)
ಸಿದ್ದೇಶ್ವರ್ ಹುಟ್ಟುಹಬ್ಬದಲ್ಲಿ ಯಡಿಯೂರಪ್ಪ ಟಾರ್ಗೆಟ್! ದಾವಣಗೆರೆಯಲ್ಲಿ ಬಿಜೆಪಿ ರೆಬೆಲ್ಸ್ ಶಕ್ತಿ ಪ್ರದರ್ಶನ
ದಾವಣಗೆರೆಯಲ್ಲಿ ಜಿಎಂ ಸಿದ್ದೇಶ್ವರ್ ಹುಟ್ಟುಹಬ್ಬದ ನೆಪದಲ್ಲಿ ಬಿಜೆಪಿ ರೆಬೆಲ್ಸ್‌ಗಳು ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಗೋವಿಂದ್ ಕಾರಜೋಳ ಉಪಸ್ಥಿತಿಯು ಅಚ್ಚರಿ ಮೂಡಿಸಿದೆ. ಹಲವು ನಾಯಕರು ಗೈರಾಗಿದ್ದಾರೆ.
ಬೆಂಗಳೂರು (ಜು.9): ದಾವಣಗೆರೆಯಲ್ಲಿ ಬಿಜೆಪಿ ರೆಬೆಲ್ಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹಿರಿಯ ನಾಯಕ ಸಿದ್ದೇಶ್ವರ್ ಹುಟ್ಟುಹಬ್ಬದ ನೆಪದಲ್ಲಿ ಅದ್ಧೂರಿ ಸಮಾವೇಶ ಆಯೋಜನೆ ಮಾಡಲಾಗಿದೆ. ಇದರಲ್ಲಿ ಯಡಿಯೂರಪ್ಪ ಅವರನ್ನೇ ಟಾರ್ಗೆಟ್ ಮಾಡಲಾಗಿದೆ. ಅದರೊಂದಿಗೆ ಒಗ್ಗಟ್ಟಿನ ರಣಕಹಳೆ ಊದಿದ್ದಾರೆ.
ರೆಬಲ್ಸ್ ಟೀಮ್‌ನಲ್ಲಿ ಗೋವಿಂದ್ ಕಾರಜೋಳ ಹಾಜರಿ ಅಚ್ಚರಿ ಮೂಡಿಸಿದೆ. BJP ರೆಬೆಲ್ಸ್ ಆಹ್ವಾನವಿದ್ದರೂ, ತಟಸ್ಥ ನಾಯಕರು ಅಂತರ ಕಾಯ್ದುಕೊಂಡಿದ್ದರು. ವಿ. ಸೋಮಣ್ದ, ರಾಮುಲು, ಸುನಿಲ್ ಕುಮಾರ್ ಗೈರು ಆಗಿದ್ದಾರೆ.ಸಮಾವೇಶಕ್ಕೆ ಗೈರಾದ ಯತ್ನಾಳ್, ಜಾರಕಿಹೊಳಿ ಕೂಡ ಗೈರಾಗಿದ್ದಾರೆ.
ಇಂದ್ರಪ್ರಸ್ಥದ ರಾಜರಹಸ್ಯ: ಟಗರು-ಬಂಡೆ ನಿಗೂಢ ಹೆಜ್ಜೆ?
BJP ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಮಧ್ಯೆ ಒಗ್ಗಟ್ಟಿನ ಕಹಳೆ ಊದಾಲಾಗಿದ್ದು, ಜಿಎಂ ಸಿದ್ದೇಶ್ವರ್ 74ನೇ ಬರ್ತಡೇ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಂಧಾನ ಸಭೆ ಮಾಡಿದ್ರೂ ಬಿಜೆಪಿ ರೆಬೆಲ್ಸ್ ಡೋಂಟ್ ಕೇರ್ ಎಂದಿದ್ದಾರೆ.