ಹೇ ಹುಡುಗಿ, ನಿನ್ನ ಲವ್ ಲೈಫ್ ಕೀಲಿಕೈ ನಿನ್ನ ಕೈಲೇ ಇರಲಿ

ಸಾಮಾನ್ಯವಾಗಿ ಸಂಬಂಧವೆಂದರೆ ಅಲ್ಲಿ ಪುರುಷನದೇ ಪಾರುಪತ್ಯ. ನಾಚಿಕೆ, ಸಂಕೋಚ ಹಾಗೂ ಹುಡುಗಿ ಹೇಗಿರಬೇಕೆಂಬ ಸಮಾಜದ ಕಟ್ಟುಪಾಡುಗಳ ಕಾರಣದಿಂದ ಸಂಬಂಧದ ಕೀಲಿಕೈ ಅದರ ಯಜಮಾನನ ಬಳಿಯೇ ಇರುತ್ತದೆ. ಆದರೆ, ಹುಡುಗಿಯರೂ ಎಕ್ಸ್ಟ್ರಾ ಕೀಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ. 

Why it is important for women to take control of their romantic life

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಪುರುಷನಿಗಿಂತ ಮುನ್ನಡಿ ಇಡುತ್ತಿದ್ದಾಳೆ. ಆದರೆ, ರೊಮ್ಯಾಂಟಿಕ್ ರಿಲೇಶನ್‌ಶಿಪ್ ವಿಷಯಕ್ಕೆ ಬಂದರೆ ಮಾತ್ರ ತನ್ನೆಲ್ಲ ಫ್ಯಾಂಟಸಿಗಳನ್ನು ಹುಡುಗನೇ ಅರಿತು ಪೂರೈಸಲಿ ಎಂಬ ಕಾಯುವಿಕೆ ಅವಳದ್ದು. ಸಂಬಂಧದ ಆರಂಭದಿಂದಲೇ ತನ್ನ ಲೈಫ್ ಕುರಿತು, ಲವ್ ಕುರಿತು, ಯಾವಾಗ ಏನು ಮಾಡಬೇಕು, ಯಾವಾಗ ಸಂಬಂಧದಲ್ಲಿ ಎಷ್ಟು ಮುಂದುವರಿಯಬೇಕು ಮುಂತಾದ ಎಲ್ಲ ನಿರ್ಧಾರಗಳನ್ನೂ ತನ್ನ ಪಾರ್ಟ್ನರ್ ತೆಗೆದುಕೊಳ್ಳಲು ಅನಾಯಾಸವಾಗಿ ಬಿಟ್ಟುಕೊಡುತ್ತಾಳೆ ಅವಳು. ಲವ್ ವಿಷಯದಲ್ಲಿ ಫಸ್ಟ್ ಮೂವ್ ಅವನೇ ಮಾಡಲಿ ಎಂದು ಕಾಯುತ್ತಾಳೆ, ಎಷ್ಟೇ ಆಸೆ ಇದ್ದರೂ ಆತನನ್ನು ಡೇಟ್‌ಗೆ ಕರೆಯಲು ಹಿಂಜರಿಯುತ್ತಾಳೆ, ಮತ್ತೆ ಕೆಲವು ಯುವತಿಯರು ತಮ್ಮ ದನಿ ಎತ್ತಲು ಹಿಂಜರಿದ ಕಾರಣಕ್ಕೆ ಸಂತೋಷಹೀನ ಸಂಬಂಧವೊಂದರಲ್ಲಿ ಸಿಲುಕಿ ಜೀವನಪೂರ್ತಿ ನರಳಾಡುತ್ತಾರೆ. ಆದರೆ, ತನ್ನ ಲವ್ ಲೈಫ್ ವಿಷಯದ ನಿಯಂತ್ರಣವನ್ನು ಆಕೆಯೇ ತೆಗೆದುಕೊಳ್ಳಬೇಕಾದ ಸಮಯ ಇದಾಗಿದೆ. ಇದಕ್ಕೆ ಹಲವು ಕಾರಣಗಳೂ ಇವೆ. 

