ನಾನು ಸ್ಮೃತಿ ಇರಾನಿ... ವಯಸ್ಸು 21... ಎತ್ತರ 5.8 ಅಡಿ... ರಾಜಕೀಯ ಅಂದ್ರೆ ಎನ್ನುತ್ತಲೇ ಕ್ಯಾಟ್​ ವಾಕ್​: ವಿಡಿಯೋ ವೈರಲ್​

By Suchethana D  |  First Published Oct 4, 2024, 8:34 PM IST

ಮಾಜಿ ಸಚಿವೆ ಸ್ಮೃತಿ ಇರಾನಿ ಮಿಸ್​ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಹೇಗಿದ್ದರು? ರಾಜಕೀಯರ ಕುರಿತು ಆಗ ಅವರು ಹೇಳಿದ್ದೇನು? 
 


ರೂಪದರ್ಶಿಯಾಗಿ, ನಟಿಯಾಗಿ ಹಾಗೂ ನಿರೂಪಕಿಯಾಗಿ ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಸ್ಮೃತಿ ಇರಾನಿ ಅವರ  ಸಾಧನೆಯ ಹಾದಿ ಬಹಳ ದೀರ್ಘವಾಗಿದೆ. ಯಾವ ಗಾಡ್ ಫಾದರ್ ಇಲ್ಲದೇ ರಾಜಕೀಯ ಹಿನ್ನಲೆಯೂ ಇಲ್ಲದೇ ಸ್ವಂತ ಪರಿಶ್ರಮದಿಂದ ರಾಜಕೀಯ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ಮೃತಿ ಇರಾನಿಗೆ ಕಳೆದ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಶಾಕ್​  ಕೊಟ್ಟಿದೆ. ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಮೃತಿ ಪರಾಭವಗೊಂಡಿದ್ದಾರೆ. ಜವಳಿ ಖಾತೆ ಸಚಿವೆಯಾಗಿ ಬಳಿಕ ಮಹಿಳಾ  ಮತ್ತು ಮಕ್ಕಳ ಖಾತೆ ಸಚಿವೆಯಾಗಿದ್ದ ಸ್ಮೃತಿ ಅವರಿಗೆ ಈ ಚುನಾವಣೆಯಿಂದ ಮರ್ಮಾಘಾತವಾಗಿದ್ದಂತೂ ನಿಜ.

ಅಂದಹಾಗೆ ಸ್ಮೃತಿ ಅವರಿಗೆ ಈಗ 48 ವರ್ಷ ವಯಸ್ಸು.  ಮಾರ್ಚ್​ 23ರ 1976ರಂದು ಹುಟ್ಟಿರೋ ಸ್ಮೃತಿ ಇರಾನಿ, ರಾಜಕೀಯಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ಫೇಮಸ್​ ಎನ್ನುವುದು ಎಲ್ಲರಿಗೂ ತಿಳಿದದ್ದೇ.  ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿಯಲ್ಲಿ ತುಳಸಿಯಾಗಿ ಅಭಿನಯಿಸಿ ಹಲವು ವರ್ಷ ಮನೆಮನೆಗಳಲ್ಲಿನ ಮನಗಳನ್ನು ಗೆದ್ದವರು. ಇರಾನಿ ಸೌಂದರ್ಯ ಸ್ಪರ್ಧೆಯ ಮಿಸ್ ಇಂಡಿಯಾ 1998 ರಲ್ಲಿ ಭಾಗವಹಿಸಿದವರಲ್ಲಿ ಒಬ್ಬರು. ಆಲ್ಬಂ, ಟಿವಿ ಸರಣಿ ನಟನೆಯನ್ನು ಪ್ರಾರಂಭಿಸಿದರು. ಜಿ ಟಿವಿಯಲ್ಲಿ ರಾಮಾಯಣದಲ್ಲಿ ಸೀತಾ ಎಂಬ ಮಹಾಕಾವ್ಯ ಪಾತ್ರವನ್ನು ನಿರ್ವಹಿಸಿದರು. ಆದರೆ ಕುತೂಹಲದ ವಿಷಯ ಎಂದರೆ, ಅವರು, 21ನೇ ವಯಸ್ಸಿನಲ್ಲಿಯೇ ಮಿಸ್​ ಇಂಡಿಯಾ ಆಗುವ ಕನಸು ಹೊತ್ತು ಭಾರತದಿಂದ ಪ್ರತಿನಿಧಿಸಿದ್ದರು ಎನ್ನುವ ವಿಷಯ ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ! ಹೌದು. ಅದರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ. 

