Dec 15, 2024, 5:17 PM IST
ಮುಂದಿನ ವಾರ ತೆರೆಗೆ ಬರೋದಕ್ಕೆ ಸಜ್ಜಾಗಿರೋ UI ಸಿನಿಮಾದಲ್ಲಿ ನಾಯಕಿಯಾಗಿರೋದು ಏಕ್ ಲವ್ ಯಾ ಬೆಡಗಿ ರೀಷ್ಮಾ ನಾಣಯ್ಯ. ಈ ಕೊಡಗಿನ ಕುವರಿ ಸದ್ಯ ಫುಲ್ ಡಿಮ್ಯಾಂಡ್ ನಲ್ಲಿದ್ದಾಳೆ. ಬಹುನಿರೀಕ್ಷೆಯ ಕೆಡಿ ಅಡ್ಡದಲ್ಲೂ ಈಕೆನೇ ಲೀಡಿಂಗ್ ಲೇಡಿ.. ಸ್ಯಾಂಡಲ್‌ವುಡ್‌ನಲ್ಲಿ ಮಿರ ಮಿರ ಮಿಂಚ್ತಾ ಇರೋ ಈ ಗ್ಲಾಮರ್ ಗೊಂಬೆಯ ಕೆರಿಯರ್ ಗ್ರಾಫ್ ಮೇಲಕ್ಕೆ ಏರ್ತಾನೆ ಇದೆ.
ಕೊಡಗಿನ ಕುವರಿ ಕುಣಿತಕ್ಕೆ ಪಡ್ಡೆ ಹೈಕ್ಳು ಛಯ್ಯ ಛಯ್ಯಾ..!
ಯೆಸ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಹವಾ ಸೃಷ್ಟಿ ಮಾಡಿರೋದು ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ. ಏಕ್ ಲವ್ ಯಾ ಸಿನಿಮಾದಲ್ಲಿ ತುಂಟು ಹುಡುಗಿಯಾಗಿ ಕರೆಂಟು ಹೊಡಿಸಿದ್ದ ಈ ಗ್ಲಾಮರ್ ಗೊಂಬೆ ಸದ್ಯ UI ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾಳೆ.
ಉಪೇಂದ್ರ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗೋದು ಅಂದ್ರೆ ಸುಮ್ನೇನಾ. ಸೋ ರೀಷ್ಮಾ ಕಾಲು ಈಗ ಆಗಸದಲ್ಲಿವೆ. ಇದೇ ಸಿನಿಮಾದಲ್ಲಿ ಟ್ರೋಲ್ ಆಗುತ್ತೆ ಅಂತ ಕುಣಿದಿರೋ ಈ ಚೆಲುವೆಯ ಹಲ್ ಚಲ್ಗೆ ಪಡ್ಡೆ ಹೈಕಳು ಫಿದಾ ಆಗಿದ್ದಾರೆ.
ಇನ್ನೂ ರಿಲೀಸ್ಗೆ ಸಜ್ಜಾಗಿರೋ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲೂ ರೀಷ್ಮಾನೇ ಲೀಡಿಂಗ್ ಲೇಡಿ. ಪ್ರೇಮ್ ನಿರ್ದೇಶನದ ಸಿನಿಮಾ ಅಂದ್ರೆ ಕೇಳಬೇಕಾ ತನ್ನ ಅದ್ದೂರಿ ಹಾಡಗಳಲ್ಲಿ ಈ ಚೆಲುವೆಯ ಚೆಲುವನ್ನ ಗ್ರ್ಯಾಂಡ್ ಆಗೇ ತೋರಿಸ್ತಾರೆ ಅನ್ನೋ ನಂಬಿಕೆಯಲ್ಲಿದ್ದಾರೆ ಕೆಡಿ ಬಾಯ್ಸ್.
ಇವೆರಡರ ನಂತರ ಡಾಲಿ ಧನಂಜಯ್ ನಟನೆಯ ಅಣ್ಣ ಫ್ರಂ ಮೆಕ್ಸಿಕೋ ಸಿನಿಮಾಗೂ ರೀಷ್ಮಾ ನಾಯಕಿಯಾಗಿ ಆಯ್ಕೆ ಆಗಿದ್ದಾಳೆ. ಒಟ್ಟಾರೆ ರೀಷ್ಮಾ ನಾಣಯ್ಯ ಕರೀಯರ್ ಗ್ರಾಫು ಏರ್ತಾನೇ ಇದೆ. ಇವಳ ಕುಣಿತಕ್ಕೆ ಪಡ್ಡೆಹುಡುಗರ ಹೃದಯ ಬಡಿತ ಹೆಚ್ಚಿದಂತೆ ಈಕೆಯ ಫ್ಯಾನ್ಸ್ ಸಂಖ್ಯೆಯೂ ಏರ್ತಾ ಇದೆ.