ನಿಮಗಾಗಿ ಒಂದು ಚಾನ್ಸ್ ಕೊಟ್ಟು ನೋಡಿ
ಹಿಂದಿನಿಂದಲೂ ಮಹಿಳೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಪುರುಷನಿಗೇ ಮೀಸಲಾಗಿ ಬಂದಿದೆ. ವಿವಾಹವೆಂದರೆ ಹುಡುಗಿಯ ಒಪ್ಪಿಗೆಯನ್ನೇ ಕೇಳದೆ ಹುಡುಗ ಇಷ್ಟಪಟ್ಟರೆ ಸಾಕೆಂದು ನಡೆಸಿಕೊಂಡು ಬಂದಿದೆ ಸಮಾಜ. ಅಲ್ಲದೆ, ಈ ವಿಷಯದಲ್ಲಿ ಸ್ವಲ್ಪ ದಿಟ್ಟ ನಿರ್ಧಾರ ಕೈಗೊಂಡರೂ ಅಂಥ ಹೆಣ್ಣನ್ನು ಲಜ್ಜೆಗೇಡಿ, ಗಂಡುಬೀರಿ ಎಂದೆಲ್ಲ ಹಂಗಿಸಿದೆ. ಮಹಿಳೆ ಎಂದರೆ ನಾಚಿಕೆ, ಸಂಕೋಚಗಳು ಅವಳಲ್ಲಿ ತುಂಬಿ ತುಳುಕುತ್ತಿರಬೇಕು ಎಂಬಂಥ ಹೇರಿಕೆ ಇದೆ. ಈ ಕಾರಣಕ್ಕೆ ಇಂದಿಗೂ ಮಹಿಳೆಯರು ಲವ್ ಲೈಫ್ ವಿಷಯದಲ್ಲಿ ತಮ್ಮ ಅಭಿಪ್ರಾಯ ಮೊದಲು ಹೊರಹಾಕಲು ಹೆದರುತ್ತಾರೆ. ಅಲ್ಲದೆ, ತಿರಸ್ಕಾರಗೊಳ್ಳುವ ಭಯ ಕೂಡಾ ಫಸ್ಟ್ ಮೂವ್‌ನಿಂದ ಅವರು ಹಿಂಜರಿಯುವಂತೆ ಮಾಡುತ್ತದೆ. ಆದರೆ, ಈ ಫಿಯರ್ ಆಫ್ ರಿಜೆಕ್ಷನ್ ಪುರುಷರಿಗೂ ಇರುತ್ತದೆ ಎಂಬುದನ್ನು ಅರಿತು, ನಮ್ಮ ಬದುಕು ನಮ್ಮದೇ ಆಯ್ಕೆಯಾಗಿರಬೇಕು ಎಂಬ ಛಲದಲ್ಲಿ ನಿಮ್ಮ ಈ ಲವ್ ಇಂಟ್ರಸ್ಟ್‌ಗೆ ಒಂದು ಚಾನ್ಸ್ ಕೊಟ್ಟು ನೋಡಿ. ಅವಕಾಶವನ್ನೇ ಕೊಡದೆ ಮನಸ್ಸಿನಲ್ಲೇ ಮಂಡಿಗೆ ತಿಂದರೆ ಪ್ರಯೋಜನವಿಲ್ಲ. ಹಾಗಾಗಿ, ನೀವಿಷ್ಟ ಪಟ್ಟವರೂ ಅವರೇ ನಿಮ್ಮ ಬಳಿ ಬರಲಿ ಎಂದು ಕಾಯುವ ಬದಲು ನೀವೇ ಆತನ ಬಳಿ ಹೋಗಿ ನೋಡಿ. ಭಾವನೆಗಳನ್ನು ವ್ಯಕ್ತಪಡಿಸದೇ ಉಳಿವ ಸಂಕಟಕ್ಕಿಂತ ತಿರಸ್ಕಾರ ಅಂಥ ದೊಡ್ಡ ನೋವು ತರುವುದಿಲ್ಲ. ಯಾರಿಗೆ ಗೊತ್ತು, ಪುರಸ್ಕಾರವೇ ಸಿಕ್ಕೀತು.

