ರಿಲ್ಯಾಕ್ಸ್ ಮೂಡಲ್ಲಿ ಸಿದ್ದು: ಇಂಗ್ಲಿಷ್‌ನಿಂದ ಕನ್ನಡಕ್ಕೆ ಟ್ರಾನ್ಸಲೇಟ್ ಮಾಡಲು ಸಿಎಂ ಯತ್ನ, ನಗೆಗಡಲಲ್ಲಿ ತೇಲಿದ ಜನ!

By Girish GoudarFirst Published Oct 4, 2024, 8:46 PM IST
Highlights

ಚತುಷ್ಪಥ ಅಂದ್ರೆ ಕೆಲವರಿಗೆ ಅರ್ಥ ಆಗಲ್ಲ, ಫೋರ್ ಲೈನ್ ಅಂದ್ರೆ ಅರ್ಥ ಆಗುತ್ತೆ. ರೈಲ್ ಅಂದ್ರೆ ಅರ್ಥ ಆಗುತ್ತೆ ಹೊಗೆ ಬಂಡಿ ಅಂದ್ರೆ ಅರ್ಥ ಆಗಲ್ಲ. ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಂದ್ರೆ ಅರ್ಥ ಆಗುತ್ತೆ ಕನ್ನಡದಲ್ಲಿ ಅರ್ಥ ಆಗಲ್ಲ. ಕನ್ನಡದಲ್ಲಿ ಎಸ್‌ಪಿಗೆ ಏನು ಅಂತಾರೆನ ಎಂದು ಕನ್ನಡದಲ್ಲಿ ಟ್ರಾನ್ಸಲೇಟ್ ಮಾಡಲು ಸ್ವಲ್ಪ ಹೊತ್ತು ತಡಕಾಡಿದ ಸಿಎಂ ಸಿದ್ದರಾಮಯ್ಯ 

ರಾಯಚೂರು(ಅ.04):  ನಾನು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಸಿಂಧನೂರಿನಲ್ಲಿ ಮೊದಲ ಬಾರಿಗೆ ದಸರಾ ಉತ್ಸವ ಆಚರಣೆ ಮಾಡುತ್ತಿದ್ದಾರೆ. 371 (ಜೆ) ಹೋರಾಟಗಾರಿಗೆ ಸನ್ಮಾನಿಸಿದ್ದೇನೆ. 1,695 ಕೋಟಿ ರೂ. ಚತುಷ್ಪಥ ರಸ್ತೆಗೆ ಚಾಲನೆ ನೀಡಿದ್ದೇನೆ. ನನಗೆ ಶಾಸಕ ಹಂಪನಗೌಡ ಬಾದರ್ಲಿ ಆಹ್ವಾನ ಮಾಡಿದ್ರು. ಅದಕ್ಕೆ ನಾನು ಸಿಂಧನೂರಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಇಂದು(ಶುಕ್ರವಾರ) ಸಿಂಧನೂರು ದಸರಾ ಉತ್ಸವದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದಸರಾ ಮಹೋತ್ಸವ ಆಚರಣೆಗೆ ಯಾವುದೇ ಧರ್ಮ, ಜಾತಿ ಇರಬಾರದು. ಸೌಹಾರ್ದ ನಡಿಗೆ ಅಂತ ಎರಡು ಕಿ.ಮೀ. ಮೆರವಣಿಗೆ ಮಾಡಿದ್ದಾರೆ. ನಮ್ಮ ಸಮಾಜದಲ್ಲಿ ನಾವು ಸೌಹಾರ್ದತೆಯಿಂದ ಬದುಕುವುದು ಅವಶ್ಯಕತೆ ಇದೆ. ದಸರಾ ಹಬ್ಬ ಜಾತಿ- ನೀತಿಗಳು ಮೀರಿ ನಡೆಯುವ ಹಬ್ಬವಾಗಿದೆ. ಚಾಮುಂಡೇಶ್ವರಿ ದೇವಿಯ ಅವತಾರ ದೇವಿಯೇ ಅಂಬಾದೇವಿ ಎಂದು ಕರೆಯುತ್ತಾರೆ. ನಿನ್ನೆ ನಾವು ಮೈಸೂರು ದಸರಾಕ್ಕೆ ಚಾಲನೆ ನೀಡಿದ್ದೇವೆ. 9 ದಿನಗಳ ಕಾಲ ಸಿಂಧನೂರಿನಲ್ಲಿ ದಸರಾ ನಡೆಯಲಿದೆ. ಸಾಂಸ್ಕೃತಿಕ, ಮಹಿಳಾ, ಕಲಾ, ಯುವ, ರೈತ ದಸರಾ 9 ದಿನಗಳ ಕಾಲ ನಡೆಯಲಿದೆ. ಕೊನೆಯ ದಿನ ಆನೆ ಮೇಲೆ ಅಂಬಾದೇವಿ ಮೆರವಣಿಗೆ ನಡೆಯಲಿದೆ. ಇದು ನಮ್ಮ ಸೌಹಾರ್ದ, ಖುಷಿ, ನಾಡಿನ ತುಂಬಾ ಮಾಡುವ ಹಬ್ಬವಾಗಿದೆ. ಎಲ್ಲರೂ ಪಕ್ಷ ಬೇಧ ಮರೆತು ಮಾಡುವುದು ನನಗೆ ಖುಷಿ ತಂದಿದೆ. ರಾಜ್ಯದ ಎಲ್ಲೆಡೆಯೂ ಈ ದಸರಾ ನಡೆಯಲಿದೆ ಎಂದು ತಿಳಿಸಿದ್ದಾರೆ. 

