ಸಮಂತಾ ನನಗೆ ಬೇಕೆಂದು ನಾಗಾರ್ಜುನ ಬಳಿನೇ ಕೇಳಿದ್ರಾ KTR; ಅಸಲಿ ಸತ್ಯ ಇಲ್ಲಿದೆ...

By Vaishnavi Chandrashekar  |  First Published Oct 4, 2024, 5:41 PM IST

ನಟಿ ಸಮಂತಾ ಮೇಲೆ ಆಸೆ ಪಟ್ಟಿದ್ದನಾ ಕೆಸಿಆರ್ ಪುತ್ರ ಕೆಟಿಆರ್..? ಅಭಿಮಾನಿಗಳಿಗೆ ಮೋಡಿ ಮಾಡಿದ್ದ ಜೋಡಿಗೆ ಇದೆಂಥಾ ಆರೋಪ..!


ಟಾಲಿವುಡ್ ಲವ್ಲಿ ಕಪಲ್ ಆಗಿದ್ದ ಸಮಂತಾ -ನಾಗಚೈತನ್ಯ ಡಿವೋರ್ಸ್ ಕುರಿತು ತೆಲಂಗಾಣದಲ್ಲಿ ಜ್ವಾಲೆ ಬುಗಿಲೆದ್ದಿದೆ. ಇದಕ್ಕೆ ಕಾರಣ ಡಿವೋರ್ಸ್ ಕುರಿತು ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಕೊಟ್ಟ ಸ್ಟೋಟಕ ಮತ್ತು ಅತ್ಯಂತ ಅಸಹ್ಯಕರವಾದ ಹೇಳಿಕೆ. ಕೊಟ್ಟ ಆ ಹೇಳಿಕೆಗೆ ತೆಲುಗು ಚಿತ್ರರಂಗವೇ ಸಚಿವರ ವಿರುದ್ಧ ತಿರುಗು ಬಿದ್ದಿದೆ. ಕೊನೆಗೆ ಬುಗಿಲೆದ್ದ ಆಕ್ರೋಶಕ್ಕೆ ಭಯಗೊಂಡು ಆಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ. ಹಾಗಿದ್ರೆ ಅವರು ಆಡಿದ ಮಾತಾದ್ರು ಏನು? ಆ ಮಾತು ಅಷ್ಟೊಂದು ಆಕ್ರೋಶಕ್ಕೆ ಕಾರಣವಾಗಿದ್ದಾದರೂ ಏಕೆ?

ಅಕ್ಕಿನೇನಿ ಕುಟುಂಬ ಮತ್ತು ಸಮಂತಾಳ ಬಗ್ಗೆ ಕೊಂಡಾ ಸುರೇಖಾ ಮಾಡಿದ ಈ ಆರೋಪದಿಂದ ತೆಲಂಗಾಣದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ತೆಲುಗು ಚಿತ್ರರಂಗ ಕೊಂಡಾ ಸುರೇಖಾರ ವಿರುದ್ಧ ತಿರುಗಿ ಬಿದ್ದಿದೆ. ಭಯಬಿದ್ದ ಸುರೇಖಾ ಆಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ. ಸಚಿವೆ ಕೊಂಡಾ ಸುರೇಖಾ ಅವರು ಮಾಡಿದ ಆರೋಪಕ್ಕೆ ತೆಲಂಗಾಣದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ತೆಲುಗು ಚಿತ್ರರಂಗ ಸೇರಿದಂತೆ ಎಲ್ಲರೂ ಕೊಂಡಾ ಸುರೇಖಾ ಅವರಿಗೆ ಚೀಮಾರಿ ಹಾಕುತ್ತಿದ್ದಾರೆ. ಆರೋಪ ಮಾಡಿದ ಒಂದೇ ದಿನಕ್ಕೆ ಭಯಗೊಂಡ ಸಚಿವೆ ಸಮಂತಾಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.  ನಿನ್ನೆ ಕೊಂಡಾ ಸುರೇಖಾ ಅದ್ಯಾವ ಉದ್ದೇಶದಿಂದ ಇಂಥಹದ್ದೊಂದು ಗಂಭೀರ ಆರೋಪ ಮಾಡಿದ್ರೋ ಗೊತ್ತಿಲ್ಲ. ಮಾಡಿದ ಆರೋಪಕ್ಕೆ ಇಂದು ಎಲ್ಲರೂ ಸೇರಿ ಅವರ ಚಳಿ ಬಿಡಿಸಿದ್ದಾರೆ. ತಡವಾದ್ರೆ ಬೆಂಕಿ ಇನ್ನು ಹೊತ್ತಿಕೊಳ್ಳುತ್ತೆ ಎಂಬ ಕಾರಣಕ್ಕೆ ತಕ್ಷಣ ಕ್ಷಮೆ ಕೋರಿದ್ದಾರೆ. ಆ ಕುರಿತು ನೋಡೋಣ ಒಂದು ಬ್ರೇಕ್ನ ನಂತರ. 

Tap to resize

Latest Videos

undefined

ಇನ್ನು ಮುಂದೆ ಸಂಪೂರ್ಣ ನಿರ್ಧಾರ ನನ್ನದು, ವರ್ಷಕ್ಕೆ 2-3 ಮೂರು ಸಿನಿಮಾ ರಿಲೀಸ್ ಮಾಡಬೇಕು: ಅಶ್ವಿನಿ ಪುನೀತ್ ರಾಜ್‌ಕುಮಾರ್
 
ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಹೇಳಿಕೆ ಕೊಡುತ್ತಾರೆ. ಯಾರ ಭಾವನೆ ಬೇಕೆಂದರೂ ನುಚ್ಚು ನೂರು ಮಾಡುತ್ತಾರೆ. ಹಾಗೆನೇ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಲಾಭಕ್ಕಾಗಿ ಮತ್ತು ತಮ್ಮ ವೋಟ್ಬ್ಯಾಂಕ್ಗಾಗಿ ಬೇರೆಯವರ ಜೀವನವನ್ನು ಹಾಳು ಮಾಡಲೂ ಅವರು ಸಿದ್ಧರಿರುತ್ತಾರೆ. ಇತ್ತೀಚೆಗೆ ರಾಜಕಾರಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಅನ್ನೋದಕ್ಕೆ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಬೆಸ್ಟ್ ಎಕ್ಸಾಂಪಲ್. ಹಾಗೆನೇ ಇತ್ತೀಚಿನ ರಾಜಕಾರಣಿಗಳಲ್ಲಿ ಮಾನವೀಯ ಮೌಲ್ಯಗಳು ಇಲ್ಲವಾಗುತ್ತಿವೆ ಅನ್ನೋದಕ್ಕೂ ಇದೇ ಕೊಂಡಾ ಸುರೇಖಾ ಬೆಸ್ಟ್ ಎಕ್ಸಾಂಪಲ್.

click me!