ಇವರು ನೆನಪಿದ್ದರಾ? ಬಿಬಿಕೆ ಮಿನಿ ಸೀಸನ್‌ನಲ್ಲಿ ಭಾಗವಹಿಸಿ ಈಗ ಕನ್ನಡ & ತೆಲುಗು ಬಿಗ್‌ಬಾಸ್‌ ನಲ್ಲಿ ಸ್ಪರ್ಧಿಗಳು!

By Gowthami K  |  First Published Oct 4, 2024, 7:13 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಭಾಗವಹಿಸಿದ್ದ ಮೂವರು ಈಗ ಬಿಗ್‌ಬಾಸ್‌ ಕನ್ನಡ ಮತ್ತು ತೆಲುಗು ಬಿಗ್ಬಾಸ್ ಸ್ಪರ್ಧಿಗಳಾಗಿದ್ದಾರೆ. ಯಾರು ಎಂಬು ಕುತೂಹಲ ನಿಮಗಿದ್ದರೆ ಈ ಲೇಖನ ಪೂರ್ತಿಯಾಗಿ ಓದಿ.


ಕಲರ್ಸ್ ಕನ್ನಡದಲ್ಲಿ ಈ ಬಿಗ್‌ಬಾಸ್‌ ಸೀಸನ್‌ 11 ನಡೆಯುತ್ತಿದೆ. ಆದರೆ ನಿಮಗೆ ನೆನಪಿದೆಯಾ ಬಿಗ್ ಬಾಸ್ ಕನ್ನಡ ಸೀಸನ್ 8 ರ ಬಳಿಕ ಕನ್ನಡದಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಮಿನಿ ಸೀಸನ್ ನಡೆದಿತ್ತು. ಇಲ್ಲಿ ಹೆಚ್ಚಿನವರು ಧಾರವಾಹಿ ಕಲಾವಿದರೆ ಭಾಗವಹಿಸಿದ್ದರು. 7 ನಟರು ಮತ್ತು 7 ಮಂದಿ ನಟಿಯರು ಇದ್ದರು. ಇವರ ಜೊತೆಗೆ ನಿರೂಪಕರಾದ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಕೂಡ ಭಾಗವಹಿಸಿದ್ದರು.

ಕಲರ್ಸ್ ವಾಹಿನಿಯಲ್ಲಿ ಆಗ ಪ್ರಸಾರವಾಗುತ್ತಿದ್ದ ಧಾರಾವಾಹಿ ಕಲಾವಿದರಾದ ಧನುಷ್ ಗೌಡ, ಭವ್ಯಾ ಗೌಡ, ಗಗನ್ ಚಿನ್ನಪ್ಪ, ಯಶಸ್ವಿನಿ, ಕಿರಣ್ ರಾಜ್, ರಮೋಲಾ, ಚಂದನಾ ಅನಂತಕೃಷ್ಣ, ನಯನಾ ನಾಗರಾಜ್, ಹೃತ್ವಿಕ್ ಮಠದ್, ತ್ರಿವಿಕ್ರಮ್, ವೈಷ್ಣವಿ, ಅಭಿನವ್ ವಿಶ್ವನಾಥನ್, ಕೌಸ್ತುಭ ಮಣಿ, ನಿರಂಜನ್ ದೇಶಪಾಂಡೆ, ,  ಪ್ರೇರಣಾ ಕಂಬಂ ಮುಂತಾದವರು ಈ ಶೋನಲ್ಲಿ ಭಾಗವಹಿಸಿದ್ದಾರೆ.  ಬಿಗ್ ಬಾಸ್ ಮಿನಿ ಸೀಸನ್‌ನ ಗ್ರ್ಯಾಂಡ್ ಫಿನಾಲೆಯ ನಿರೂಪಣೆ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ನಡೆಸಿಕೊಟ್ಟಿದ್ದರು. ಈ ಮಿನಿ ಸೀಸನ್‌ 2 ವಾರಗಳ ಕಾಲ ನಡೆದಿತ್ತು.