Latest Videos

ಅಬ್ಬಬ್ಬಾ! ಜಿಟಿ ದೇವೇಗೌಡ ಪರಾಕ್ರಮ ನೋಡಿದ್ರೆ ಮುಡಾ ಫಲಾನುಭವಿ ಇರಬೇಕು: ಹೆಚ್. ವಿಶ್ವನಾಥ್!

ನಾನು ಈ ಸಾರಿ ಅದ್ಧೂರಿ ದಸರಾ ಮಾಡಲು ಹೇಳಿದ್ದೇನೆ.  ಈ ಬಾರಿ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಈ ವರ್ಷ ನಾಡಿನ ತುಂಬಾ ಸಮೃದ್ಧಿ ಕಾಣುತ್ತಿದ್ದೇವೆ. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

371 ( ಜೆ) ಬಗ್ಗೆ ಸಚಿವರು ಈಗ ಮಾತನಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅವಕಾಶ ಕಲ್ಪಿಸಿಕೊಡುವಂತದ್ದು 371(ಜೆ) ಕಲಂ. ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಉಪ ಸಮಿತಿ ನಾವು ಮಾಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಪ್ರಯತ್ನದಿಂದ 371 (ಜೆ) ಆಯ್ತು. ಹೋರಾಟಗಾರಿಗೆ ಸನ್ಮಾನ ಮಾಡಿದಂತೆ ಖರ್ಗೆ, ಧರಂಸಿಂಗ್ ಗೆ ಗೌರವ ಸಲ್ಲಿಸಬೇಕು. ಧರಂಸಿಂಗ್ ನಮ್ಮ ಮಧ್ಯೆ ಇಲ್ಲ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ಹೇಳಿದ್ದಾರೆ. 

