Asianet Suvarna News Asianet Suvarna News

ಮಕ್ಕಳನ್ನು ಕೊಲೀಗ್ಸ್‌ ಥರ ಟ್ರೀಟ್‌ ಮಾಡಬಹುದಾ?

ವರ್ಕ್ ಫ್ರಂ ಹೋಮ್‌ ಮಾಡುವ ಎಷ್ಟೋ ಜನಕ್ಕೆ ದೊಡ್ಡ ಸಮಸ್ಯೆಯಾಗೋದು ಮಕ್ಕಳು. ಕೆಲಸದ ಏಕಾಗ್ರತೆ ಕೆಡಿಸುತ್ತಾ, ತಮ್ಮ ಜೊತೆಗೆ ಆಟವಾಡಲು ಕರೆಯುತ್ತಾ, ಒಂದಿಲ್ಲೊಂದು ವಿಷಯದಲ್ಲಿ ಸದಾ ಸಮಸ್ಯೆ ತಂದೊಡ್ಡುತ್ತಿರುತ್ತಾರೆ. 

Can we treat our kids as colleagues in lockdown work from home
Author
Bangalore, First Published Apr 23, 2020, 3:15 PM IST

ಈ ವಿಷಯದಲ್ಲಿ ಮಕ್ಕಳನ್ನೂ ದೂಷಿಸುವಂತಿಲ್ಲ. ಏಕೆಂದರೆ ಹಕ್ಕಿಗಳಂತೆ ಕೂತಲ್ಲಿ ಕೂರದ ಅವರಿಗೆ ಲಾಕ್‌ಡೌನ್‌ ದೊಡ್ಡ ಸಮಸ್ಯೆಯೇ. ಇಂಥಾ ಟೈಮ್‌ನಲ್ಲಿ ಮಕ್ಕಳನ್ನು ಕೊಲೀಗ್ಸ್‌ ಥರ ನೋಡೋ ಪದ್ಧತಿಯನ್ನು ಕೆಲವರು ಶುರು ಮಾಡಿದ್ದಾರೆ. ‘ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡ್ತಿದ್ದೀವಿ.

#WorkFromHome: ಆನ್‌ಲೈನ್‌ನಲ್ಲೇ ಮಂತ್ರಪಠಣ ! ಶ್ರಾದ್ಧಕರ್ಮ..!!

ಇದೀಗ ಆಫೀಸ್‌, ನಾನು ಇಂತಿಷ್ಟುಟೈಮ್‌ ಒಳಗೆ ಇಷ್ಟುಕೆಲಸ ಮುಗಿಸಬೇಕು. ನೀನೂ ಇಷ್ಟುಕೆಲಸ ಮುಗಿಸಬೇಕು’ ಅಂತ ಆಟದ ರೀತಿಯಲ್ಲೇ ವರ್ಕ್ ಫ್ರಂ ಹೋಮ್‌ ಮಾಡೋ ಪ್ರಯತ್ನ ಮಾಡ್ತಿದ್ದಾರೆ. ಮಕ್ಕಳಿಗೂ ಒಂದಿಷ್ಟುಕೆಲಸ ಕೊಟ್ಟು ಜೊತೆಗೆ ಕೂರಿಸಿದ್ದಾರೆ. ಈ ಪ್ರಯೋಗ ಹೇಳಿಕೊಳ್ಳುವಷ್ಟುಯಶಸ್ವಿಯಾಗದಿದ್ದರೂ ಒಂದು ಮಟ್ಟಿನ ಕೆಲಸದ ವಾತಾವರಣ ಸೃಷ್ಟಿಸಿದೆ ಅಂತಾರೆ ಕೆಲವು ಪೋಷಕರು.

ಮನೆಯಲ್ಲಿ ನೀವೂ ಈ ಥರ ಮಾಡ್ಬೇಕು ಅಂದರೆ ಕೆಲವು ಟಿಫ್ಸ್‌

- ಆರಂಭದಲ್ಲಿ ಮಗುವಿಗೆ ನಿಮ್ಮ ಆಫೀಸ್‌ ನ ವಾತಾವರಣ ಹೇಗಿರುತ್ತದೆ. ಅಲ್ಲಿ ನೀವು ಹೇಗಿರ್ತೀರಿ, ಮಗು ಹೇಗಿರಬೇಕು ಅನ್ನೋದನ್ನು ವಿವರಿಸಿ,

- ಮಗುವಿಗೂ ಒಂದಿಷ್ಟುಟಾಸ್ಕ್‌ ಗಳನ್ನು ಕೊಡಿ.

ಇನ್ನು ನಿಮಗೆ ವರ್ಕ್ ಫ್ರಂ ಹೋಂ ಫಿಕ್ಸ್?

- ಟಾಸ್ಕ್‌ ಕಂಪ್ಲೀಟ್‌ ಮಾಡಿದರೆ ಅರ್ಧ ಗಂಟೆ ಆಟ ಆಡುವ ಅಥವಾ ಇನ್ನಿತರ ರಿವಾರ್ಡ್‌ ಕೊಡಿ.

- ಮಗುವಿಗೂ ಆಫೀಸ್‌ ಕೆಲಸದ ಚಾಲೆಂಜ್‌ ಗಳನ್ನು ವಿವರಿಸಿ. ಈ ಚಾಲೆಂಜ್‌ ಫೇಸ್‌ ಮಾಡದಿದ್ರೆ ಏನಾಗಬಹುದು ಅಂತ ಹೇಳಿ. ಹಾಗಂತ ಹೆದರಿಸಬೇಡಿ.

- ಆಫೀಸ್‌ ನಲ್ಲಿ ಕೊಲೀಗ್ಸ್‌ ಜೊತೆಗೆ ವ್ಯವಹರಿಸುವಂತೆ ಮಗುವಿನ ಜೊತೆಗೂ ಮಾತನಾಡಿ.
 

Follow Us:
Download App:
  • android
  • ios