Tap to resize

Latest Videos

undefined

ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ರಜನಿಕಾಂತ್

ಈ ವಿಷ್ಯ ಅದಲ್ಲಿ ಈ ಸೀಸನ್‌ ಬಳಿಕ ಬಿಗ್‌ಬಾಸ್‌ 9 ಮತ್ತು ಬಿಗ್‌ಬಾಸ್‌ 10 ಸೀಸನ್‌ ಕಳೆದು ಈಗ ಹನ್ನೊಂದನ್ನೇ ಸೀಸನ್‌ ನಡೆಯುತ್ತಿದೆ. ಆದರೆ  2021 ರ  ಆಗಸ್ಟ್ 14ರಂದು  ಮಿನಿ ಸೀಸನ್ ನಡೆದು 15 ದಿನನಗಳ ಬಳಿಕ  ಸೆ.4 ಮತ್ತು ಸೆ.5ರಂದು ಫೈನಲ್ ನಡೆದಿತ್ತು. ಬಿಗ್ ಬಾಸ್ ಮಿನಿ ಸೀಸನ್ ತುಂಬ ವಿಭಿನ್ನವಾಗಿ ಮೂಡಿ ಬಂದಿತ್ತು. 

ಕೆಣಕಿದ ಜಗದೀಶ್ ವಿರುದ್ಧ ರೆಬೆಲ್‌ ಆದ ಧನ್‌ರಾಜ್, ಚುಚ್ಚಿದ ವಕೀಲರಿಗೆ ಮೈಮ್‌ ಮೂಲಕ ಉತ್ತರ ಕೊಟ್ಟ ಕಾಮಿಡಿಯನ್ ಧನು

 ಇದರಲ್ಲಿ ಭಾಗವಹಿಸಿದ್ದ ಮೂವರು ವ್ಯಕ್ತಿಗಳು ಈಗ ಈ ವರ್ಷದ ಬಿಗ್‌ಬಾಸ್‌  ಕನ್ನಡ ಮತ್ತು ತೆಲುಗು ಬಿಗ್ಬಾಸ್ ಸ್ಪರ್ಧಿಗಳಾಗಿದ್ದಾರೆ. ಅವರೆಂದರೆ ಭವ್ಯಾಗೌಡ, ತ್ರಿವಿಕ್ರಮ್ ಮತ್ತು ಪ್ರೇರಣಾ ಕಂಬಂ, ಮೊದಲನೆಯದಾಗಿ ಭವ್ಯಾಗೌಡ ಆಗ ಗೀತಾ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾಗ   ಮಿನಿ ಸೀಸನ್‌ ಗೆ ಬಂದಿದ್ದರು. ಮತ್ತೊಬ್ಬರು ತ್ರಿವಿಕ್ರಮ್‌ ಆಗ ಅವರು ಪದ್ಮಾವತಿ ಸೀರಿಯಲ್‌ ನಲ್ಲಿ ಸಾಮ್ರಾಟ್‌ ಆಗಿದ್ದರು. ಇವರಿಬ್ಬರೂ ಈಗ ಕನ್ನಡ ಬಿಗ್‌ಬಾಸ್‌ ಸೀಸನ್‌ 11 ರ ಸ್ಪರ್ಧಿಗಳಾಗಿದ್ದರೆ. ಇನ್ನೊಬ್ಬರು ನಟಿ ಪ್ರೇರಣಾ ಕಂಬಂ ಆಗ ಅವರು ಕಲರ್ಸ್ ವಾಹಿನಿಯ   'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ  ಕೊಂಡಿದ್ದರು. ಈಗ ಅವರು ತೆಲುಗು ಬಿಗ್‌ಬಾಸ್‌ ಸೀಸನ್ 8ರ ಸ್ಪರ್ಧಿಯಾಗಿದ್ದಾರೆ.

click me!