ಬೆಸ್ಟ್ ಅಮ್ಮ ಪ್ರಶಸ್ತಿ ಅಪ್ಪನಿಗೆ ಬಂದದ್ದು ಯಾಕೆ ಗೊತ್ತಾ?...

ನಿಮ್ಮ ಭಾವನೆಗಳನ್ನು ಗೌರವಿಸಿ
ನಿಮ್ಮ ರೊಮ್ಯಾಂಟಿಕ್ ಜೀವನದ ನಿಯಂತ್ರಣ ತೆಗೆದುಕೊಳ್ಳುವುದು ಎಂದರೆ, ನಿಮ್ಮ ಭಾವನೆಗಳೊಂದಿಗೆ ನೀವು ಕಂಫರ್ಟೇಬಲ್ ಆಗಿರುವುದು ಎಂದರ್ಥ. ಅದರೆ, ಮಹಿಳೆಯು ಪ್ರೀತಿಗೆ ಬಿದ್ದ ಕುರಿತು, ಅಥವಾ ಅದರಿಂದ ಹೊರಬಂದ ಕುರಿತು ದನಿ ಎತ್ತುವಂತಿರಬೇಕು. ಅಷ್ಟೇ ಅಲ್ಲ, ಸಂಬಂಧವೊಂದನ್ನು ಆರಂಭಿಸುವ, ಸಕಾರಣದಿಂದ ಅದನ್ನು ಕೊನೆಗೊಳಿಸುವ ಸ್ವಾತಂತ್ರ್ಯವೂ ಆಕೆಯ ಬಳಿಯೇ ಇರಬೇಕು. ಹಲವರು ಶಾಶ್ವತ ಪ್ರೀತಿ, ಸಮಾಜದ ಮಾತುಗಳು, ಪೂರ್ವಗ್ರಹ ಮುಂತಾದವಕ್ಕೆ ಹೆದರಿ ಒದ್ದಾಡುತ್ತಾರೆ. ಆದರೆ, ನಿಮ್ಮ ಕ್ಯಾರೆಕ್ಟರ್‌ನ್ನು ನಿಮ್ಮ ಸಂತೋಷ ಮಾತ್ರವೇ ನಿರ್ವಹಿಸಲು ಸಾಧ್ಯ ಎಂಬುದನ್ನು ಅರಿತು ಭಾವನೆಗಳನ್ನು ಗೌರವಿಸಿ, ಅದರಂತೆ ಮುನ್ನಡಿ ಇಡಿ. 

ಆತ್ಮವಿಶ್ವಾಸವೇ ಆರೋಗ್ಯಕರ ಸಂಬಂಧಕ್ಕೆ ಬುನಾದಿ
ಫಸ್ಟ್ ಮೂವ್ ತೆಗೆದುಕೊಳ್ಳುವುದು ಅಥವಾ ಸಂಬಂಧವೊಂದರಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದು ಬೋಲ್ಡ್‌ನೆಸ್ ಹಾಗೂ ಆತ್ಮವಿಶ್ವಾಸವನ್ನು ಬೇಡುತ್ತದೆ. ಆತ್ಮವಿಶ್ವಾಸದಿಂದ ಮಾಡುವ ಯಾವ ಕಾರ್ಯವೂ ವಿಫಲವಾಗಿದ್ದಿಲ್ಲ. ಆತ್ಮವಿಶ್ವಾಸ ಹೊಂದಿದ ಹೆಣ್ಣು ಜೀವನದ ಎಲ್ಲ ಸ್ಥರಗಳಲ್ಲೂ ಗಮನ ಹಾಗೂ ಗೌರವವನ್ನು ಬಯಸುತ್ತಾಳೆ. ನಿಮ್ಮ ಸಂತೋಷ ಹಾಗೂ ಸುರಕ್ಷತೆಗಾಗಿ ನೀವು ಸಂಬಂಧದಿಂದ ಏನನ್ನು ಬಯಸುತ್ತೀರಿ ಎಂಬ ಬಗ್ಗೆ ಸ್ಪಷ್ಟತೆ ಹೊಂದಿರುವುದು ಮುಖ್ಯ. ಇಷ್ಟಕ್ಕೂ ಆತ್ಮವಿಶ್ವಾಸ ಹೊಂದಿರುವ ಹೆಣ್ಣು ಯುವಕರಿಗೂ ಹೆಚ್ಚು ಆಕರ್ಷಕಳಾಗಿಯೇ ಕಾಣಿಸುತ್ತಾಳೆ. 

