Canine Hero Dog: ಆ ನಾಯಿಗೆ ಮೊದಲೇ ತಿಳಿದಿತ್ತ ಮಹಾ ವಿನಾಶದ ಮುನ್ಸೂಚನೆ: 67 ಜನ ಚಿರನಿದ್ರೆಗೆ ಜಾರುವುದನ್ನು ತಪ್ಪಿಸಿತ್ತು ಶ್ವಾನ

ಹಿಮಾಚಲ ಪ್ರದೇಶದಲ್ಲಿ ರಕ್ಕಸ ಮಳೆಯ ನಡುವೆ ಶ್ವಾನವೊಂದು 20 ಕುಟುಂಬಗಳ 67 ಜನರ ಪ್ರಾಣ ಉಳಿಸಿದೆ. ಮೂಕಪ್ರಾಣಿ ಮನುಷ್ಯರ ಪ್ರಾಣ ರಕ್ಷಿಸಿದ ಕತೆ ಇದು.

Share this Video
  • FB
  • TW
  • Linkdin
  • Whatsapp

ವರುಣಾಕ್ರೋಶಕ್ಕೆ ನಲುಗಿ ಹೋಗಿದೆ ಹಿಮಾಚಲ ಪ್ರದೇಶ.. ಮುನಿದ ಮಳೆಗೆ ಮಸಣವಾಗಿದೆ ಆ ರಾಜ್ಯ.. ಜವರಾಯನಂತೆ ಅಬ್ಬರಿಸಿದ್ದ ವರುಣ, 67 ಜನರ ಪ್ರಾಣ ಬಲಿ ಪಡೆಯೋಕೆ ಮುಂದಾಗಿದ್ದ.. ಆದ್ರೆ ಒಂದು ಶ್ವಾನ, ಅಷ್ಟೂ ಜನರ ಪ್ರಾಣವನ್ನ ಅಲ್ಲಿ ಕಾಪಾಡಿದೆ.. ಆ ಜನರ ಪಾಲಿಗೆ ದೇವರ ರೂಪವಾಗಿ ನಿಂತಿದೆ.. ನಟ್ಟ ನಡುರಾತ್ರಿ.. ಸುರಿಯುತ್ತಿತ್ತು ರಣ ರಕ್ಕಸ ಮಳೆ.. ಬೊಗಳಿತ್ತು ನಾಯಿ..ತಪ್ಪಿಸಿತ್ತು ಪ್ರಾಣಬಲಿ..! ಶ್ವಾನವೊಂದು 20 ಕುಟುಂಬದ 67 ಜನರ ಜೀವ ಉಳಿಸಿದ್ದೇ ರಣರೋಚಕ..! ಅಂದು ಆನೆ..ಇಂದು ಶ್ವಾನ.. ಪ್ರಾಣ ಉಳಿಸೋ ಮೂಕಪ್ರಾಣಿಗಳು..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ರಾಕ್ಷಸ ಮಳೆ.. ದೈವಶ್ವಾನ