ಬೆಸ್ಟ್ ಅಮ್ಮ ಪ್ರಶಸ್ತಿ ಅಪ್ಪನಿಗೆ ಬಂದದ್ದು ಯಾಕೆ ಗೊತ್ತಾ?

ಎಲ್ಲ ಪೋಷಕರೂ ಈ ತಂದೆ ಮಗನಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ. ಬಹುಶಃ ಅಪ್ಪನೊಬ್ಬನಿಗೆ ಬೆಸ್ಟ್ ಅಮ್ಮ ಪ್ರಶಸ್ತಿ ಬಂದಿರೋದು ವಿಶ್ವದಲ್ಲಿ ಇದೇ ಮೊದಲು ಅನಿಸುತ್ತದೆ. ಆದರೆ ಈ ಪ್ರಶಸ್ತಿ ಆದಿತ್ಯ ಅವರಂಥಾ ಪೋಷಕರಿಗೆ ಸಿಗುವ ಮೂಲಕ ಪ್ರಶಸ್ತಿಯ ಮೌಲ್ಯ ಹೆಚ್ಚಿದಂತಾಗಿದೆ. ಜೊತೆಗೆ ಡೌನ್ ಸಿಂಡ್ರೋಮ್ ಮಕ್ಕಳು ಶಾಪವಲ್ಲ, ಅವರು ವರ ಅನ್ನೋದನ್ನು ಈ ಮೂಲಕ ಜಗತ್ತಿಗೇ ಸಾರಿದಂತಾಗಿದೆ. 

Pune man gets best mother of the world award on womens day

ಆದಿತ್ಯ ಪೂನಾದ ನಿವಾಸಿ. ಮದುವೆಯಾಗಿಲ್ಲ. ಆದರೂ ಮಗುವೊಂದಿರಬೇಕು ಅನ್ನುವ ಆಸೆ. ಆದರೆ ಅದು ಅಷ್ಟು ಸುಲಭವಲ್ಲ. ಈ ಕಾಲದಲ್ಲಿ ಸಿಂಗಲ್ ಪೇರೆಂಟ್ ಆಗಿದ್ದು ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ ಅಂದರೆ ಅಂಥವರಿಗೆ ಮಗು ನೀಡೋದಕ್ಕೆ ಕಾನೂನು ಹಿಂದೆ ಮುಂದೆ ನೋಡುತ್ತದೆ. ಅದು ಅಂದುಕೊಂಡಷ್ಟು ಸುಲಭವೂ ಅಲ್ಲ. ಸಿಂಗಲ್ ಪೇರೆಂಟ್ಗೆ ಏನಾದ್ರೂ ಆರೋಗ್ಯ ಸಮಸ್ಯೆ ಬಂದರೆ, ಇನ್ಯಾವುದಾದರೂ ತೊಂದರೆ ಆದರೆ ಆ ಮಗುವನ್ನು ನೋಡಿಕೊಳ್ಳೋದಕ್ಕೆ ಯಾರೂ ಇರಲ್ಲ ಅನ್ನೋದು ಸತ್ಯ. ಆದರೆ ಆದಿತ್ಯ ಅವರಿಗೆ ಮಗುವಿನ ಮೇಲಿನ ಹಂಬಲ ಬಹಳ ಇತ್ತು.

ಆದರೆ ಮದುವೆಯ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳಲು ಮನಸ್ಸು ಒಪ್ಪುತ್ತಿರಲಿಲ್ಲ. ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂದು ಹೊರಟ ಅವರಿಗೆ ಎಷ್ಟೇ ಕಾನೂನು ಸಮಸ್ಯೆ ಇದ್ದರೂ ಅವರು ಛಲ ಬಿಡಲಿಲ್ಲ. ಕೊನೆಗೂ ಒಂದೂವರೆ ವರ್ಷದ ಅವರ ಹೋರಾಟಕ್ಕೆ ಗೆಲುವಾಯ್ತು. ಇದೊಂಥರ ಸ್ಪರ್ಧಿಸಿ ಸಿಗುವ, ಅಹಂಕಾರವನ್ನು ಪೋಷಿಸುವ ಗೆಲುವಲ್ಲ. ಅಹಂಕಾರವನ್ನು ತಣಿಸಿ ಮಾನವೀಯತೆಯನ್ನು ಉದ್ದೀಪಿಸುವ ಗೆಲುವು. ಏಕೆಂದರೆ ಆದಿತ್ಯ ದತ್ತು ತೆಗೆದುಕೊಳ್ಳಲು ಮುಂದಾದದ್ದು ಒಂದು ಡೌನ್ ಸಿಂಡ್ರೋಮ್ ಇರುವ ಮಗುವನ್ನು. ಸ್ವಾರ್ಥ ರಹಿತವಾಗಿ ಇತರ ಮಕ್ಕಳಿಗಿಂತಲೂ ಗಾಢವಾಗಿ ಪ್ರೀತಿಸುವ ಈ ಮಕ್ಕಳನ್ನು ನೋಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಇಬ್ಬರು ಪೋಷಕರಿದ್ದೇ ಬಲು ಕಷ್ಟ. ಇನ್ನು ಇವರು ಒಂಟಿಯಾಗಿ ಮಗುವನ್ನು ನೋಡಿಕೊಳ್ಳುವುದು ಕನಸಿನಲ್ಲೂ ಊಹಿಸಲಸಾಧ್ಯ ಮಾತು. ಆದರೆ ಮನೀಶ್ ಅವರ ಪ್ರೀತಿ, ನಿಸ್ವಾರ್ಥತೆ ಎಷ್ಟು ಗಾಢವಾಗಿತ್ತು ಅಂದರೆ ಅವರು ಸಿಂಗಲ್ ಪೇರೆಂಟ್ ಆಗಿದ್ದರೂ ಆ ಡೌನ್ ಸಿಂಡ್ರೋಮ್ ಮಗುವನ್ನು ನೋಡಿಕೊಳ್ಳೋದು ಅವರಿಗೆ ಕಷ್ಟವಾಗಲೇ ಇಲ್ಲ. ಅವನಿಗೋಸ್ಕರ ತಮ್ಮ ಐಟಿ ಉದ್ಯೋಗವನ್ನು ತೊರೆದರು. ಇಂಥ ವಿಶೇಷ ಮಕ್ಕಳ ಹೆತ್ತವರಿಗೆ ಕೌನ್ಸಿಲಿಂಗ್ ಮಾಡುತ್ತಾ, ಇಂಥ ಮಕ್ಕಳಿಗೋಸ್ಕರ ಜೀವನವನ್ನು ಮುಡಿಪಾಗಿಟ್ಟರು.

ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಸಾಕೇ! 

ಈಗ ಆದಿತ್ಯ ತಿವಾರಿ ಅವನೀಶನನ್ನು ದತ್ತು ಪಡೆದು ನಾಲ್ಕು ವರ್ಷ ಕಳೆದಿದೆ. ’ನನಗೆ ದೇವರು ನೀಡಿದ ಬೆಸ್ಟ್ ಗಿಫ್ಟ್ ನನ್ನ ಮಗ ಅವನೀಶ. ಅಷ್ಟು ಹೋರಾಟದ ಬಳಿಕವಾದರೂ ಅವನನ್ನು ಮಗುವಾಗಿ ಪಡೆದಿರುವುದಕ್ಕೆ ಬಹಳ ಹೆಮ್ಮೆ ಇದೆ. ಇಷ್ಟು ವರ್ಷದಲ್ಲಿ ನಾನವನಿಗೆ ಅಮ್ಮನ ಥರ, ಅಪ್ಪನ ಥರ ಅಂತೆಲ್ಲ ನೋಡಿಕೊಂಡಿದ್ದಿಲ್ಲ. ಒಬ್ಬ ಅಕ್ಕರೆಯ ಪೋಷಕನಾಗಿ ಅವನ ಜೊತೆಗಿದ್ದೆ. ಒಬ್ಬ ಒಳ್ಳೆಯ ಮನುಷ್ಯನಂತೆ ಅವನೊಂದಿಗೆ ಒಡನಾಡುತ್ತಿದ್ದೆ’ ಎನ್ನುತ್ತಾ ತನ್ನ ಪೇರೆಂಟಿಂಗ್ ಅನ್ನು ವಿವರಿಸುತ್ತಾರೆ ಆದಿತ್ಯ.  

ಅವನನ್ನು ಹೇಗೆ ನೋಡ್ಕೊಳ್ಬೇಕು ಅನ್ನೋದನ್ನು ಅವನೇ ನನಗೆ ಹೇಳಿಕೊಟ್ಟ. ಮಗುವನ್ನು ಹೆಣ್ಣೇ ನೋಡ್ಕೊಳ್ಳಬೇಕು. ಅವಳಿಗಷ್ಟೇ ಆ ಕೆಪ್ಯಾಸಿಟಿ ಇದೆ ಅನ್ನೋದೆಲ್ಲ ಸುಳ್ಳು. ಕೆಲವರು ತಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡ ಮಿಥ್. ಇದರಿಂದ ಬಹಳ ತೊಂದರೆಗೊಳಗಾದೆ. ಆದರೆ ಈಗ ಅವನೀಶ್ ನಿಂದಾಗಿ ಹ್ಯಾಪಿಯೆಸ್ಟ್ ಪೇರೆಂಟ್ ಆಗಿದ್ದೀನಿ’ ಅಂತಾರೆ ಆದಿತ್ಯ.

ಹ್ಯಾಪಿ ವುಮನ್ಸ್ ಡೇ ಅಂದ್ರೆ ನಂಗೆ ಸಿಟ್ಟು ಬರೋದ್ಯಾಕೆ? 

ಎಲ್ಲ ಪೋಷಕರೂ ಈ ತಂದೆ ಮಗನಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ. ಬಹುಶಃ ಅಪ್ಪನೊಬ್ಬನಿಗೆ ಬೆಸ್ಟ್ ಅಮ್ಮ ಪ್ರಶಸ್ತಿ ಬಂದಿರೋದು ವಿಶ್ವದಲ್ಲಿ ಇದೇ ಮೊದಲು ಅನಿಸುತ್ತದೆ. ಆದರೆ ಈ ಪ್ರಶಸ್ತಿ ಆದಿತ್ಯ ಅವರಂಥಾ ಪೋಷಕರಿಗೆ ಸಿಗುವ ಮೂಲಕ ಪ್ರಶಸ್ತಿಯ ಮೌಲ್ಯ ಹೆಚ್ಚಿದಂತಾಗಿದೆ. ಜೊತೆಗೆ ಡೌನ್ ಸಿಂಡ್ರೋಮ್ ಮಕ್ಕಳು ಶಾಪವಲ್ಲ, ಅವರು ವರ ಅನ್ನೋದನ್ನು ಈ ಮೂಲಕ ಜಗತ್ತಿಗೇ ಸಾರಿದಂತಾಗಿದೆ.  

Latest Videos
Follow Us:
Download App:
  • android
  • ios