ಕಲಬುರಗಿ ಕ್ಯಾಬಿನೆಟ್ ಮಿಟೀಂಗ್‌ನಲ್ಲಿ 57 ವಿಷಯಗಳಲ್ಲಿ 47 ವಿಷಯಗಳು ಕಲ್ಯಾಣ ಕರ್ನಾಟಕಕ್ಕೆ ಸೇರಿದ್ದವು. 11,770 ಕೋಟಿ ರೂ. ಒಂದೇ ಕ್ಯಾಬಿನೆಟ್ ನಲ್ಲಿ ನಾವು ಮಂಜೂರು ಮಾಡಿದ್ದೇವೆ. ಡಾ.ನಂಜುಡಪ್ಪ ವರದಿಯಂತೆ ಬದಲಾಗಿ ಗೋವಿಂದ ರಾವ್ ಸಮಿತಿ ರಚನೆ ಮಾಡಿದ್ದೇನೆ. 371 ಜೆ ನಿಂದ ಏನಾಗಿದೆ ಎಂಬುವುದನ್ನ ತಿಳಿಯಲು ಗೋವಿಂದ ರಾವ್ ಸಮಿತಿ ರಚನೆ ಮಾಡಿದ್ದೇವೆ. ಗೋವಿಂದ ರಾವ್ ವರದಿ ಕೊಟ್ಟ ಮೇಲೆ ಮತ್ತೆ ಅದನ್ನ ಜಾರಿಗೆ ತರುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿನ‌ ಅಸಮತೋಲನ ‌ತೊಲಗಬೇಕು. 1 ಲಕ್ಷ 9 ಸಾವಿರ ಹುದ್ದೆಗಳನ್ನ ಗುರುತಿಸಿದ್ದೇವೆ. 79 ಸಾವಿರ ಹುದ್ದೆಗಳು ಭರ್ತಿ ಮಾಡಿದ್ದೇವೆ. ಈ ಭಾಗವೂ ಮಂಗಳೂರು, ಉಡುಪಿಯಂತೆ ಅಭಿವೃದ್ಧಿ ಆಗಬೇಕು. ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್. ಮಾಜಿ ಪಿಎಂ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಹೆಸರು ಪ್ರಸ್ತಾಪಿಸಿದ್ದಾರೆ ಸಿಎಂ ಸಿದ್ದರಾಮಯ್ಯ. 

ಸಿಂಧನೂರು, ಮಾನ್ವಿ, ರಾಯಚೂರು ಗ್ರಾಮೀಣ ಭತ್ತದ ಕಣಜವಾಗಿದೆ. ರಾಯಚೂರು- ಸಿಂಧನೂರು ರಸ್ತೆ ನಾನೇ ಮಾಡಿದೆ. ಈಗ ಮತ್ತೆ ನಾನೇ ಚತುಷ್ಪಥ ಅಂದ್ರೆ ಯಾರಿಗೂ ಅರ್ಥ ಆಗಲ್ಲ. ಅದಕ್ಕೆ ನಾನು ಫೋರ್ ಲೈನ್ ರಸ್ತೆ ಅಂತ ಕಾರು, ರೈಲಿನ ಉದಾಹರಣೆಗೆ ನೀಡಿದೆ ಎಂದು ಹೇಳುವ ಮೂಲಕ ವೇದಿಕೆ ಮೇಲೆ ಕನ್ನಡ- ಇಂಗ್ಲಿಷ್ ಪದ ಬಳಕೆ ಬಗ್ಗೆ  ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. 

