27ನೇ ಮಹಡಿಯಿಂದ ಬಿದ್ದ 3 ವರ್ಷದ ಹೆಣ್ಣುಮಗು, ಗಂಭೀರ ಗಾಯದ ನಡುವೆ ಪವಾಡ!

By Chethan KumarFirst Published Oct 4, 2024, 8:23 PM IST
Highlights

ಮೂರು ವರ್ಷದ ಪುಟ್ಟ ಹೆಣ್ಣು ಮಗು 27ನೇ ಮಹಡಿಯಿಂದ ಕೆಳಕ್ಕೆ ಬಿದ್ದಿದೆ. 12ನೇ ಮಹಡಿಗೆ ಅಪ್ಪಳಿಸಿದ ಹೆಣ್ಣು ಮಗು ಗಂಭೀರ ಗಾಯಗೊಂಡಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದ ಮಗು ಪವಾಡಸದೃಶ್ಯವಾಗಿ ಬದುಕುಳಿದಿದೆ.

ಗ್ರೇಟರ್ ನೋಯ್ಡಾ(ಅ.04) ಗಗನ ಚುಂಬಿ ಅಪಾರ್ಟ್‌ಮೆಂಟ್. 27ನೇ ಮಹಡಿಯಲ್ಲಿ ಆಟವಾಡುತ್ತಿದ್ದ ಮಗು ಅಚಾನಕ್ಕಾಗಿ ಬಾಲ್ಕನಿಯತ್ತ ಬಂದು ಕೆಳಕ್ಕೆ ಬಿದಿದ್ದೆ. 12ನೇ ಮಹಡಿಯ ಬಾಲ್ಕನಿಗೆ ಅಪ್ಪಳಿಸಿದ ಮಗು ತೀವ್ರವಾಗಿ ಗಾಯಗೊಂಡಿದೆ. ತಕ್ಷಣವೇ ಮಗುವನ್ನು ಎತ್ತಿಕೊಂಡು ಆಸ್ಪತ್ರೆ ದಾಖಲಿಸಲಾಗಿದೆ. ಪವಾಡ ಸದೃಶ್ಯ ಎಂಬಂತೆ ಮಗು ಬದುಕುಳಿದಿದೆ. ಆದರೆ ಗಂಭೀರವಾಗಿ ಗಾಯಗೊಂಡಿರುವ ಕಾರಣ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 

ಮನೆಯಲ್ಲಿ 3 ವರ್ಷದ ಕಂದ ಹಾಗೂ ತಾಯಿ ಇಬ್ಬರೇ ಇದ್ದಾಗ ಈ ಘಟನೆ ನಡೆದಿದೆ. ಗ್ರೇಟರ್ ನೋಯ್ಡಾದ ಅಪಾರ್ಟ್‌ಮೆಂಟ್‌ನ 27ನೇ ಮಹಡಿಯಲ್ಲಿದ್ದ ಕುಟುಂಬ ಇದೀಗ ಆಘಾತಕ್ಕೊಳಗಾಗಿದೆ. ಮಧ್ಯಾಹ್ನದ ವೇಳೆ ತಾಯಿ ಮಗುವನ್ನು ಆಟವಾಡಿಸುತ್ತಾ, ಆಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮಗು ಆಟವಾಡುತ್ತಿದ್ದಂತೆ ಅಡುಗೆ ಮನೆಗೆ ತೆರಳಿದ್ದಾರೆ. ಬಳಿಕ ಕೆಲ ಹೊತ್ತು ಆಡುಗೆ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ.

Latest Videos

ಆಘಾತ, ಟೀಕೆ, ನೋವು; 4ನೇ ಮಹಡಿ ರೂಫ್‌ನಿಂದ ರಕ್ಷಿಸಲ್ಪಟ್ಟ ಮಗುವಿನ ತಾಯಿ ಸಾವು!