ಇದು #MeToo ಅಲ್ಲ, #MeTime, ನಿಮ್ಮ ಸಮಯ ಎಂಜಾಯ್‌ ಮಾಡಿ...

ಪೂರ್ವಗ್ರಹಗಳನ್ನು ಮೆಟ್ಟಿ ನಿಲ್ಲಿ
ಕಳೆದ ಕೆಲವಾರು ದಶಕಗಳಿಂದ ಮಹಿಳೆಯು ಜೀವನದ ಹಲವಾರು ಮುಖಗಗಳಲ್ಲಿ ಪೂರ್ವಗ್ರಹಗಳನ್ನು ಬೇಧಿಸಲು ಯಶಸ್ವಿಯಾಗಿದ್ದಾಳೆ. ಇದೀಗ ರೊಮ್ಯಾಂಟಿಕ್ ರಿಲೇಶನ್‌ಶಿಪ್‌ನಲ್ಲಿ ಮಹಿಳೆ ಸ್ಥಾನ ಕುರಿತ ಪೂರ್ವಗ್ರಹಗಳನ್ನು ನೆಲಸಮ ಮಾಡುವ ಸಮಯ. ಹಾಗಾಗಿ, ಲವ್ ಲೈಫ್‌ನಲ್ಲಿ ಮಹಿಳೆ ಹೀಗೇ ಇರಬೇಕೆಂಬ ಚೌಕಟ್ಟಿನಿಂದ ಹೊರಬನ್ನಿ. ಏಕೆಂದರೆ ಕಟ್ಟುಪಾಡುಗಳಿದ್ದಲ್ಲಿ ಪ್ರೀತಿ ಇರಲು ಸಾಧ್ಯವಿಲ್ಲ. 

ಉದಾಹರಣೆಯಾಗಿ
ಮಹಿಳೆಯರು ಯಾವಾಗಲೂ ಹೊಸ ತಲೆಮಾರಿಗೆ ಸ್ಫೂರ್ತಿಯ ಮೂಲವಾಗುತ್ತಲೇ ಬಂದಿದ್ದಾರೆ. ಮಕ್ಕಳು ತಮ್ಮ ತಾಯಿ, ಅಕ್ಕಂದಿರನ್ನು ಆದರ್ಶವಾಗಿಟ್ಟುಕೊಂಡು ಬೆಳೆಯುತ್ತವೆ. ಹಾಗಾಗಿ, ಇಂದಿನ ಮಹಿಳೆ ಲವ್ ಲೈಫ್ ವಿಷಯದಲ್ಲಿ ಕೂಡಾ ಎಲ್ಲರಿಗೂ ಉತ್ತಮ ಉದಾಹರಣೆಯಾಗುವ ಅಗತ್ಯವಿದೆ. ಸಂತೋಷದ ಜೀವನ ಕೇವಲ ತ್ಯಾಗದಿಂದಲ್ಲ, ಪ್ರೀತಿ ಹಾಗೂ ಅಗತ್ಯ ಬಿದ್ದಾಗ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸಾಧ್ಯ ಎಂಬುದನ್ನು ಆಕೆ ತೋರಿಸಬೇಕಿದೆ. ಸ್ಟ್ರಾಂಗ್ ಆದ ಮಹಿಳೆ ಎಲ್ಲರಿಗೂ ರೋಲ್ ಮಾಡೆಲ್ ಆಗಬಲ್ಲಳು. ತಮ್ಮ ಲವ್ ಲೈಫನ್ನು ಬೇಕೆಂದಂತೆ ಕಟ್ಟಿಕೊಳ್ಳುವ ಸ್ವಾತಂತ್ರ್ಯವೇ ಮಹಿಳೆ ತನಗೆ ತಾನು ಕೊಟ್ಟುಕೊಳ್ಳಬಹುದಾದ ದೊಡ್ಡ ಸೂಪರ್‌ಪವರ್. 

Latest Videos
Follow Us:
Download App:
  • android
  • ios