ವಿಪಕ್ಷಗಳಿಗೆ ಸಿದ್ದರಾಮಯ್ಯ ಟಾಂಗ್

ಅಭಿವೃದ್ಧಿಗೆ ದುಡ್ಡಿಲ್ಲ ಅಂತ ವಿಪಕ್ಷಗಳು ವಾಗ್ದಾಳಿ ಮಾಡುತ್ತಾರೆ. ನಾನು ರಸ್ತೆಗೆ ಇಷ್ಟು ದುಡ್ಡು ಕೊಟ್ಟೇ ಹೇಗೆ ನಿಮಗೆ ಗೊತ್ತಾ?. ನಮ್ಮ ಸರ್ಕಾರ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ. ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡುವರು ಇರಲೇಬೇಕು. ಟೀಕೆ ಮಾಡಲಿ ಜನರಿಗೆ ಸತ್ಯ ಗೊತ್ತಾಗಬೇಕು. ರಸ್ತೆ 3 ವರ್ಷದಲ್ಲಿಯೇ ಮುಗಿಸಬೇಕು ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟಿದ್ದಾರೆ. 
ಸಿಎಂ ಸಿದ್ದರಾಮಯ್ಯ ಭಾಷಣ ವೇಳೆ ಸಿಂಧನೂರು ಜಿಲ್ಲೆ ಕೂಗು ಕೇಳಿ ಬಂದಿದೆ. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ಆಗದೇ ಇರೋದನ್ನ ಹೇಳಿ ಹೋಗೋದಕ್ಕೆ ಆಗುತ್ತಾ?. ಅದರ ಬಗ್ಗೆ ರಿಪೋರ್ಟ್ ತರಿಸಿಕೊಳ್ಳುತ್ತೇನೆ. ದಸರಾ ಹಬ್ಬದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಸಿಎಂ ದೆಹಲಿ ಪ್ರವಾಸ: ನಾನು ದಿಲ್ಲಿಗೆ ಹೋಗೋದಿಲ್ಲ, ಹೋಗ್ತೇನೆ ಅಂತ ಹೇಳಿದವರು ಯಾರು?, ಸಿದ್ದು ಗರಂ

ರಿಲ್ಯಾಕ್ಸ್‌ ಮೂಡಲ್ಲಿ ಸಿದ್ದು

ಹೌದು, ರಾಜಕೀಯದ ಜಂಜಾಟದ ಮಧ್ಯೆ ಸಿಎಂ ಸಿಎಂ ಸಿದ್ದರಾಮಯ್ಯ ಇಂದು ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. ಹೌದು, ಎಷ್ಟೋ ಇಂಗ್ಲೀಷ್ ಪದಗಳು ಕನ್ನಡ ಪದಗಳು ಆಗಿಹೋಗಿವೆ. ಕೆಲ ಇಂಗ್ಲಿಷ್ ಪದಗಳನ್ನ ವೇದಿಕೆ ‌ಮೇಲೆ ಕನ್ನಡಕ್ಕೆ ಟ್ರಾನ್ಸಲೇಟ್ ಮಾಡಲು ಯತ್ನಿಸಿದ್ದಾರೆ ಸಿಎಂ ಸಿದ್ದರಾಮಯ್ಯ. 

ಚತುಷ್ಪಥ ಅಂದ್ರೆ ಕೆಲವರಿಗೆ ಅರ್ಥ ಆಗಲ್ಲ, ಫೋರ್ ಲೈನ್ ಅಂದ್ರೆ ಅರ್ಥ ಆಗುತ್ತೆ. ರೈಲ್ ಅಂದ್ರೆ ಅರ್ಥ ಆಗುತ್ತೆ ಹೊಗೆ ಬಂಡಿ ಅಂದ್ರೆ ಅರ್ಥ ಆಗಲ್ಲ. ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಂದ್ರೆ ಅರ್ಥ ಆಗುತ್ತೆ ಕನ್ನಡದಲ್ಲಿ ಅರ್ಥ ಆಗಲ್ಲ. ಕನ್ನಡದಲ್ಲಿ ಎಸ್‌ಪಿಗೆ ಏನು ಅಂತಾರೆನ ಎಂದು ಕನ್ನಡದಲ್ಲಿ ಟ್ರಾನ್ಸಲೇಟ್ ಮಾಡಲು ಸಿಎಂ ಸ್ವಲ್ಪ ಹೊತ್ತು ತಡಕಾಡಿದ್ದಾರೆ. ಪಕ್ಕದಲ್ಲಿದ್ದವರನ್ನ ಕರೆದು ಕೇಳಿದ್ದಾರೆ ಸಿಎಂ ಸಿದ್ದರಾಮಯ್ಯ. ಇದರಿಂದ ಜನರುಕೆಲಕಾಲ ನಗೆಗಡಲಲ್ಲಿ ತೇಲಾಡಿದ್ದಾರೆ. 

click me!