ಶೋಕಿ ನೋಡಿ ಪ್ರೀಸಿಸಿ ಮದುವೆಯಾಗು ಅಂದ ಸೀರಿಯಲ್​​ ನಟಿ: ಎಣ್ಣೆ ಪಾರ್ಟಿಯಲ್ಲಿ ಅವರಿಬ್ಬರ ನಡುವೆ ನಡೆದಿದ್ದೇನು?

ಶೋಕಿ ನೋಡಿ ಪ್ರೀಸಿಸಿ ಮದುವೆಯಾಗು ಅಂದ ಸೀರಿಯಲ್​​ ನಟಿ: ಎಣ್ಣೆ ಪಾರ್ಟಿಯಲ್ಲಿ ಅವರಿಬ್ಬರ ನಡುವೆ ನಡೆದಿದ್ದೇನು?

Published : Oct 04, 2024, 07:29 PM IST

ಒಟ್ಟಿಗೇ ಕೂತು ಎಣ್ಣೆ ಪಾರ್ಟಿ ಮಾಡಿದ್ದಾರೆ.. ಪಾರ್ಟಿ ನಂತರ ಇಬ್ಬರ ನಡುವೆ ಜೋರು ಜಗಳವಾಗಿದೆ.. ಆಕೆ ಮತ್ತೇ ಮದುವೆಯಾಗು ಅಂತ ಹಠ ಹಿಡಿದಿದ್ದಾಳೆ.. ಈ ವೇಳೆಯಲ್ಲಿ ನಾನಿದ್ರೇನೇ ತಾನೆ ಈವೆಲ್ಲಾ ಅಂತ ಹೇಳಿ ಸೀದಾ ಬಾಥ್​​ರೂಮ್​ಗೆ ಹೋಗಿ ನೇಣಿಗೆ ಶರಣಾಗಿಬಿಟ್ಟಿದ್ದಾನೆ. 

ಬೆಂಗಳೂರು(ಅ.04):  ಅವಳು ಸೀರಿಯಲ್​ ನಟಿ, ಒಂದೆರಡು ಸೀರಿಯಲ್​ನಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ಲು. ಇನ್ನೂ ಆತ ಶೋಕ್​ದಾರ್​​.. ಪಾರಿವಾಳಗಳನ್ನ ಹಾರಿಸಿ ದುಡ್ಡು ಸಂಪಾದಿಸುತ್ತಿದ್ದ.. ಟೂರ್ನಾಮೆಂಟ್​ಗಳಲ್ಲಿ ಕಪ್​ಗಳನ್ನ ಗೆದ್ದು ಒಳ್ಳೆ ಹೆಸರು ಮಾಡಿದ್ದ. ಈ ಇಬ್ಬರೂ ಇನ್​ಸ್ಟಾ ಮೂಲಕ ಸ್ನೇಹಿತರಾದ್ರು ನಂತರ ಒಂದು ವರ್ಷ ಲವ್​ ಮಾಡಿದ್ರು.. ಆದ್ರೆ ಇವತ್ತು ಆ ಶೋಕ್​​ದಾರ್​​​ ಅದೇ ಪ್ರೀತಿಯಿಂದ ಹೆಣವಾಗಿದ್ದಾನೆ. ಅವಳದ್ದೇ ಮನೆಯಲ್ಲಿ ರಾತ್ರಿ ಪಾರ್ಟಿ ಮಾಡಿದ್ದಾರೆ ಆದ್ರೆ ಪಾರ್ಟಿ ನಂತರ ಆಕೆ ನಿದ್ರೆಗೆ ಜಾರಿದ್ರೆ ಆತ ಸೀದಾ ಬಾತ್​ರೂಮ್​ಗೆ ಹೋಗಿ ನೇಣುಗಿದುಕೊಂಡಿದ್ದ.. ಅಷ್ಟಕ್ಕೂ ಆ ಹುಡುಗನ ಸಾವಿಗೆ ಕಾರಣವೇನು..? ಆ ಮನೆಯಲ್ಲಿ ನೆನ್ನೆ ರಾತ್ರಿ ನಡೆದಿದ್ದಾದ್ರೂ ಏನು..? ದುರಂತ ಅಂತ್ಯ ಕಂಡ ಒಂದು ಲವ್​​​ ಸ್ಟೋರಿಯೇ ಇವತ್ತಿನ ಎಫ್‌ಐಆರ್​​​.

