ಜೈಲಿನಿಂದ ಹೊರಬಂದು ಅಂಕಿ ಎಣಿಸುತ್ತಿರುವ ಚಿದಂಬರಂ| ಪತ್ರಿಕಾಗೋಷ್ಠಿಯಲ್ಲಿ ಅಂಕಿ-ಸಂಖ್ಯೆ ಮಾತನಾಡಿದ ಕಾಂಗ್ರೆಸ್ ನಾಯಕ| ಜಿಡಿಪಿ ಕುಂಠಿತಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಚಿದಂಬರಂ| ‘ಆರ್ಥಿಕ ಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾರ್ಗೋಪಾಯವಿಲ್ಲ’| ‘ಆರ್ಥಿಕ ವೈಫಲ್ಯದ ಆರೋಪದಿಂದ ದೂರ ಸರಿಯುತ್ತಿರುವ ಪ್ರಧಾನಿ ಮೋದಿ’|

ನವದೆಹಲಿ(ಡಿ.05): ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ದೇಶದ ಜಿಡಿಪಿ ಕುಂಠಿತಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜೈಲಿನಿಂದ ಬಿಡುಗಡೆಗೊಂಡ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಿದಂಬರಂ, ಯುಪಿಎ ಅವಧಿಯಲ್ಲಿ ಶೇ.8 ರಷ್ಟಿದ್ದ ಜಿಡಿಪಿ ಬೆಳವಣಿಗೆ, ಇದೀಗ 4.5ಕ್ಕೆ ತಲುಪಿರುವುದು ದುರದೃಷ್ಟಕರ ಎಂದು ಹರಿಹಾಯ್ದರು.

ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!

Scroll to load tweet…

ಆರ್ಥಿಕ ಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾರ್ಗೋಪಾಯವಿಲ್ಲ, ಇದೇ ಕಾರಣಕ್ಕೆ ಅವರು ತಪ್ಪು ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದರು.

ಸಣ್ಣ ಸಣ್ಣ ವಿಷಯಗಳಿಗೂ ಕ್ರೆಡಿಟ್ ಪಡೆಯುವ ಪ್ರಧಾನಿ ಮೋದಿ, ಆರ್ಥಿಕ ವೈಫಲ್ಯದ ಆರೋಪದಿಂದ ದೂರ ಸರಿಯುತ್ತಿದ್ದಾರೆ ಎಂದು ಚಿದಂಬರಂ ಹರಿಹಾಯ್ದರು.

Scroll to load tweet…

ಜಿಡಿಪಿ ವೃದ್ಧಿಗೆ ಕ್ರಮ ಕೈಗೊಳ್ಳದಿರುವುದರಿಂದ ಮುಂದಿನ ದಿನಗಳಲ್ಲಿ ದೇಶ ದೊಡ್ಡ ಬೆಲೆ ತೆರುವುದು ನಿಶ್ಚಿತ ಎಂದು ಚಿದಂಬರಂ ಆತಂಕ ವ್ಯಕ್ತಪಡಿಸಿದರು.

ಈರುಳ್ಳಿ ತಿನ್ನೋ ಮನೆತನದವಳಲ್ಲ: ನಿರ್ಮಲಾ ಸೀತಾರಾಮನ್ ಸೊಕ್ಕು ಕರಗ್ತಿಲ್ಲ!

ಇದೇ ವೇಳೆ ನಾನು ಈರುಳ್ಳಿ ಬಳಸುವ ಮನೆತನದವಳಲ್ಲ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಚಿದಂಬರಂ ಖಂಡಿಸಿದರು.

Scroll to load tweet…

ನಿರ್ಮಲಾ ಸೀತಾರಾಮನ್ ಈರುಳ್ಳಿ ತಿನ್ನುವುದಿಲ್ಲ ಎಂದಾದರೆ ಅವೊಕಾಡೊ(ಬೆಣ್ಣೆ ಹಣ್ಣು) ತಿನ್ನುತ್ತಾರೆಯೇ ಎಂದು ಚಿದಂಬರಂ ಲೇವಡಿ ಮಾಡಿದ್ದಾರೆ.

ಡಿಸೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: