ಹಾಟ್ ಆಗಿ ಕನ್ನಡಿ ಮುಂದೆ ಪೋಸ್ ನೀಡಿದ ಅನನ್ಯಾ; ಬಿಕಿನಿ ಲುಕ್‌ಗೆ ನೆಟ್ಟಿಗರ ರಿಯಾಕ್ಷನ್ ಹೀಗಿದೆ

First Published Feb 11, 2023, 2:13 PM IST

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಸಿನಿಮಾಗಳಿಂದ ಹೆಚ್ಚಾಗಿ ಹಾಟ್ ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಅನನ್ಯಾ ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಸಿನಿಮಾಗಳಿಂದ ಹೆಚ್ಚಾಗಿ ಹಾಟ್ ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಅನನ್ಯಾ ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

ಇದೀಗ ಮತ್ತಷ್ಟು ಫೋಟೋಗಳನ್ನು ಅನನ್ಯಾ ಶೇರ್ ಮಾಡಿದ್ದಾರೆ. ಬಿಕಿನಿ ಧರಿಸಿ ಕನ್ನಡಿ ಮುಂದಿ ನಿಂತು ಪೋಸ್ ನೀಡಿರುವ ಅನನ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತರಹೇವಾರಿ ಪೋಸ್ ನೀಡಿದ್ದಾರೆ. ಅನನ್ಯಾ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ  ವ್ಯಕ್ತವಾಗುತ್ತಿವೆ. 

Latest Videos


ಅನೇಕ ಫೋಟೋಗಳನ್ನು ಶೇರ್ ಮಾಡಿ ಕ್ಯಾಪ್ಷನ್ ನೀಡಿದ್ದಾರೆ. ಮಿರರ್ ಸೆಲ್ಫಿ, ರ್ಯಾಂಡಮ್ ಸೆಲ್ಫಿ ಅಂತ ಕ್ಯಾಪ್ಷನ್ ನೀಡಿದ್ದಾರೆ. ಅನನ್ಯಾ ಸೆಲ್ಫಿಗೆ ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ಕಾಮೆಂಟ್ ಮಾಡಿದ್ದಾರೆ. ಅನನ್ಯಾ  ಫೋಟೋಗೆ ವಾವ್ ಎಂದು ಹೇಳಿದ್ದಾರೆ. ಇನ್ನು ಕೆಲವರು ಅನನ್ಯಾ ಉದ್ದ ಕೂದಲಿನ ಫೋಟೋ ಸುಂದರವಾಗಿದೆ, ಮತ್ತೆ ಆ ಲುಕ್‌ಗೆ ಬನ್ನಿ ಎಂದು ಹೇಳಿದ್ದಾರೆ. ಇನ್ನು ಅನೇಕರು ಹಾಟಿ ಎಂದು ಹೇಳಿದ್ದಾರೆ. 

ನಟಿ ಅನನ್ಯಾ ಪಾಂಡೆ 2019ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟರು. ಸ್ಟೂಡೆಂಟ್ ಆಫ್ ದಿ ಇಯರ್ 2 ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. ನಾಲ್ಕೈದು ಸಿನಿಮಾಗಳಲ್ಲಿ ಮಿಂಚಿರುವ ಅನನ್ಯಾಗೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ. ಕೊನೆಯದಾಗಿ ಅನನ್ಯಾ ಪಾಂಡೆ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. 
 

ಲೈಗರ್ ಸಿನಿಮಾ ಮೂಲಕ ಅನನ್ಯಾ ಮೊದಲ ಬಾರಿಗೆ ಸೌತ್ ಸಿನಿಮಾರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಮೊದಲ ಬಾರಿಗೆ ತೆರೆಹಂಚಿಕೊಂಡರು. ಭಾರಿ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಕೂಡ ಹೀನಾಯ ಸೋಲು ಕಂಡಿತು. ಸದ್ಯ ಅನನ್ಯಾ ಪಾಂಡೆ ಡ್ರೀಮ್ ಗರ್ಲ್-2ನಲ್ಲಿ ಬ್ಯುಸಿಯಾಗಿದ್ದಾರೆ. 

click me!