Tap to resize

Latest Videos

undefined

ದರ್ಶನ್​ ನನಗಾಗಿ ಡೇಟ್​ ಅಡ್ಜೆಸ್ಟ್​ ಮಾಡ್ಕೋತಿದ್ರು: ಅಂಥ ನಟನನ್ನು ನೋಡೇ ಇಲ್ಲ ಎಂದು ಹೊಗಳಿದ ಆ್ಯಂಕರ್​ ಶ್ವೇತಾ

1998ರಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಸ್ಮೃತಿ ಅವರು ಕ್ಯಾಟ್​ ವಾಕ್​ ಮಾಡುತ್ತಲೇ ತಮ್ಮನ್ನು ತಾವು ಪರಿಚಯಿಸಿಕೊಂಡಿರುವುದನ್ನು ನೋಡಬಹುದು. ನನಗೆ ಈಗ 21 ವರ್ಷ ವಯಸ್ಸು. ಎತ್ತರ 5 ಅಡಿ ಎಂಟು ಇಂಚು ಎನ್ನುತ್ತಲೇ ಆಗ ರಾಜಕೀಯ ಎಂದರೆ ತಮಗೆ ಇಷ್ಟ ಎಂದು ಹೇಳಿದ್ದರು. ಭಾರತದ ಸಂಸ್ಕೃತಿ ಮತ್ತು ರಾಜಕೀಯದ ಕುರಿತು ಮಾತನಾಡಿದ್ದ ಸ್ಮೃತಿ ಅವರು 21ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡುವ ಸೂಚನೆ ನೀಡಿದ್ದರು.  ಸ್ಪರ್ಧೆಯಲ್ಲಿ ಅವರು ಕಿತ್ತಳೆ ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್‌ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದರು. ಫೈನಲ್​ ರೌಂಡ್​ ಪ್ರವೇಶಿಸಿದ್ದು. ಆದರೆ ಅಗ್ರ 9 ರೊಳಗೆ ತಲುಪಲು ಸಾಧ್ಯವಾಗದ ಸ್ಪರ್ಧಿಗಳಲ್ಲಿ ಸ್ಮೃತಿ ಕೂಡಾ ಒಬ್ಬರು.  

 
ಅಂದಹಾಗೆ ಇವರು ನಟಿಯಾಗಿ,  ಮಾಡೆಲ್ ಆಗಿ ಮತ್ತು ದೂರದರ್ಶನ ನಿರ್ಮಾಪಕಿ ಆಗಿ 20 ವರ್ಷಗಳಿಗೂ ಅಧಿಕ ಕಾಲ ಕೆಲಸ ಮಾಡಿದ್ದಾರೆ. 1998ರಲ್ಲಿಯೇ ರಾಜಕೀಯ ಸೇರುವ ಆಸೆ ವ್ಯಕ್ತಪಡಿಸಿದ್ದ ಅವರ ಆಸೆ ಈಡೇರಿದ್ದು,  2003 ರಲ್ಲಿ. ಅವರು ಅಧಿಕೃತ ಬಿಜೆಪಿ ಸೇರಿದರು.   2010 ರಿಂದ 2013 ರವರೆಗೆ ಬಿಜೆಪಿ ಮಹಿಳಾ ಮೋರ್ಚಾದ  ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದರು. ಬಳಿಕ  ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾದರು. 2011 ರಿಂದ 2019 ರವರೆಗೆ ಗುಜರಾತ್‌ನಿಂದಲೇ ರಾಜ್ಯಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಇವರು.  2019 ರಿಂದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ವೃತ್ತಿಪರ ಚಿತ್ರನಟಿಯಾಗಿ ನಂತರ ರಾಜಕಾರಣ ಪ್ರವೇಶ ಮಾಡಿ   ರಾಜಕಾರಣಿಯಾಗಿ ಯಶಸ್ಸು ಸಾಧಿಸಿದ್ದ ಇವರು ಬಿಜೆಪಿಯ  ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಮೊದಲ ರಾಜ್ಯಸಭೆ ಸದಸ್ಯರಾಗಿ, ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಅಮೇಥಿಯಲ್ಲಿ ಸೋಲಿಸಿ ಲೋಕಸಭೆ ಪ್ರವೇಶಿದರು. ಇದೀಗ ಪರಾಭವಗೊಂಡಿದ್ದಾರೆ. ಆದರೆ ಅವರ ಈ ವಿಡಿಯೋ ಮಾತ್ರ ಸಕತ್​ ಸದ್ದು ಮಾಡುತ್ತಿದೆ.

ಗಗನಸಖಿಯಂತೆ ಇನ್ಮುಂದೆ ಬಸ್ಸಲ್ಲೂ ಬರ್ತಿದ್ದಾಳೆ ‘ಶಿವನೇರಿ ಸುಂದರಿ': ಪ್ರಯಾಣಿಕರಿಗೆ ಬಸ್‌ ಸಖಿ ಭಾಗ್ಯ!

 

click me!