ಇತ್ತ ಆಟವಾಡುತ್ತಿದ್ದ 3 ವರ್ಷದ ಹೆಣ್ಣು ಮಗು ಲಿವಿಂಗ್ ರೂಂನಿಂದ ನೇರವಾಗಿ ಬಾಲ್ಕನಿಯತ್ತ ತೆರಳಿ ಆಯತಪ್ಪಿ ಕೆಳಕ್ಕೆ ಬಿದ್ದಿದೆ. 27ನೇ ಮಹಡಿಯಿಂದ ಬಿದ್ದ ಮಗು 12ನೇ ಮಹಡಿಯ ಬಾಲ್ಕನಿಗೆ ಅಪ್ಪಳಿಸಿದೆ. ಬಿದ್ದ ರಭಸಕ್ಕೆ ಮಗು ಗಂಭೀರವಾಗಿ ಗಾಯಗೊಂಡಿದೆ. 12ನೇ ಮಹಡಿಯ  ನಿವಾಸಿಗಳು ತಕ್ಷಣವೇ ಮಗುವನ್ನು ಎತ್ತಿಕೊಂಡು ಸರ್ವೋದಯ ಆಸ್ಪತ್ರೆ ದಾಖಲಿಸಿದ್ದಾರೆ. 

ಸದ್ಯ ಮಗು ಐಸಿಯುನಲ್ಲಿದೆ. ಗಂಭೀರ ಗಾಯದಿಂದ ಬಳಲಿದೆ. ಮಗುವಿನ ದೇಹ ತುಂಬೆಲ್ಲಾ ಗಾಯಗಳಾಗಿವೆ. ವೈದ್ಯರ ತಂಡ ಮಗುವಿಗೆ ಚಿಕಿತ್ಸೆ ನೀಡುತ್ತಿದೆ. ಪರಿಸ್ಥಿತಿ ಗಂಭೀರವಾಗಿದೆ. ವೈದ್ಯರ ಪ್ರಕಾರ ಮಗು ಬದುಕುಳಿದಿರುವುದು ಪವಾಡ, ಹೀಗಾಗಿ ಈ ಮಗು ಚೇತರಿಸಿಕೊಳ್ಳಲಿದೆ ಎಂದು ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಇತ್ತ ಮಗುವಿನ ಪೋಷಕರು ಆಘಾತಕ್ಕೊಳಗಾಗಿದ್ದಾರೆ. 

ಇತ್ತ ಗ್ರೇಟರ್ ನೋಯ್ಡಾ ನಿವಾಸಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಭದ್ರತೆ ಹೆಚ್ಚಿಸಲು ಆಗ್ರಹಿಸಿದ್ದಾರೆ. ಪ್ರಮುಖವಾಗಿ ಹಲವು ಅಂತಸ್ತುಗಳ ಕಟ್ಟಡಗಳಲ್ಲಿ ಬಾಲ್ಕನಿಯಲ್ಲಿ ಸುರಕ್ಷತೆ ಅವಶ್ಯಕತೆ ಇದೆ. ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಅಂತಸ್ತುಗಳ ಮೆನೆಗಳ ಬಾಲ್ಕನಿ ಸೇರಿದಂತೆ ಅಪಾಯದ ಸ್ಥಳಗಳಲ್ಲಿ ಗ್ರಿಲ್ ಸೇರಿದಂತೆ ಭದ್ರತೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ರೀತಿಯ ಹಲವು ಘಟನೆಗಳು ನಡೆದಿದೆ. ಇತ್ತೀಚೆಗೆ ಬಾಲ್ಕನಿಯಲ್ಲಿದ್ದ ತಾಯಿಯ ಕೈಯಿಂದ ಮಗು ಜಾರಿ ಬಿದ್ದ ಘಟನೆ ನಡೆದಿತ್ತು. ಆದರೆ ಬಾಲ್ಕನಿಯ ರೂಫ್ ಮೇಲೆ ಸಿಲುಕಿಕೊಂಡ ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿತ್ತು. ಆದರೆ ಆಘಾತದಿಂದ ಖಿನ್ನತೆಗೆ ಜಾರಿದ ತಾಯಿ ಬಳಿಕ ಬದುಕು ಅಂತ್ಯಗೊಳಿಸಿದ ಘಟನೆ ನಡೆದಿತ್ತು.

Breaking: ವಿಜಯಪುರ ಆಪರೇಷನ್ ಸಾತ್ವಿಕ್ ಸಕ್ಸಸ್; ಸಾವನ್ನು ಗೆದ್ದುಬಂದ ಮೃತ್ಯುಂಜಯ
 

click me!