸಿಕೊಳ್ಳಬೇಕು. ನೆಮ್ಮದಿ ಹಾಳು ಮಾಡುವ ಅಂಶಗಳನ್ನು ಧರ್ಮ ಗ್ರಂಥಗಳಿಂದ ತೆಗೆದು ಹಾಕಬೇಕು ಎಂದರು.

undefined

ಖಾಲಿ ಜಾಗದಲ್ಲಿ ಎಷ್ಟೇ ದೊಡ್ಡದಾದ ಮಸೀದಿಯನ್ನಾದರೂ ಕಟ್ಟಲಿ. ಕೇಳಿದಲ್ಲಿ ಅದಕ್ಕೆ ನಾವೇ ಜಾಗವನ್ನು ದಾನ ಕೊಡುತ್ತೇವೆ. ಆದರೆ ದೇವಸ್ಥಾನಗಳನ್ನು ಹೊಡೆದು ಮಸೀದಿ ಏಕೆ ಕಟ್ಟಬೇಕು ಎಂದು ಪ್ರಶ್ನಿಸಿದ ಅವರು, ದೇವಸ್ಥಾನ ಒಡೆದು ಕಟ್ಟಿರುವ ಮಸೀದಿಗಳನ್ನು ಬಿಡಲೇಬೇಕು ಎಂದು ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ನಡೆ ಗುಲಾಮಗಿರಿಯ ಸಂಕೇತ: ಸಿ.ಟಿ.ರವಿ ವಾಗ್ದಾಳಿ

ಚಿಕ್ಕಮಗಳೂರು: ಕೇರಳದ ವಯನಾಡಿನಲ್ಲಿ ಮನೆ ಕಟ್ಟಿಸಿಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕೇರಳದ ವಯನಾಡಿನಲ್ಲಿ 100 ಮನೆ ಕಟ್ಟಿಸಿ ಕೊಡುತ್ತೇವೆಂದು ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿ, ಇಡೀ ಅಖಂಡ ಭಾರತ ಒಂದು ಮಾಡುವ ಇಡೀ ವಿಶ್ವವೇ ಒಂದು ಮನೆ ಎಂಬ ಉದಾತ್ತ ಮನೋಭಾವನೆ ವಾರಸ್ದಾರರು ನಾವು. ಅಕ್ಕಪಕ್ಕದವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ, ಇಲ್ಲಿಯ ರೈತರನ್ನು ಕಡೆಗಣಿಸಿದ್ದಾರೆ. 

ಉಪಚುನಾವಣೆ ಫಲಿತಾಂಶ ಲೂಟಿಗೆ ಲೈಸನ್ಸ್‌ ಅಲ್ಲ: ಸಿ.ಟಿ ರವಿ

ರೈತರಿಗೆ ಪರಿಹಾರ ಕೊಟ್ಟಿಲ್ಲ, ವಯನಾಡಿನ ಜನರಿಗೆ ಸಹಾಯ ಮಾಡಲು ಹೊರಟಿರುವುದು ರಾಜಕೀಯ ಗುಲಾಮ ಗಿರಿಯ ಸಂಕೇತ ಎಂದು ಆರೋಪಿಸಿದರು. ರಾಹುಲ್ ಹಾಗೂ ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ಕ್ಷೇತ್ರ ಎಂದು ಒಂದು ಕ್ಷೇತ್ರಕ್ಕೆ ಸಹಾಯ ಮಾಡುವುದು ರಾಜ್ಯದ ತೆರಿಗೆ ಹಣ ಅಲ್ಲಿಗೆ ವಿನಿಯೋಗಿಸುವುದು ರಾಜಕೀಯ ಗುಲಾಮಗಿರಿ ಪ್ರತೀಕವಾಗಲಿದೆ, ಅದನ್ನು ವಿರೋಧಿಸುತ್ತೇವೆ ಎಂದರು. ಕನ್ನಡಿಗರ ಕಷ್ಟಕ್ಕೆ ಸ್ಪಂದಿಸದೆ ಕನ್ನಡಿಗರ ತೆರಿಗೆ ಹಣವನ್ನು ಅಲ್ಲಿ ವಿನಿಯೋಗಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದರು. 

ಇಸ್ಕಾನ್‌ ಪ್ರಮುಖರ ಬಂಧನಕ್ಕೆ ತೀವ್ರ ಕಿಡಿ: ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಮತಾಂಧ ಮಸಲ್ಮಾನರ ಒತ್ತಡಕ್ಕೆ ಮಣಿದು ಅಲ್ಲಿನ ಸರ್ಕಾರ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥ ಚಿನ್ಮಯ ಪ್ರಭು ಅವರನ್ನು ಬಂಧಿಸಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿನ ವಿದ್ಯಮಾನಗಳು ಕಳವಳಕಾರಿಯಾಗಿವೆ. ಚಿನ್ಮಯ ಪ್ರಭು ಅವರನ್ನು ದೇಶದ್ರೋಹಿ ಚಟುವಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಧ್ವನಿಯೆತ್ತಿ ಪ್ರತಿಭಟನೆ ನಡೆಸಿದ್ದೇ ಅವರಿಗೆ ಪ್ರಮಾದವಾಗಿದೆ ಎಂದು ಹೇಳಿದ್ದರು. 

click me!