ಪಾರ್ಟಿ ಮಾಡಿದ ಮೇಲೆ ಬಾಥ್​​ರೂಮ್​​ಗೆ ಹೋದ ಮದನ್​​​ ನೇಣಿಗೆ ಶರಣಾಗಿದ್ದ.. ಆದ್ರೆ ಆತ ಸಾಯುತ್ತಿದ್ರೆ ವೀಣಾ ಹೆಡ್​ ಫೋನ್​​ ಹಾಕೊಂಡು ರೂಮ್​ನಲ್ಲಿ ಮಲಗಿದ್ದಳು.. ಅಷ್ಟಕ್ಕೂ ಮದನ್​​ ಇದ್ದಕ್ಕಿದ್ದ ಹಾಗೆ ಹೋಗಿ ನೇಣುಬಿಗಿದುಕೊಂಡಿದ್ದೇಕೆ..? ನಿನ್ನೆ ಆ ಪಾರ್ಟಿಯಲ್ಲಿ ಇಬ್ಬರ ನಡುವೆ ಏನಾಯ್ತು..? 

ಒಟ್ಟಿಗೆ ಆಡಿ ಬೆಳೆದವರು ಹೆಣ್ಣಿಗಾಗಿ ಕಾದಾಟ: ಅವಳಿಗಾಗಿ ಪ್ರಾಣ ಸ್ನೇಹಿತನನ್ನೇ ಕೊಂದು ಮುಗಿಸಿದ್ದ

ಆಕೆಗೆ ಮೊದಲೇ ಒಂದು ಲವ್​ ಬ್ರೇಕ್​​ಅಪ್​ ಆಗಿತ್ತು. ಮೊದಲ ಹುಡುಗ ಕೈಕೊಟ್ಟಾಗ ಡಿಪ್ರೆಷನ್​​ನಲ್ಲಿದ್ದವಳಿಗೆ ಸಿಕ್ಕಿದ್ದೇ ಈ ಮದನ್​​.. ಆದ್ರೆ ಮದನ್​ ಜೊತೆಗೆ ಪ್ರೀತಿಯಲ್ಲಿ ಬಿದ್ದಾಗಲೂ ಆಕೆ ಬೇರೆ ಹುಡುಗರ ಜೊತೆ ಓಡಾಡುತ್ತಿದ್ದಳಂತೆ.. ಇದನ್ನ ತಿಳಿದ ಮದನ್​ ಆಕೆಯ ಜೊತೆಗೆ ಬ್ರೇಕ್​​​​​ ಅಪ್​ ಮಾಡಿಕೊಳ್ಳೋದಿಕ್ಕೆ ನಿರ್ಧರಿಸಿದ್ದ.. ಆದ್ರೆ ಅವಳು ಮಾತ್ರ ನೀನೇ ಬೇಕು ಅಂತ ಅವನ ಹಿಂದೆ ಬಿದ್ದಿದ್ದಳು.. ಇನ್ನೂ ಒಮ್ಮೆ ಅವನ ಮನೆ ಮುಂದೆಯೇ ಹೋಗಿ ಜಗಳ ಕೂಡ ಮಾಡಿದ್ದಳು.. ಪರಿಸ್ಥಿತಿ ಹೀಗಿರುವಾಗ್ಲೇ ಆವತ್ತು ಇಬ್ಬರೂ ಅವಳದ್ದೇ ಮನೆಯಲ್ಲಿ ಮೀಟ್​​ ಮಾಡಿದ್ದಾರೆ.. ಒಟ್ಟಿಗೇ ಕೂತು ಎಣ್ಣೆ ಪಾರ್ಟಿ ಮಾಡಿದ್ದಾರೆ.. ಪಾರ್ಟಿ ನಂತರ ಇಬ್ಬರ ನಡುವೆ ಜೋರು ಜಗಳವಾಗಿದೆ.. ಆಕೆ ಮತ್ತೇ ಮದುವೆಯಾಗು ಅಂತ ಹಠ ಹಿಡಿದಿದ್ದಾಳೆ.. ಈ ವೇಳೆಯಲ್ಲಿ ನಾನಿದ್ರೇನೇ ತಾನೆ ಈವೆಲ್ಲಾ ಅಂತ ಹೇಳಿ ಸೀದಾ ಬಾಥ್​​ರೂಮ್​ಗೆ ಹೋಗಿ ನೇಣಿಗೆ ಶರಣಾಗಿಬಿಟ್ಟಿದ್ದಾನೆ. 

ಪ್ರೀತಿ ಮಾಡಿದ ತಪ್ಪಿಗೆ ಇವತ್ತು ಮದನ್​ ಮಸಣ ಸೇರಿದ್ದಾನೆ. ಅವನನ್ನೇ ನಂಬಿದ್ದ ಆತನ ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.. ವಯಸ್ಸಲ್ಲದ ವಯಸಲ್ಲಿ ಲವ್​​​ ಬಲೆಗೆ ಬಿದ್ದು ನಂತರ ಪ್ರೀತಿಯಲ್ಲಿ ಮೋಸ ಹೋದ್ವಿ ಅನ್ನೋ ಕಾರಣಕ್ಕೆ ತಮ್ಮ ಜೀವನವನ್ನೇ ಅಂತ್ಯ ಮಾಡಿಕೊಳ್ಳುವವರಿಗೆ ಈ ಎಪಿಸೋಡ್​​ ಪಾಠವಾಗಲಿ. 

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more